
ದುಬೈ: ಇತ್ತೀಚೆಗೆ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಯಶಸ್ಸಿನಲ್ಲಿ ಬೌಲರ್ ಗಳಷ್ಟೇ ತಂಡದ ಮಧ್ಯಮ ಕ್ರಮಾಂಕವೂ ಕೂಡ ಪ್ರಮುಖ ಕಾರಣ.
ಅದೊಂದು ಕಾಲವಿತ್ತು.. ಭಾರತ ತಂಡವನ್ನು ಸೋಲಿಸಬೇಕು ಎಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರೆ ಸಾಕು ಎನ್ನುವ ವಾದವೊಂದಿತ್ತು. ಬಳಿಕ ಈ ಪಟ್ಟಿ ಬೆಳೆಯುತ್ತಾ ಸಾಗಿತು. ತಂಡದಲ್ಲಿ ಇದೀಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರವಲ್ಲದೇ ಮ್ಯಾಚ್ ವಿನ್ನರ್ ಗಳ ಪಟ್ಟಿಯೇ ಇದೆ. ರೋಹಿತ್ ಔಟಾದರೆ, ಕೊಹ್ಲಿ... ಕೊಹ್ಲಿ ಔಟಾದರೆ ಗಿಲ್.. ಹಿಲ್ ಬಳಿಕ ಕೆಎಲ್ ರಾಹುಲ್.. ಹೀಗೆ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಗಳ ಪಟ್ಟಿ ಬೆಳೆಯುತ್ತಲೇ ಇದೆ.
ಈ ಪಟ್ಟಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೇರ್ಪಡೆಯಾದ ಒಂದು ಹೆಸರು ಅದುವೇ ಶ್ರೇಯಸ್ ಅಯ್ಯರ್.. ಹೌದು.. ಟೀಂ ಇಂಡಿಯಾದ ಅಗ್ರ ಕ್ರಮಾಂಕ ಯಾವುದೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೆ, ಅದಕ್ಕೆ ಬ್ಯಾಕ್ ಅಪ್ ಆಗಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ನಿಲ್ಲುತ್ತಿದ್ದರು. ಅದರಲ್ಲೂ ಶ್ರೇಯಸ್ ಅಯ್ಯರ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಅರ್ಧಶತಕಗಳನ್ನು ಸಿಡಿಸಿ ಭಾರತದ ಕೈ ಮೇಲಾಗುವಂತೆ ಮಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ವೈಯುಕ್ತಿಕ ದಾಖಲೆಗಾಗಿ ಆಡದೇ ತಂಡಕ್ಕಾಗಿ ಆಡಿ 45ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ತಂಡಕ್ಕೆ ಯಾವಾಗ ಅಗತ್ಯವಿದ್ದರೂ ತಮ್ಮ ಅಮೋಭ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗುತ್ತಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 2 ಅರ್ಧಶತಕ ಮತ್ತು 2 ಬಾರಿ 40 ಪ್ಲಸ್ ರನ್ ಗಳೊಂದಿಗೆ ಟೂರ್ನಿಯಲ್ಲಿ ತಮ್ಮ ಗಳಿಕೆಯನ್ನು 243ರನ್ ಗಳಿಗೆ ಏರಿಕೆ ಮಾಡಿಕೊಂಡ ಶ್ರೇಯಸ್ ಅಯ್ಯರ್, ಭಾರತದ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಛ ರನ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಜೀರೋ ಟು ಹೀರೋ
ಒಂದು ಕಾಲದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಶ್ರೇಯಸ್ ಅಯ್ಯರ್ ಇದೀಗ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಲ್ಲದೇ, ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಅಂದು ಬಿಸಿಸಿಐನ ನಿರ್ದೇಶನದ ಹೊರತಾಗಿಯೂ ದೇಸಿ ಕ್ರಿಕೆಟ್ ಕಡೆಗಣಿಸಿದ್ದ ಶ್ರೇಯಸ್, 1 ವರ್ಷ ಟೀಮ್ ಇಂಡಿಯಾದಿಂದ ದೂರ ಉಳಿದು, ವನವಾಸ ಅನುಭವಿಸಿದ್ದರು. ಆದರೆ ಇದೀಗ ತಮ್ಮ ತಪ್ಪಿನಿಂದ ಪಾಠ ಕಲಿತಿರುವ ಶ್ರೇಯಸ್ ಅಯ್ಯರ್, ದೇಸಿ ಕ್ರಿಕೆಟ್ ಮತ್ತು ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೆಂಡ್ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್, 60ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್ ಕಲೆಹಾಕಿದ್ದರು. ಶ್ರೇಯಸ್ ಬ್ಯಾಟ್ನಿಂದ 2 ಅರ್ಧಶತಕಗಳು ಕೂಡ ದಾಖಲಾಗಿತ್ತು.
