
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯ ದಾಖಲೆ ಬರೆದಿದ್ದು, Champions Trophy ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 2ನೇ ಗರಿಷ್ಟ ರನ್ ದಾಖಲಾಗಿದೆ.
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 363 ರನ್‌ಗಳ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 312 ರನ್ ಗಳನ್ನಷ್ಟೇ ಶಕ್ತವಾಯಿತು. ಆ ಮೂಲಕ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
Champions Trophy ಇತಿಹಾಸದಲ್ಲೇ 2ನೇ ಗರಿಷ್ಟ ರನ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 362 ರನ್ ಕಲೆಹಾಕಿದರೆ, ದಕ್ಷಿಣ ಆಫ್ರಿಕಾ 312 ರನ್ ಗಳಿಸಿತು. ಆ ಮೂಲಕ ಈ ಪಂದ್ಯದ ಎರಡೂ ಇನ್ನಿಂಗ್ಸ್ ಗಳಿಂದ ಬರೊಬ್ಬರಿ 674 ರನ್ ಗಳು ಹರಿದು ಬಂದಿದ್ದು, ಇದು Champions Trophy ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ದಾಖಲಾದ 2ನೇ ಗರಿಷ್ಟ ರನ್ ಗಳಿಕೆಯಾಗಿದೆ.
ಇದಕ್ಕೂ ಮೊದಲು ಇದೇ ಲಾಹೋರ್ ಮೈದಾನದಲ್ಲಿ ಆಸ್ಟ್ಕೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಬರೊಬ್ಬರಿ 707 ರನ್ ಗಳು ಹರಿದು ಬಂದಿದ್ದವು. ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 351ರನ್ ಪೇರಿಸಿದರೆ, ಆ ಮೊತ್ತವನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 356ರನ್ ಗಳಿಸಿ ಜಯಭೇರಿ ಭಾರಿಸಿತ್ತು. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ದಾಖಲಾದ ಅತೀ ಹೆಚ್ಚು ರನ್ ಗಳಿಕೆಯಾಗಿದೆ.
Highest match-aggregates in Champions Trophy
707 - AUS vs ENG, Lahore, 2025
674 - NZ vs SA, Lahore, 2025 SF
643 - IND vs SL, The Oval, 2017
642 - AFG vs ENG, Lahore, 2025
636 - IND vs SA, Cardiff, 2013
ದಾಖಲೆ ಬರೆದ ನ್ಯೂಜಿಲೆಂಡ್
ಇನ್ನು ಈ ಪಂದ್ಯ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿರುವ ನ್ಯೂಜಿಲೆಂಡ್ ಮತ್ತೊಂದು ದಾಖಲೆ ಬರೆದಿದ್ದು, ಭಾರತ ತಂಡದ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಗೆ ಬಂದ ತಂಡವಾಗಿದೆ. ಭಾರತ ಈ ವರೆಗೂ 5 ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದ್ದರೆ ನ್ಯೂಜಿಲೆಂಡ್ 3 ಬಾರಿ ಈ ಸಾಧನೆ ಮಾಡಿದೆ. ಅಂತೆಯೇ ವೆಸ್ಟ್ ಇಂಡೀಸ್ ಕೂಡ 3 ಬಾರಿ ಫೈನಲ್ ಪ್ರವೇಶಿಸಿ ಜಂಟಿ 2ನೇ ಸ್ಛಾನದಲ್ಲಿದೆ.
Qualifying for CT final most often
5* - India
3 - West Indies
3* - New Zealand
ಪಾಕಿಸ್ತಾನದಲ್ಲಿ ಸತತ ಜಯ
ಇದೇ ವೇಳೆ ಇಂದಿನ ಪಂದ್ಯದಲ್ಲಿನ ಗೆಲುವಿನ ಮೂಲಕ ಪಾಕಿಸ್ತಾನದ ಮೈದಾನಗಳಲ್ಲಿ ನ್ಯೂಜಿಲೆಂಡ್ ತಂಡ ತನ್ನ ಅಜೇಯ ಓಟ ಮುಂದುವರೆಸಿದ್ದು, ಪಾಕಿಸ್ತಾನದಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೆ 2023ರಿಂದ ಆರಂಭವಾದ ನ್ಯೂಜಿಲೆಂಡ್ ತಂಡದ ಈ ಜೈತ್ರಯಾತ್ರೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆದಿದೆ. ಈ ಹಿಂದೆ ಭಾರತ ತಂಡ ಕೂಡ ಇದೇ ರೀತಿಯ ತನ್ನ ಅಜೇಯ ಯಾತ್ರೆ ಮಾಡಿತ್ತು. 2006ರ ಫೆಬ್ರವರಿಯಿಂದ 2008ರ ಜೂನ್ ವರೆಗೂ ಭಾರತ ಪಾಕಿಸ್ತಾನದಲ್ಲಿ ತಾನಾಡಿದ ಸತತ 7 ಏಕದಿನ ಪಂದ್ಯಗಳನ್ನು ಜಯಿಸಿತ್ತು.
Visiting teams with most consecutive ODI wins in Pakistan
7 - India (February 2006 to June 2008)
7* - New Zealand (May 2023 to March 2025)
6 - Sri Lanka (October 1995 to November 1997)
ಐಸಿಸಿ ಏಕದಿನ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕಳಪೆ ದಾಖಲೆ
ಇದೇ ವೇಳೆ ಐಸಿಸಿ ಏಕದಿನ ಟೂರ್ನಿಯ ಸೆಮಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ಕಳಪೆ ದಾಖಲೆ ಮುಂದುವರೆಸಿದ್ದು, ಐಸಿಸಿ ಏಕದಿನ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ಈ ವರೆಗೂ 11 ಬಾರಿ ಸೆಮಿಫೈನಲ್ ಲಗ್ಗೆ ಇಟ್ಟಿದ್ದು, ಈ ಪೈಕಿ ಬರೊಬ್ಬರಿ 9ರಲ್ಲಿ ಸೋಲು ಕಂಡಿದೆ. 1998ರ ಚಾಂಪಿಯನ್ಸ್ ಟ್ರೋಫಿಯ ಢಾಕಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸೆಮಿ ಫೈನಲ್ ಪಂದ್ಯ ಮತ್ತು 1999ರಲ್ಲಿ ಎಡ್ದ್ ಬ್ಯಾಸ್ಟನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ಮಾತ್ರ ದಕ್ಷಿಣ ಆಫ್ರಿಕಾ ಗೆದ್ದಿತ್ತು. ಐಸಿಸಿ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಯಾವುದೇ ತಂಡವು ದಕ್ಷಿಣ ಆಫ್ರಿಕಾದಂತೆ ಹೆಚ್ಚು ಸೆಮಿಫೈನಲ್‌ಗಳನ್ನು ಸೋತಿಲ್ಲ, ಈ ಪಟ್ಟಿಯಲ್ಲಿ ಆಫ್ರಿಕಾ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ಇದ್ದು, ಕಿವೀಸ್ ಪಡೆ ತಾನಾಡಿದ 13 ಸೆಮಿ ಫೈನಲ್ ಪಂದ್ಯಗಳ ಪೈಕಿ 8ರಲ್ಲಿ ಸೋತಿದೆ.
South Africa in ICC ODI tournament semi-finals
Matches: 11
Won: 1 (vs SL, Dhaka, CT 1998)
Lost: 9
Tied: 1 (vs AUS, Edgbaston, CWC 1999)
No team has lost more semi-finals in ICC ODI tournament semis, the next most being eight by New Zealand (13 matches).
Advertisement