Champions Trophy 2025: ''ತುಂಬಾ ಭಯ ಇತ್ತು...''; ಮ್ಯಾಚ್ ವಿನ್ನರ್ Varun Chakaravarthy ಮಾತು

ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು.
Varun Chakaravarthy
ವರುಣ್ ಚಕ್ರವರ್ತಿ
Updated on

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ವರುಣ್ ಚಕ್ರವರ್ತಿ ಪಂದ್ಯದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249ರನ್ ಕಲೆಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.

ಮ್ಯಾಚ್ ವಿನ್ನರ್

ನ್ಯೂಜಿಲೆಂಡ್ ಸೋಲಿನಲ್ಲಿ ಭಾರತದ ವರುಣ್ ಚಕ್ರವರ್ತಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು. ತಮ್ಮ ಪಾಲಿನ 10 ಓವರ್ ಪೂರ್ಣಗೊಳಿಸಿದ ವರುಣ್ ಚಕ್ರವರ್ತಿ 4.20 ಸರಾಸರಿಯಲ್ಲಿ 42 ರನ್ ನೀಡಿ 5 ವಿಕೆಟ್ ಪಡೆದರು.

Varun Chakaravarthy
Champions Trophy 2025: Varun Chakaravarthy ಐತಿಹಾಸಿಕ ದಾಖಲೆ; 9 ವಿಕೆಟ್ ಸ್ಪಿನ್ನರ್ ಗಳ ಪಾಲು, Shami ರೆಕಾರ್ಡ್ ಉಡೀಸ್!

ತುಂಬಾ ಭಯ ಇತ್ತು

ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವರುಣ್ ಚಕ್ರವರ್ತಿ, 'ಮೊದಲನೆಯದಾಗಿ, ಪಂದ್ಯದ ಆರಂಭಿಕ ಹಂತಗಳಲ್ಲಿ ನನಗೆ ಸ್ವಲ್ಪ ಆತಂಕವಿತ್ತು. ನಾನು ಭಾರತ ತಂಡದ ಪರ ಏಕದಿನ ಪಂದ್ಯಗಳನ್ನು ಆಡಿಲ್ಲ, ಆದರೆ ಆಟ ಮುಂದುವರೆದಂತೆ ನನಗೆ ಸ್ವಲ್ಪ ಸಮಾಧಾನವಾಯಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯಾ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರ ಬೆಂಬಲ ನನಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ.

ಅಂತೆಯೇ, 'ನಿನ್ನೆ ರಾತ್ರಿ ನನಗೆ ಪ್ಲೇಯಿಂಗ್ ಎಲೆವನಲ್ಲಿ ಸ್ಥಾನ ಸಿಕ್ಕಿದೆ ಎಂದು ತಿಳಿಯಿತು. ನಾನು ಖಂಡಿತವಾಗಿಯೂ ದೇಶಕ್ಕಾಗಿ ಆಡಬೇಕೆಂದು ನಿರೀಕ್ಷಿಸುತ್ತಿದ್ದೆ. ಆದರೆ ಮತ್ತೊಂದೆಡೆ ನಾನು ಆತಂಕಕ್ಕೊಳಗಾಗಿದ್ದೆ. ದುಬೈ ಪಿಚ್ ರ‍್ಯಾಂಕ್ ಟರ್ನರ್ ಅಲ್ಲ, ಆದರೆ ನೀವು ಸರಿಯಾದ ಸ್ಥಳಗಳಲ್ಲಿ ಬೌಲಿಂಗ್ ಮಾಡಿದರೆ ಅದು ಸಹಾಯ ಮಾಡುತ್ತಿತ್ತು. ಕುಲ್ದೀಪ್, ಜಡ್ಡು (ರವೀಂದ್ರ ಜಡೇಜಾ) ಮತ್ತು ಅಕ್ಸರ್ ಬೌಲಿಂಗ್ ಮಾಡಿದ ರೀತಿ ಇದಕ್ಕೆ ಉದಾಹರಣೆ. ವೇಗಿಗಳೂ ಸಹ ಉತ್ತಮವಾಗಿ ಬೌಲಿಂಗ್ ಮಾಡಿದರು. ಈ ಗೆಲುವು ಒಟ್ಟಾರೆ ತಂಡದ ಪ್ರಯತ್ನವಾಗಿತ್ತು ಎಂದು ಹೇಳಿದರು.