ಆಗ central contract ನಿಂದ ಕಿಕೌಟ್
ಈಗ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ತಂಡದ ದೂರು ಉಳಿದಿದ್ದ ಶ್ರೇಯಸ್ ಅಯ್ಯರ್ ಸದ್ಯ ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾದ ಸಾಮಾನ್ಯ ಆಟಗಾರ. ಅಂದು ಬಿಸಿಸಿಐನಿಂದ ಸೆಂಟ್ರಲ್ ಕಾಂಟ್ರಾಕ್ಟ್ ಕಳೆದುಕೊಂಡಿರುವ ಅಯ್ಯರ್ ಇಂದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿನ ಉತ್ತಮ ಪ್ರದರ್ಶನ್ ಬಳಿಕ ಮರಳಿ ಸೆಂಟ್ರಲ್ ಕಾಂಟ್ರಾಕ್ಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಅಯ್ಯರ್ ಮತ್ತು ಕೆಎಲ್ ರಾಹುಲ್ ಭಾರತ ತಂಡದ ಮಧ್ಮಮ ಕ್ರಮಾಂಕದ ಪ್ರಮುಖ ಆಟಗಾರರಾಗಿದ್ದಾರೆ. ಅಲ್ಲದೇ ಈ ಜೋಡಿ ಸಾಕಷ್ಟು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಯ್ಯರ್ ಇದಿಗ ತಾವು ಕಳೆದುಕೊಂಡಿರುವ ಸೆಂಟ್ರಲ್ ಕಾಂಟ್ರಾಕ್ಟ್ ಅನ್ನು ಮರಳಿ ಪಡೆಯುವ ವಿಶ್ವಾಸ ಹೊಂದಿದ್ದಾರೆ.
ನಾನು ಬಯಸಿದ ಮನ್ನಣೆ ಪಡೆಯಲಿಲ್ಲ
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅಯ್ಯರ್, 'ನಾನು ಐಪಿಎಲ್ ಆಡುತ್ತಿದ್ದರಿಂದ ಹತಾಶೆಗೊಂಡಿರಲಿಲ್ಲ. ಆಗ ಐಪಿಎಲ್ ಗೆಲ್ಲುವುದು ಪ್ರಮುಖ ಗಮನವಾಗಿತ್ತು. ಅದೃಷ್ಟವಶಾತ್ ನಾನು ಅದನ್ನು ಗೆದ್ದೆ. ಐಪಿಎಲ್ ಗೆದ್ದ ನಂತರ ನಾನು ಬಯಸಿದ ಮನ್ನಣೆಯನ್ನು ನಾನು ಪಡೆಯಲಿಲ್ಲ ಎಂದು ಹೇಳಿದ್ದಾರೆ. '2023 ರ ODI ವಿಶ್ವಕಪ್ ಆಡಿದ ನಂತರ ನನ್ನನ್ನು ಸೆಂಟ್ರಲ್ ಕಾಂಟ್ರಾಕ್ಟ್ ನಿಂದಹೊರಗಿಡಲಾಯಿತು.
ಇದು ನನ್ನ ಜೀವನದ ಈ ಹಂತದಲ್ಲಿ ನಾನು ಬಹಳಷ್ಟು ಕಲಿಯುವಂತೆ ಮಾಡಿತು. ನಾನು ಎಲ್ಲಿ ತಪ್ಪು ಮಾಡಿದೆ, ನಾನು ಏನು ಮಾಡಬೇಕು, ನನ್ನ ಫಿಟ್‌ನೆಸ್‌ನ ಮೇಲೆ ನಾನು ಎಷ್ಟು ಚೆನ್ನಾಗಿ ಗಮನಹರಿಸಬೇಕು ಎಂಬುದನ್ನು ನಾನು ಮರು ಮೌಲ್ಯಮಾಪನ ಮಾಡಿದ್ದೇನೆ. ನನ್ನ ತರಬೇತಿ ಮತ್ತು ನಾನು ಅಕ್ಕಪಕ್ಕದಲ್ಲಿ ಸೇರಿಸಿದ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರ ಪಂದ್ಯಗಳಲ್ಲಿ ಆಡಿದ್ದೇನೆ. ವಿಶೇಷವಾಗಿ ವರ್ಷದ ಆರಂಭದಲ್ಲಿ ನನ್ನ ಕಳವಳವನ್ನು ವ್ಯಕ್ತಪಡಿಸಿದಾಗ ಫಿಟ್‌ನೆಸ್ ನನಗೆ ಎಷ್ಟು ಮುಖ್ಯ ಎಂದು ನಾನು ಲೆಕ್ಕಾಚಾರ ಮಾಡಿದೆ.
ಒಟ್ಟಾರೆಯಾಗಿ ನಾನು ನನ್ನ ಬಗ್ಗೆ ತುಂಬಾ ಸಂತೋಷವಾಗಿದ್ದೇನೆ ... ನಾನು ಇದರಿಂದ ಹೊರಬಂದ ರೀತಿ, ನಾನು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಮುಖ್ಯವಾಗಿ ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೇನೆ. ಈಗ ಯಾವುದೇ ಸಂದರ್ಭದಲ್ಲಿ ನನ್ನ ಬಿಟ್ಟರು ಆ ಕ್ಲಿಷ್ಠ ಸಮಯವನ್ನು ಯಶಸ್ವಿಯಾಗಿ ಎದುರಿಸುತ್ತೇನೆ' ಎಂದು ಅಯ್ಯರ್ ಹೇಳಿದ್ದಾರೆ.
Advertisement