
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ IPL ಪಂದ್ಯದ ಮೊದಲ ಎಸೆತದಿಂದಲೇ ಉದ್ವಿಗ್ನತೆ ಭುಗಿಲೆದ್ದಿತು. ಆರ್ ಸಿಬಿ ಬ್ಯಾಟರ್ ಫಿಲ್ ಸ್ಟಾಲ್ ಗೆ ಸಿಎಸ್ ಕೆ ಬೌಲರ್ ಖಲೀಲ್ ಅಹ್ಮದ್ ಸ್ಲೆಡ್ಜ್ ಮಾಡಿದ್ದರು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಇನ್ನು ಪಂದ್ಯ ಶುರುವಾಗಿ ಮೊದಲ ಎಸೆತದಲ್ಲೇ ಖಲೀಲ್ ಸ್ಲೆಡ್ಜ್ ಮಾಡಲು ಆರಂಭಿಸಿದರು. ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಲು ಫಿಲ್ ಸಾಲ್ಟ್ ಮುಂದಾದರು. ಆದರೆ ಚೆಂಡು ಮಿಸ್ ಆಗಿ ಕೀಪರ್ ಕೈಸೇರಿತು. ಇದಾದ ನಂತರದ ಎರಡೂ ಎಸೆತಗಳು ಡಾಟ್ ಬಾಲ್ ಆಗಿದ್ದರಿಂದ ಖಲೀಲ್ ಫಿಲ್ ಸಾಲ್ಟ್ ಕಡೆ ತಿರುಗಿ ಗೇಲಿ ಮಾಡಿದರು. ಆದರೆ ನಂತರ ಎರಡೂ ಎಸೆತವನ್ನು ಬೌಂಡರಿ ಹೊಡೆಯುವ ಮೂಲಕ ಖಲೀಲ್ ಬಾಯಿ ಮುಚ್ಚಿಸಿದರು.
ಸಿಎಸ್‌ಕೆ ಮತ್ತು ಆರ್‌ಸಿಬಿ ಎರಡೂ ತಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿವೆ. ಅಲ್ಲದೆ ತಮ್ಮ ಗೆಲುವಿನ ಆರಂಭವನ್ನು ವಿಸ್ತರಿಸಲು ಉತ್ಸುಕವಾಗಿವೆ. ಆರ್‌ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ತಮ್ಮದೇ ಆದ ಅಂಗಳದಲ್ಲಿ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಶೈಲಿಯಲ್ಲಿ ಪ್ರಾರಂಭಿಸಿತು. ಮತ್ತೊಂದೆಡೆ, ಸಿಎಸ್‌ಕೆ ಐಪಿಎಲ್ 2025 ರ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.
Advertisement