
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಹೌದು.. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋಲಿನ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೇಡದ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡದ ಪರ ರೋಹಿತ್ ಶರ್ಮಾ ಒಂದೇ ಒಂದು ಪಂದ್ಯದಲ್ಲೂ ಟಾಸ್ ಗೆದ್ದಿಲ್ಲ. ಆ ಮೂಲಕ ಟಾಸ್ ಗೆಲ್ಲದೇ ಐಸಿಸಿ ಟೂರ್ನಿ ಪೂರ್ಣಗೊಳಿಸಿದ ನಾಯಕ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ.
ಅಂತೆಯೇ ಸತತ ಟಾಸ್ ಸೋಲಿನಲ್ಲೂ ರೋಹಿತ್ ಶರ್ಮಾ ದಾಖಲೆ ಬರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ಸತತವಾಗಿ ಗರಿಷ್ಠ ಟಾಸ್ ಸೋತ ನಾಯಕ ಎಂಬ ದಾಖಲೆಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ ಈ ವರೆಗೂ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. 2023ರ ನವೆಂಬರ್ ನಿಂದ 2025 ಮಾರ್ಚ್ ವರೆಗೂ ನಡೆದ ಒಟ್ಟು 12 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಟಾಸ್ ಸೋತಿದ್ದಾರೆ.
ಲಾರಾ ದಾಖಲೆ ಸಮಬಲ
ಇನ್ನು ಈ ದಾಖಲೆಯ ಮೂಲಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಲಾರಾ 1998ರ ಅಕ್ಟೋಬರ್ ನಿಂದ 1999ರ ಮೇ ವರೆಗೂ 12 ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಅಂತೆಯೇ ಭಾರತಕ್ಕೆ ಇದು ಸತತ 15ನೇ ಟಾಸ್ ಸೋಲಾಗಿದ್ದು ಈ ಹಿಂದಿನ ಮೂರು ಪಂದ್ಯಗಳಲ್ಲಿ ಶುಭ್ ಮನ್ ಗಿಲ್ ತಂಡದ ನೇತೃತ್ವ ವಹಿಸಿದ್ದರು. ಆ ಪಂದ್ಯಗಳಲ್ಲೂ ಭಾರತ ಟಾಸ್ ಸೋತಿತ್ತು.
Most consecutive tosses lost by a captain in ODIs
12 Rohit Sharma (Nov 2023 - Mar 2025)*
12 Brian Lara (Oct 1998 - May 1999)
11 Peter Borren (Mar 2011 - Aug 2013)
- 15th consecutive tosses lost by India in ODIs, 12th by Rohit Sharma as captain.
Advertisement