ವರುಣ್ ಚಕ್ರವರ್ತಿ ಶ್ಲಾಘಿಸಿದ ನಾಯಕ ರೋಹಿತ್ ಶರ್ಮಾ

ಇದೇ ವೇಳೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ವರುಣ್ ಚಕ್ರವರ್ತಿ ಪ್ರದರ್ಶನವನ್ನು ಕೊಂಡಾಡಿದರು. 'ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ನ್ಯೂಜಿಲೆಂಡ್ ಉತ್ತಮ ಕ್ರಿಕೆಟ್ ಆಡುತ್ತಿರುವ ಉತ್ತಮ ತಂಡ. ಉತ್ತಮ ಫಲಿತಾಂಶ ಪಡೆಯಲು ನಾವು ಪರಿಪೂರ್ಣ ಆಟ ಆಡಿದ್ದೇವೆ. ಆ ಹಂತದಲ್ಲಿ (30/3 ನಂತರ) ಜೊತೆಯಾಟ ನಿರ್ಮಿಸುವುದು ಮುಖ್ಯವಾಗಿತ್ತು. ಅಯ್ಯರ್, ಅಕ್ಸರ್ ಮತ್ತು ಹಾರ್ದಿಕ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ನಾವು ಉತ್ತಮ ಮೊತ್ತವನ್ನು ತಲುಪಿದ್ದೇವೆ ಎಂದು ನಾನು ಭಾವಿಸಿದೆ ಎಂದರು.

ಉತ್ತಮ ಬೌಲಿಂಗ್ ಪಡೆ

ಇದೇ ವೇಳೆ ಈ ಮೊತ್ತವನ್ನು ಕೂಡ ರಕ್ಷಿಸುವ ಗುಣಮಟ್ಟ ನಮ್ಮ ಬೌಲಿಂಗ್‌ನಲ್ಲಿದೆ. ಚಕ್ರವರ್ತಿ ಅವರಲ್ಲಿ ಏನೋ ವ್ಯತ್ಯಾಸವಿದೆ. ಆದ್ದರಿಂದ ಅವರು ಏನು ನೀಡಬಹುದೆಂದು ನೋಡಲು ಪ್ರಯತ್ನಿಸಲು ಬಯಸಿದ್ದೆ. ಮುಂದಿನ ಪಂದ್ಯದ ಬಗ್ಗೆ ನಾವು ಇನ್ನೂ ಹೆಚ್ಚು ಯೋಚಿಸಿಲ್ಲ, ಆದರೆ ಈಗ ಯಾರನ್ನು ಆಯ್ಕೆ ಮಾಡಬೇಕು ಎಂದು ತಲೆನೋವು ಶುರುವಾಗಿದೆ. ಇದೂ ಕೂಡ ತಂಡಕ್ಕೆ ಒಳ್ಳೆಯದೇ.. ಪ್ರತಿ ಪಂದ್ಯವನ್ನು ಗೆಲ್ಲುವುದು ಮತ್ತು ಪ್ರಮುಖ ಪಂದ್ಯಾವಳಿಯಲ್ಲಿ ಎಲ್ಲವನ್ನೂ ಸರಿಯಾಗಿ ಮಾಡುವುದು ನಿರ್ಣಾಯಕ. ತಪ್ಪುಗಳನ್ನು ತ್ವರಿತವಾಗಿ ಸರಿಪಡಿಸುವುದು ಮುಖ್ಯ, ಮತ್ತು ನಿಮ್ಮ ತಂಡವು ಮೇಲಕ್ಕೆ ಹೋಗುತ್ತದೆಯೇ ಅಥವಾ ಕೆಳಕ್ಕೆ ಹೋಗುತ್ತದೆಯೇ ಎಂದು ನಮಗೆ ತಿಳಿದಿರುವುದು ಅಲ್ಲಿಯೇ. ಇದು ಉತ್ತಮ ಪಂದ್ಯವಾಗಿರುತ್ತದೆ ಎಂದರು.

ಅಂತೆಯೇ ಆಸ್ಟ್ರೇಲಿಯಾ ಕುರಿತು ಮಾತನಾಡಿದ ರೋಹಿತ್ ಶರ್ಮಾ, 'ಆಸ್ಟ್ರೇಲಿಯಾ ಐಸಿಸಿ ಟೂರ್ನಮೆಂಟ್‌ಗಳನ್ನು ಚೆನ್ನಾಗಿ ಆಡುವ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಆದರೆ ಅದು ನಮ್ಮ ಬಗ್ಗೆ ಮತ್ತು ಆ ನಿರ್ದಿಷ್ಟ ದಿನದಂದು ನಾವು ಉತ್ತಮವಾಗಿ ಮಾಡಲು ಬಯಸುವುದರ ಬಗ್ಗೆ. ಇದು ಉತ್ತಮ ಸ್ಪರ್ಧೆಯಾಗಿರುತ್ತದೆ, ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com