ನನ್ನ ಹಣ ನನಗೆ ಕೊಡಿಸಿ: ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಂದೆ ಗೋಗರೆದ ಶಾಹಿದ್ ಅಫ್ರಿದಿ; BCBಗೆ ದೂರು!

ಈ ಇಡೀ ವಿಷಯ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್ 2025) ಗೆ ಸಂಬಂಧಿಸಿದೆ.
Shahid Afridi
ಶಾಹಿದ್ ಅಫ್ರಿದಿ
Updated on

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಣದ ವಿಷಯವಾಗಿ ಅಲೆದಾಡುವಂತಾಗಿದೆ. ಈಗ ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಅವರು ಪ್ರಧಾನಿ ಮೊಹಮ್ಮದ್ ಯೂನಸ್ ಗೆ ದೂರು ನೀಡುವ ಸಾಧ್ಯತೆಯೂ ಇದೆ. ಶಾಹಿದ್ ಅಫ್ರಿದಿಯಂತಹ ಶ್ರೇಷ್ಠ ಆಟಗಾರ ಹಣಕ್ಕಾಗಿ ಪ್ರಧಾನಿಯ ಬಳಿ ದೂರು ನೀಡುವ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿ ಏನಾಯಿತು? ಇಲ್ಲಿದೆ ಮಾಹಿತಿ...

ಈ ಇಡೀ ವಿಷಯ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್ 2025) ಗೆ ಸಂಬಂಧಿಸಿದೆ. ವಾಸ್ತವವಾಗಿ, ಇತ್ತೀಚೆಗೆ ನಡೆದ ಬಾಂಗ್ಲಾದೇಶ ಟಿ-20 ಲೀಗ್‌ನಲ್ಲಿ, ಶಾಹಿದ್ ಚಿತ್ತಗಾಂಗ್ ಕಿಂಗ್ಸ್ ತಂಡದ ಮಾರ್ಗದರ್ಶಕ ಮತ್ತು ಬ್ರಾಂಡ್ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರಿಗೆ 1 ಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ 87,33,155 ರೂ.) ಸಿಗಬೇಕಿತ್ತು. ಆದರೆ ಇಲ್ಲಿಯವರೆಗೆ ಅವರಿಗೆ ಆ ಮೊತ್ತ ಸಿಕ್ಕಿಲ್ಲ. ಬಿಡಿನ್ಯೂಸ್ 24 ವರದಿಯ ಪ್ರಕಾರ, ಅಫ್ರಿದಿಗೆ ಕೇವಲ 19 ಸಾವಿರ ಡಾಲರ್ (ರೂ. 16,59,368) ನೀಡಲಾಗಿದೆ. ಉಳಿದ ಹಣ ಕೊಡದೆ ಸತಾಯಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮಾಜಿ ಕ್ರಿಕೆಟಿಗ ಚಿತ್ತಗಾಂಗ್ ಕಿಂಗ್ಸ್ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಅಧ್ಯಕ್ಷರಿಗೂ ದೂರು ನೀಡಿದ್ದಾರೆ.

ಬಿಸಿಬಿ ಅಧ್ಯಕ್ಷರಿಗೆ ದೂರು ನೀಡಿದ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ಶಾಹಿದ್ ಅಫ್ರಿದಿ ಪ್ರಧಾನಿ ಅಥವಾ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರರಿಗೆ ದೂರು ನೀಡಬಹುದು. ಆದರೆ ಈ ಸಂದರ್ಭದಲ್ಲಿ, ಚಿತ್ತಗಾಂಗ್ ಕಿಂಗ್ಸ್ ತಂಡದ ಮಾಲೀಕ ಸಮೀರ್ ಖಾದರ್ ಚೌಧರಿ, ಆಫ್ರಿದಿ ಅವರಿಗೆ ಅವರ ಹಣವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಸಮೀರ್ ಪ್ರಕಾರ, ಶಾಹಿದ್‌ಗೆ ಈಗಾಗಲೇ 21 ಸಾವಿರ ಡಾಲರ್ (ರೂ. 18,34,336) ನೀಡಲಾಗಿದೆ, ಉಳಿದ ಮೊತ್ತವನ್ನು ಶೀಘ್ರದಲ್ಲೇ ನೀಡುವಂತೆ ಎಂದರು.

Shahid Afridi
'ನೀನು ಇಲ್ಲಿಂದ ಆಚೆ ಹೋಗು': ಮೈದಾನದಲ್ಲಿ ದಿನೇಶ್ ಕಾರ್ತಿಕ್‌ಗೆ ರೋಹಿತ್ ಶರ್ಮಾ ಗದರಿದ್ದೇಕೆ? ವಿಡಿಯೋ!

ಶಾಹಿದ್ ಅಫ್ರಿದಿ ಅವರ ಮಾರ್ಗದರ್ಶನದಲ್ಲಿ ಚಿತ್ತಗಾಂಗ್ ಕಿಂಗ್ಸ್ ಬಿಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿತು. ಅವರು ಈ ಋತುವಿನ ರನ್ನರ್ ಅಪ್ ಆಗಿದ್ದರು. ಫೆಬ್ರವರಿ 7 ರಂದು ಚಿತ್ತಗಾಂಗ್ ಕಿಂಗ್ಸ್ ಮತ್ತು ಫಾರ್ಚೂನ್ ಬಾರಿಶಾಲ್ ನಡುವೆ ಪ್ರಶಸ್ತಿ ಪಂದ್ಯ ನಡೆಯಿತು. ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಫಾರ್ಚೂನ್ ಬಾರಿಶಾಲ್ ತಂಡ 19.3 ಓವರ್‌ಗಳಲ್ಲಿ 195 ರನ್ ಗಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬರಿಶಾಲ್ ಪರ ನಾಯಕ ತಮೀಮ್ ಇಕ್ಬಾಲ್ 29 ಎಸೆತಗಳಲ್ಲಿ 54 ರನ್ ಗಳಿಸಿ ಸ್ಫೋಟಕ ಆಟವಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com