
ಭಾನುವಾರ ನಡೆದ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) 2025ರ ಫೈನಲ್ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸುಮಾರು 50,000 ಅಭಿಮಾನಿಗಳ ಎದುರು ಬ್ರಿಯಾನ್ ಲಾರಾ ಅವರ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಅನ್ನು ಸೋಲಿಸಿ ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ಚೊಚ್ಚಲ IML ಪ್ರಶಸ್ತಿ ಗೆದ್ದಿದೆ. ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಡಿಯಾ ಮಾಸ್ಟರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
ಈ ರನ್ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ 17.1 ಓವರ್‌ಗಳಲ್ಲಿಯೇ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಈ ಮೂಲಕ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಅಂಬಾಟಿ ರಾಯುಡು 50 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 74 ರನ್ ಗಳಿಸಿದರು. ನಾಯಕ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 25 ರನ್ ಗಳಿಸಿದರು.
ಪಂದ್ಯದ ಪ್ರಶಸ್ತಿಗಳು
ಪಂದ್ಯದ ಬ್ಯಾಂಕ್ ಆಫ್ ಬರೋಡಾ ಮಾಸ್ಟರ್ ಸ್ಟ್ರೋಕ್: ಅಂಬಾಟಿ ರಾಯುಡು (9 ಬೌಂಡರಿ) - 50,000 ರೂ.
ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು: ಅಂಬಟಿ ರಾಯುಡು (3 ಸಿಕ್ಸರ್) - 50,000 ರೂ.
ಗೇಮ್ ಚೇಂಜರ್ ಆಫ್ ದ ಮ್ಯಾಚ್: ಶಹಬಾಜ್ ನದೀಮ್ (4 ಓವರ್‌ಗಳಲ್ಲಿ 2/12)
ಅತ್ಯಂತ ಎಕನಾಮಿಕಲ್ ಬೌಲರ್: ಶಹಬಾಜ್ ನದೀಮ್ (ಎಕಾನಮಿ ದರ 3)
ಪಂದ್ಯಶ್ರೇಷ್ಠ: ಅಂಬಾಟಿ ರಾಯುಡು (50 ಎಸೆತಗಳಲ್ಲಿ 74 ರನ್) - 50,000 ರೂ.
ಐಎಂಎಲ್ ಆವೃತ್ತಿ ಪ್ರಶಸ್ತಿಗಳು
ಈ ಆವೃತ್ತಿಯಲ್ಲಿ ಅತಿ ಹೆಚ್ಚು ಬೌಂಡರಿ: ಕುಮಾರ್ ಸಂಗಕ್ಕಾರ - 38 ಬೌಂಡರಿಗಳು (5,00,000 ರೂ.)
ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್: ಶೇನ್ ವ್ಯಾಟ್ಸನ್ - 25 ಸಿಕ್ಸರ್‌ಗಳು (5,00,000 ರೂ.)
ವಿಜೇತರು: ಇಂಡಿಯಾ ಮಾಸ್ಟರ್ಸ್ - 1,00,00,000 (1 ಕೋಟಿ ರೂಪಾಯಿ)
ರನ್ನರ್ಸ್ ಅಪ್: ವೆಸ್ಟ್ ಇಂಡೀಸ್ ಮಾಸ್ಟರ್ಸ್ - 50,00,000 (50 ಲಕ್ಷ ರೂಪಾಯಿ)
ಉಭಯ ತಂಡಗಳ ಆಡುವ ಬಳಗ
ಇಂಡಿಯಾ ಮಾಸ್ಟರ್ಸ್: ಸಚಿನ್ ತೆಂಡೂಲ್ಕರ್ (ನಾಯಕ), ಅಂಬಾಟಿ ರಾಯುಡು (ವಿಕೆಟ್ ಕೀಪರ್), ಪವನ್ ನೇಗಿ, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಶಹಬಾಜ್ ನದೀಮ್, ಧವಲ್ ಕುಲಕರ್ಣಿ.
ವೆಸ್ಟ್ ಇಂಡೀಸ್ ಮಾಸ್ಟರ್ಸ್: ಬ್ರಿಯಾನ್ ಲಾರಾ(ನಾಯಕ), ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಡ್ವೇನ್ ಸ್ಮಿತ್, ವಿಲಿಯಂ ಪರ್ಕಿನ್ಸ್, ಲೆಂಡ್ಲ್ ಸಿಮನ್ಸ್, ಚಾಡ್ವಿಕ್ ವಾಲ್ಟನ್, ಆಶ್ಲೇ ನರ್ಸ್, ಟಿನೋ ಬೆಸ್ಟ್, ಜೆರೋಮ್ ಟೇಲರ್, ಸುಲೈಮಾನ್ ಬೆನ್, ರವಿ ರಾಂಪಾಲ್.
Advertisement