
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಐಸಿಸಿ ಟೂರ್ನಿಯ ಪಂದ್ಯಗಳಲ್ಲಿ ತನ್ನ ಪಾರುಪತ್ಯ ಮುಂದುವರೆಸಿದೆ.
ಹೌದು.. ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಮೂಲಕ ಭಾರತ ತಂಡ ಅಪರೂಪದ ದಾಖಲೆಗಳ ನಿರ್ಮಾಣ ಮಾಡಿದ್ದು, ಐಸಿಸಿ ಟೂರ್ನಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಸತತ ಜಯ ಸಾಧಿಸಿದ ದಾಖಲೆ ಬರೆದಿದೆ.
ಹಾಲಿ ಟೂರ್ನಿಯಲ್ಲಿ ಸೋಲಿಲ್ಲದ ಸರದಾರ
ಇನ್ನು ಈ ಟೂರ್ನಿಯುದ್ದಕ್ಕೂ ಅಜೇಯ ಓಟ ಮುಂದುವರೆದಿಸಿದ ಭಾರತ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 5 ಪಂದ್ಯಗಳನ್ನಾಡಿದ್ದು, ಐದೂ ಪಂದ್ಯಗಳಲ್ಲೂ ಜಯಭೇರಿ ಭಾರಿಸಿತು. ಆ ಮೂಲಕ ಚಾಂಪಿಯನ್ಸ್ ಟ್ಪೋಫಿ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೇ ಪ್ರಶಸ್ತಿ ಗೆದ್ದ ತಂಡ ಎಂಬ ಕೀರ್ತಿಗೆ ಭಾರತ ತಂಡ ಭಾಜನವಾಗಿದೆ.
24 ಪಂದ್ಯಗಳಲ್ಲಿ 23ರಲ್ಲಿ ಜಯ
ಅಂತೆಯೇ ಐಸಿಸಿ ಟೂರ್ನಿಯ ವೈಟ್ ಬಾಲ್ ಪಂದ್ಯಗಳಲ್ಲಿ (CWC, T20 WC and CT) ಭಾರತ ಒಟ್ಟು 24 ಪಂದ್ಯಗಳನ್ನಾಡಿದ್ದು, ಈ ಪೈಕಿ 23 ಪಂದ್ಯಗಳಲ್ಲಿ ಜಯಭೇರಿ ಭಾರಿಸಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಾತ್ರ ಭಾರತ ಸೋತಿತ್ತು.
India in last three ICC white-ball tournaments
Matches: 24
Won: 23
Lost: 1
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ಗೆಲುವು
ಇನ್ನು ಚಾಂಪಿಯನ್ಸ್ ಟ್ರೋಫಿಯ ಭಾರತದ ಇತಿಹಾಸ ಕೂಡ ಭಾರತದ ಪಾರುಪತ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 34 ಪಂದ್ಯಗಳನ್ನಾಡಿದ್ದು, ಈ ಪೈಕಿ 23 ಪಂದ್ಯಗಳಲ್ಲಿ ಜಯಗಳಿಸಿದೆ. 8 ಪಂದ್ಯಗಳಲ್ಲಿ ಸೋತಿತ್ತು, ಮೂರು ಪಂದ್ಯಗಳಲ್ಲಿ ಫಲಿತಾಂಶ ಹೊರಬಂದಿಲ್ಲ.
ಅಂತೆಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ W/L ratio 2.875ರಷ್ಟಿದ್ದು, ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಬೇರೆ ಯಾವುದೇ ತಂಡವು 15 ಕ್ಕಿಂತ ಹೆಚ್ಚು ಗೆಲುವುಗಳನ್ನು ಹೊಂದಿಲ್ಲ. ಭಾರತದ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, ಆ ತಂಡದ W/L ratio 1.444ರಷ್ಟಿದೆ.
India in Champions Trophy
Matches: 34
Wins: 23
Defeats: 8
NR: 3
W/L ratio: 2.875
No other team has more than 15 wins in the competition’s history, and the next best win-loss ratio is Australia’s 1.444.
ಒಂದೇ ಮೈದಾನದಲ್ಲಿ ಅತೀ ಹೆಚ್ಚು ಗೆಲುವು, ಕಿವೀಸ್ ದಾಖಲೆ ಸಮ
ಇದೇ ವೇಳೆ ಭಾರತ ನಿನ್ನೆ ದುಬೈ ಕ್ರೀಡಾಂಗಣದಲ್ಲಿ ತನ್ನ 10ನೇ ಗೆಲುವು ಸಾಧಿಸುವ ಮೂಲಕ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಸತತ ಗೆಲುವು ಸಾಧಿಸಿದ ಸಾಧನೆ ಮಾಡಿದೆ. ಅಂತೆಯೇ ಇದೇ ರೀತಿಯ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ದಾಖಲೆಯನ್ನು ಸರಿಗಟ್ಟಿದೆ. ಭಾರತ ದುಬೈ ಮೈದಾನದಲ್ಲಿ ಸತತ 10 ಪಂದ್ಯ ಗೆದ್ದಿದ್ದರೆ, ನ್ಯೂಜಿಲೆಂಡ್ ಕೂಡ ಡುನೆಡಿನ್ ಮೈದಾನದಲ್ಲಿ ಸತತ 10 ಪಂದ್ಯ ಗೆದ್ದಿದ ಸಾಧನೆ ಮಾಡಿದೆ. ಉಳಿದಂತೆ ಭಾರತ ಇಂದೋರ್ ಮೈದಾನದಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದು, ಪಾಕಿಸ್ತಾನ ತನ್ನ ದೇಶದ ಹೈದರಾಬಾದ್ ನ ನಿಯಾಜ್ ಕ್ರೀಡಾಂಗಣದಲ್ಲಿ 7 ಪಂದ್ಯ ಗೆದ್ದ ಸಾಧನೆ ಮಾಡಿದೆ.
ಅಂತೆಯೇ ಫೈನಲ್ ಗೆಲುವು ನ್ಯೂಜಿಲೆಂಡ್ ವಿರುದ್ಧದ ಭಾರತದ ಸತತ ಗೆಲುವಿನ ಸಂಖ್ಯೆಯನ್ನು 7ಕ್ಕೇರಿಸಿದೆ.
Most ODI wins without a defeat at a venue
10 - India, Dubai (11 matches, 1 tied)
10 - New Zealand, Dunedin
7 - India, Indore
7 - Pakistan, Hyderabad (Niaz Stadium, Pakistan)
This was India's seventh straight ODI win over New Zealand
Advertisement