ಜಸ್ಪ್ರೀತ್ ಬುಮ್ರಾ- ಸಂಜನಾ ಗಣೇಶನ್ ದಂಪತಿಗೆ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಪೋಸ್ಟ್ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ದಂಪತಿಯ ಫೋಟೊ ಹಂಚಿಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜಸ್ಪ್ರೀತ್ ಬುಮ್ರಾ- ಸಂಜನಾ ಗಣೇಶನ್ ದಂಪತಿಗೆ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಪೋಸ್ಟ್ ವೈರಲ್
Updated on

ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಶನಿವಾರ ಪತ್ನಿ ಸಂಜನಾ ಗಣೇಶನ್ ಅವರೊಂದಿಗೆ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಮಾಡುವ ಬುಮ್ರಾ ಮತ್ತು ಗಣೇಶನ್ ಇಬ್ಬರೂ 2021ರಲ್ಲಿ ವಿವಾಹವಾದರು. ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಬೌಲರ್ ಆಗಿದ್ದು, ಸಂಜನಾ ಗಣೇಶನ್ ಪ್ರಸಿದ್ಧ ಕ್ರೀಡಾ ನಿರೂಪಕಿಯಾಗಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ದಂಪತಿಗೆ ಅಂಗದ್ ಎಂಬ ಮಗ ಜನಿಸಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ದಂಪತಿಯ ಫೋಟೊ ಹಂಚಿಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೋಸ್ಟ್ ಮಾಡಿದ ಮೊದಲ ಐದು ಗಂಟೆಗಳಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

'ತು ಹೈ ತೋ ದಿಲ್ ಧಡಕ್ತಾ ಹೈ (ನೀವು ಅಲ್ಲಿರುವಾಗ, ನನ್ನ ಹೃದಯ ಬಡಿಯುತ್ತದೆ)'

ತು ಹೈ ತೋ ಸಂಸಾ ಆತಿ ಹೈ (ನೀನು ಅಲ್ಲಿರುವಾಗ ನಾನು ಉಸಿರಾಡಬಲ್ಲೆ)

ತು ನಾ ತೋ ಘರ್ ಘರ್ ನಹಿ ಲಗ್ತಾ (ನೀನು ಇಲ್ಲದಿದ್ದಾಗ, ಮನೆ ಮನೆಯಂತೆ ಭಾಸವಾಗುವುದಿಲ್ಲ)

ತು ಹೈ ತೋ ದರ್ ನಹಿ ಲಗ್ತಾ (ನೀನು ಅಲ್ಲಿರುವಾಗ, ನನಗೆ ಭಯವಾಗುವುದಿಲ್ಲ)' ನಾಲ್ಕನೇ ವರ್ಷದ ಶುಭಾಶಯಗಳು ಎಂದು ಬರೆಯಲಾಗಿದೆ.

ಐಪಿಎಲ್ 2025ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ 10 ಪ್ರಾಂಚೈಸಿಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿವೆ. ಗಾಯದಿಂದಾಗಿ ಸ್ಟಾರ್ ಆಟಗಾರ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಆತಂಕ ಎದುರಾಗಿದೆ. ಜನವರಿಯಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾ, ಚಾಂಪಿಯನ್ಸ್ ಟ್ರೋಫಿ 2025ರ ಅಭಿಯಾನದಿಂದ ಹೊರಗುಳಿದಿದ್ದರು.

ವರದಿಗಳ ಪ್ರಕಾರ, ಐಪಿಎಲ್ 2025ರ ಆವೃತ್ತಿಯ ಆರಂಭದಲ್ಲಿ ಕೆಲವು ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ 32 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಶೀಘ್ರದಲ್ಲೇ 2024 ರ ಐಸಿಸಿ ವರ್ಷದ ಕ್ರಿಕೆಟಿಗ ಮತ್ತು ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳನ್ನು ಗೆದ್ದರು.

ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 23ರ ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೆಣಸಲಿದೆ. ಬುಮ್ರಾ ಪ್ರಸ್ತುತ ICC ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ನಂ. 1 ಶ್ರೇಯಾಂಕದ ಬೌಲರ್ ಆಗಿದ್ದಾರೆ.

ಜಸ್ಪ್ರೀತ್ ಬುಮ್ರಾ- ಸಂಜನಾ ಗಣೇಶನ್ ದಂಪತಿಗೆ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಪೋಸ್ಟ್ ವೈರಲ್
IPL 2025: ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರ ಜಸ್ಪ್ರೀತ್ ಬುಮ್ರಾ ಶಾಕ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com