CT2025: ಗಂಗೂಲಿ, ಗೇಲ್ ದಾಖಲೆಯ ಮೇಲೆ ಕಣ್ಣಿಟ್ಟ ಕೊಹ್ಲಿ; 'ಗೋಲ್ಡನ್ ಬ್ಯಾಟ್', ಮಗದೊಂದು ವಿಶ್ವದಾಖಲೆಗೆ ಬೇಕಿದೆ 5 ರನ್!

2025ರ ಚಾಂಪಿಯನ್ಸ್ ಟ್ರೋಫಿಯ ಉದ್ದಕ್ಕೂ ವಿರಾಟ್ ಕೊಹ್ಲಿ ಅದ್ಭುತ ನೀಡುತ್ತಿದ್ದಾರೆ. ಅಲ್ಲದೆ ಭಾರತದ ಫೈನಲ್‌ ಎಂಟ್ರಿಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
Virat Kohli
ವಿರಾಟ್ ಕೊಹ್ಲಿ
Updated on

2025ರ ಚಾಂಪಿಯನ್ಸ್ ಟ್ರೋಫಿಯ ಉದ್ದಕ್ಕೂ ವಿರಾಟ್ ಕೊಹ್ಲಿ ಅದ್ಭುತ ನೀಡುತ್ತಿದ್ದಾರೆ. ಅಲ್ಲದೆ ಭಾರತದ ಫೈನಲ್‌ ಎಂಟ್ರಿಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಅವರ ಅದ್ಭುತ ಶತಕ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪ್ರಮುಖ ಅರ್ಧಶತಕವು ದೊಡ್ಡ ಪಂದ್ಯದ ಆಟಗಾರನೆಂಬ ಅವರ ಖ್ಯಾತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇನ್ನು ಭಾರತವು ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲು ಸಜ್ಜಾಗುತ್ತಿರುವಾಗ, ಕೊಹ್ಲಿ ಸೌರವ್ ಗಂಗೂಲಿಯನ್ನು ಹಿಂದಿಕ್ಕಿ ಐಸಿಸಿ ಏಕದಿನ ಫೈನಲ್‌ಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಕೇವಲ ಐದು ರನ್‌ಗಳ ದೂರದಲ್ಲಿದ್ದಾರೆ.

ಭಾರತೀಯ ಬ್ಯಾಟಿಂಗ್ ದಂತಕಥೆ ವಿರಾಟ್ ಕೊಹ್ಲಿ ನಾಲ್ಕು ಐಸಿಸಿ ಏಕದಿನ ಫೈನಲ್‌ಗಳಲ್ಲಿ ಆಡಿದ್ದಾರೆ. ವಿಶ್ವಕಪ್‌ನಲ್ಲಿ ಎರಡು (2011, 2023) ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು (2013, 2017). ಇಲ್ಲಿಯವರೆಗೆ, ಅವರು ಈ ಫೈನಲ್‌ಗಳಲ್ಲಿ ಅರ್ಧಶತಕ ಸೇರಿದಂತೆ 34.25 ಸರಾಸರಿಯಲ್ಲಿ 137 ರನ್ ಗಳಿಸಿದ್ದಾರೆ. ಸೌರವ್ ಗಂಗೂಲಿ ಪ್ರಸ್ತುತ ಐಸಿಸಿ ಏಕದಿನ ಫೈನಲ್‌ಗಳಲ್ಲಿ 141 ರನ್‌ಗಳೊಂದಿಗೆ ದಾಖಲೆ ಹೊಂದಿದ್ದಾರೆ. ಆದರೆ ಕೊಹ್ಲಿ ಈಗ ಅವರನ್ನು ಹಿಂದಿಕ್ಕುವಷ್ಟು ದೂರದಲ್ಲಿದ್ದಾರೆ.

ಮತ್ತೊಂದೆಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ 46 ರನ್‌ ಸಿಡಿಸುತ್ತಿದ್ದಂತೆ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಸಾಧಕರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಆಡಿದ 17 ಪಂದ್ಯಗಳಲ್ಲಿ 82ರ ಸರಾಸರಿಯಲ್ಲಿ 746 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇವರು ಕ್ರಿಸ್‌ ಗೇಲ್ ದಾಖಲೆ ಮೇಲೆ ಕಣ್ಣಿಟ್ಟಿದ್ದು, ಕ್ರಿಸ್ ಗೇಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 17 ಪಂದ್ಯಗಳಲ್ಲಿ 3 ಶತಕ ಹಾಗೂ 1 ಅರ್ಧಶತಕದೊಂದಿಗೆ 791 ರನ್‌ ಸಿಡಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ವಿರಾಟ್‌ಗೆ 46 ರನ್‌ ಬೇಕಿದೆ. ಅಲ್ಲದೆ ಈ ಟೂರ್ನಿಯಲ್ಲಿ ವಿರಾಟ್ ಗೋಲ್ಡನ್ ಬ್ಯಾಟ್ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಈ ಟೂರ್ನಿಯಲ್ಲಿ ಗರಿಷ್ಠ ರನ್‌ ಸಾಧಕರಿಗೆ ಗೋಲ್ಡನ್‌ ಬ್ಯಾಟ್ ಪ್ರಶಸ್ತಿ ಸಿಗಲಿದೆ.

Virat Kohli
Champions Trophy 2025: ಪ್ರಮುಖ ಆಟಗಾರನಿಗೆ ಗಾಯ; ಭಾರತ ವಿರುದ್ಧದ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಹಿನ್ನಡೆ!

ಐಸಿಸಿ ಏಕದಿನ ಫೈನಲ್‌ಗಳಲ್ಲಿ (ವಿಶ್ವಕಪ್+ಚಾಂಪಿಯನ್ಸ್ ಟ್ರೋಫಿ) ಭಾರತದ ಅತ್ಯಧಿಕ ಸ್ಕೋರರ್‌ಗಳು

* ಸೌರವ್ ಗಂಗೂಲಿ - 141 ರನ್‌ಗಳು

* ವಿರಾಟ್ ಕೊಹ್ಲಿ - 137 ರನ್‌ಗಳು

* ವೀರೇಂದ್ರ ಸೆಹ್ವಾಗ್ - 120 ರನ್‌ಗಳು

* ಸಚಿನ್ ತೆಂಡೂಲ್ಕರ್ - 98 ರನ್‌ಗಳು

* ಗೌತಮ್ ಗಂಭೀರ್ - 97 ರನ್‌ಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com