
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಔಟಾದರೂ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.
ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಭಾರತ ಬ್ಯಾಟಿಂಗ್ ಆರಂಭಿಸಿದ್ದ ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ರೋಹಿತ್ ಶರ್ಮಾ ಅಲ್ಪಾವಧಿಯಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ನಂತರ ಮ್ಯಾಟ್ ಹೆನ್ರಿ ಎಸೆತದಲ್ಲಿ 15 ರನ್ ಗಳಿಸಿ ಔಟಾದರು. ಬೇಗನೆ ಔಟಾದರೂ ರೋಹಿತ್ ಈಗ ವೆಸ್ಟ್ ಇಂಡೀಸ್ ಐಕಾನ್ ಕ್ರಿಸ್ ಗೇಲ್ ಅವರ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ್ದು ಒಂದೇ ಒಂದು ಸಿಕ್ಸ್. ಈ ಮೂಲಕ ಐಸಿಸಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ನಾಯಕ ಗೇಲ್ ಅವರ 64 ಸಿಕ್ಸರ್‌ಗಳನ್ನು ಸಮಗಟ್ಟಿದ್ದಾರೆ.
ಐಸಿಸಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರು ಪಟ್ಟಿ
1 - ರೋಹಿತ್ ಶರ್ಮಾ: 41 ಪಂದ್ಯಗಳಲ್ಲಿ 64 ಸಿಕ್ಸರ್‌ಗಳು
2 - ಕ್ರಿಸ್ ಗೇಲ್: 52 ಪಂದ್ಯಗಳಲ್ಲಿ 64 ಸಿಕ್ಸರ್‌ಗಳು
3 - ಗ್ಲೆನ್ ಮ್ಯಾಕ್ಸ್‌ವೆಲ್: 34 ಪಂದ್ಯಗಳಲ್ಲಿ 48 ಸಿಕ್ಸರ್‌ಗಳು
4 - ಡೇವಿಡ್ ಮಿಲ್ಲರ್: 33 ಪಂದ್ಯಗಳಲ್ಲಿ 45 ಸಿಕ್ಸರ್‌ಗಳು
5 - ಸೌರವ್ ಗಂಗೂಲಿ: 34 ಪಂದ್ಯಗಳಲ್ಲಿ 42 ಸಿಕ್ಸರ್‌ಗಳು
ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆಯ ಸಮೀಪದಲ್ಲಿದ್ದಾರೆ. ಅವರ ಹೆಸರಲ್ಲಿ 340 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿ ಮುಂದಿದ್ದಾರೆ. ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ರೋಹಿತ್‌ಗಿಂತ 11 ಸ್ಥಾನ ಮುಂದಿದ್ದಾರೆ.
Advertisement