
ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಡೆಯುತ್ತಿದೆ. ಆರಂಭಿಕ ಮೂವರು ಓವರ್ ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದು ಆರ್ ಸಿಬಿ ಮೈಲುಗೈ ಸಾಧಿಸಿತ್ತು. ಆದರೆ ನಂತರ ಬಂದ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ (Sunil Narine) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ರನ್ ವೇಗ ಹೆಚ್ಚಿಸಿದರು.
ಅಜಿಂಕ್ಯ ರಹಾನೆ 25 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದು 56 ರನ್ ಗೆ ಔಟಾದರು. ಇನ್ನು 26 ಎಸೆತಗಳಲ್ಲಿ 44 ರನ್ ಬಾರಿಸಿ ನರೈನ್ ಔಟಾದರು. ಆದರೆ ಸುನಿಲ್ ನರೈನ್ ಬ್ಯಾಟಿಂಗ್ ಮಾಡುವಾಗ ವೈಡ್ ಬಾಲ್ ಅನ್ನು ಹೊಡೆಯಲು ಮುಂದಾಗುತ್ತಾರೆ. ಈ ವೇಳೆ ಬ್ಯಾಟ್ ಹಿಂದಕ್ಕೆ ತೆಗೆದುಕೊಳ್ಳುವಾಗ ವಿಕೆಟ್ ಗೆ ಬಡಿದು ಬೇಲ್ಸ್ ಬೀಳುತ್ತದೆ. ಈ ವೇಳೆ ಅಂಪೈರ್ ವೈಡ್ ನೀಡುತ್ತಾರೆ. ಆದರೆ ಬ್ಯಾಟ್ ತಗುಲಿ ಬೇಲ್ಸ್ ಬಿದ್ದಿದ್ದರಿಂದ ಆರ್ ಸಿಬಿ ಆಟಗಾರರು ಲೇಟಾಗಿ ಅಪೀಲ್ ಮಾಡುತ್ತಾರೆ. ಆದರೆ ಅಂಪೈರ್ ಯಾವುದೇ ತೀರ್ಮಾನ ನೀಡುವುದಿಲ್ಲ.
ಕ್ರಿಕೆಟ್‌ನ ಅಧಿಕೃತ ನಿಯಮಗಳ ಪ್ರಕಾರ (ನಿಯಮ 35ರ ಹಿಟ್ ವಿಕೆಟ್), ವೈಡ್ ಡೆಲಿವರಿಯಲ್ಲಿ ಬ್ಯಾಟ್ಸ್‌ಮನ್‌ಗೆ "ಹಿಟ್ ವಿಕೆಟ್" (Hit Wicket) ನೀಡಬಹುದು. ಪ್ರಮುಖ ಷರತ್ತು ಏನೆಂದರೆ, ಬ್ಯಾಟರ್ ಚೆಂಡನ್ನು ಆಡುವಾಗ ಅಥವಾ ಆಡಲು ಸಿದ್ಧರಾಗುವಾಗ, ಅದು ಕಾನೂನುಬದ್ಧ ಎಸೆತವಾಗಲಿ ಅಥವಾ ವೈಡ್ ಆಗಿರಲಿ ಸ್ಟಂಪ್ ಕೆಳಕ್ಕೆ ಬಿದ್ದರೆ ಔಟಾಗುತ್ತದೆ. ಆದಾಗ್ಯೂ, ಚೆಂಡು ಬ್ಯಾಟರ್ ದಾಟಿ ಹಿಂದಕ್ಕೆ ಹೋದ ನಂತರ ಸ್ಟಂಪ್ ಬಿದ್ದರೆ ಮತ್ತು ಅವರು ಅದನ್ನು ಆಡಲು ಪ್ರಯತ್ನಿಸದಿದ್ದರೆ (ಉದಾ. ಹಿಂದೆ ಸರಿಯುವುದು ಅಥವಾ ಶಾಟ್ ಆಡುವುದಕ್ಕೆ ಸಂಬಂಧಿಸದ ಸಮತೋಲನವನ್ನು ಕಳೆದುಕೊಳ್ಳುವುದು) ಔಟ್ ಆಗುವುದಿಲ್ಲ.
ಸದ್ಯ ಕೆಕೆಆರ್ ತಂಡ 16 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 151 ರನ್ ಪೇರಿಸಿದೆ. ಆರ್ ಸಿಬಿ ಪರ ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದಿದ್ದಾರೆ.
Advertisement