Babar Azam ಐತಿಹಾಸಿಕ ದಾಖಲೆ ಮುರಿದ ಯುವ ಕ್ರಿಕೆಟಿಗ! ಮೊದಲ ಪಂದ್ಯದಲ್ಲೇ ಅಪರೂಪದ ಸಾಧನೆ!

ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆದ ಪಾಕ್-ನ್ಯೂಜಿಲ್ಯಾಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಈ ಯುವ ಕ್ರಿಕೆಟಿಗ ಈ ಸಾಧನೆ ಮಾಡಿದ್ದಾರೆ.
babar azam
ಬಾಬರ್ ಆಜಮ್ online desk
Updated on

ಆಕ್ಲೆಂಡ್‌: ಪಾಕ್ ಕ್ರಿಕೆಟಿಗ ಬಾಬರ್ ಆಜಮ್ (Babar Azam) ಅವರ ಐತಿಹಾಸಿಕ ದಾಖಲೆಯೊಂದನ್ನು ಪಾಕ್ ನ 22 ವರ್ಷದ ಯುವ ಕ್ರಿಕೆಟಿಗ ಮುರಿದಿದ್ದಾರೆ.

ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆದ ಪಾಕ್-ನ್ಯೂಜಿಲ್ಯಾಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಈ ಯುವ ಕ್ರಿಕೆಟಿಗ ಈ ಸಾಧನೆ ಮಾಡಿದ್ದಾರೆ.

ಹಸನ್ ನವಾಜ್ ಬಾಬರ್ ಆಜಮ್ ನ ದಾಖಲೆ ಮುರಿದಿದ್ದು, ನವಾಜ್ ಅವರ ಅಮೋಘ ಶತಕ ಮತ್ತು ವೇಗಿಗಳ ಅತ್ಯುತ್ತಮ ಪ್ರದರ್ಶನ ಪಾಕಿಸ್ತಾನಕ್ಕೆ ಸರಣಿಯನ್ನು ಜೀವಂತವಾಗಿಡಲು ಸಹಾಯ ಮಾಡಿತು.

babar azam
Champions Trophy 2025 ಆಯೋಜನೆಯಿಂದ ನಮಗೇನೂ ಲಾಸ್ ಆಗಿಲ್ಲ.. ಲಾಭವೇ ಆಗಿದೆ: PCB ತೇಪೆ

ಮೂರನೇ ಟಿ20ಐನಲ್ಲಿ ನ್ಯೂಜಿಲೆಂಡ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದೆ. ನ್ಯೂಜಿಲೆಂಡ್‌ನ 204 ರನ್‌ಗಳಿಗೆ ಉತ್ತರವಾಗಿ, ಪಾಕಿಸ್ತಾನ 16 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.

ನವಾಜ್ 44 ಎಸೆತಗಳಲ್ಲಿ ತಮ್ಮ ಮೊದಲ ಟಿ20ಐ ಶತಕವನ್ನು ಗಳಿಸಿದರು, ಇದು ಪಾಕಿಸ್ತಾನದ ಆಟಗಾರನೊಬ್ಬನ ವೇಗದ ಶತಕವಾಗಿದೆ. 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಬರ್ ಅಜಮ್ ಅವರ 49 ಎಸೆತಗಳಲ್ಲಿ ಶತಕವನ್ನು ಗಳಿಸಿದ್ದರು. ನವಾಜ್ ಈಗ 45 ಎಸೆತಗಳಿಗಿಂತ ಕಡಿಮೆ ಅವಧಿ, ಎಸೆತಗಳಲ್ಲಿ ಟಿ20 ಶತಕ ಗಳಿಸಿದ ಮೊದಲ ಪಾಕಿಸ್ತಾನಿ ಆಟಗಾರರಾಗಿದ್ದಾರೆ. 22 ವರ್ಷದ ಹಸನ್ ನವಾಜ್‌ ತಮ್ಮ ಚೊಚ್ಚಲ ಟಿ20ಐ ಸರಣಿಯನ್ನು ಆಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com