ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ

ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಸುಯಾಶ್, ಆರ್‌ಸಿಬಿ ಭಾಗವಾಗುವುದಕ್ಕೂ ಮುನ್ನ ಗಾಯಗೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.
ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ
Updated on

ಬಹು ಹರ್ನಿಯಾ ಸಮಸ್ಯೆಯಿಂದಾಗಿ ನಾನು ಕಳೆದ ಎರಡು ವರ್ಷಗಳಿಂದ ನೋವಿನಿಂದ ಆಡುತ್ತಿದ್ದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್ ಸುಯಾಶ್ ಶರ್ಮಾ ಬಹಿರಂಗಪಡಿಸಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಕೆಆರ್ ಮಾಜಿ ತಾರೆಯನ್ನು ಆರ್‌ಸಿಬಿ 2.60 ಕೋಟಿ ರೂ.ಗೆ ಖರೀದಿಸಿತ್ತು. ಈ ಆವೃತ್ತಿಯಲ್ಲಿ ಸುಯಾಶ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡಕ್ಕೆ ನೆರವಾಗಿದ್ದಾರೆ. ಇಲ್ಲಿಯವರೆಗೆ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಸುಯಾಶ್, ಆರ್‌ಸಿಬಿ ಭಾಗವಾಗುವುದಕ್ಕೂ ಮುನ್ನ ಗಾಯಗೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ. ತಂಡವು ನನ್ನ ಮೇಲೆ ಸಾಕಷ್ಟು ಹೂಡಿಕೆ ಮಾಡಿದೆ ಮತ್ತು ನನ್ನ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ಸಹ ಭರಿಸಿದೆ. ಚಿಕಿತ್ಸೆಗಾಗಿ ಆರ್‌ಸಿಬಿ ತನ್ನನ್ನು ಲಂಡನ್‌ಗೆ ಕಳುಹಿಸಿದೆ. ತನ್ನನ್ನು ನೋಡಿಕೊಂಡಿದ್ದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

'ಕಳೆದ ಎರಡು ವರ್ಷಗಳಿಂದ ನಾನು ನೋವಿನಿಂದ ಬಳಲುತ್ತಿದ್ದೆ. ನೋವಿನಲ್ಲಿ ಆಡುವುದಕ್ಕೆ ನಾನು ಒಗ್ಗಿಕೊಂಡಿದ್ದೆ. ಸಮಸ್ಯೆ ಏನೆಂದರೆ, ನೀವು ಭಾರತ ಅಥವಾ ಯಾವುದೇ ಫ್ರಾಂಚೈಸಿಗಾಗಿ ಆಡುತ್ತಿದ್ದಾಗ ಸಮಸ್ಯೆ ಎದುರಾದರೆ, ಅದನ್ನು ನಿಭಾಯಿಸಬಹುದು. ಆದರೆ, ನಾನು ಆಡದೇ ಇದ್ದಾಗ ಗಾಯಗೊಂಡಿದ್ದೆ. ಆ ಸಮಯದಲ್ಲಿ, ನನಗೆ ಏನೂ ತಿಳಿದಿರಲಿಲ್ಲ. ಆದರೆ, ಆರ್‌ಸಿಬಿ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿತು ಮತ್ತು ಅವರು ನನ್ನ ಮೇಲೆ ಬಹಳಷ್ಟು ಹೂಡಿಕೆ ಮಾಡಿದರು. ಅವರು ನನ್ನ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ನೋಡಿಕೊಂಡರು. ಈಗ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಈ ಆರ್‌ಸಿಬಿ ಫ್ರಾಂಚೈಸಿಗೆ ಸೇರಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದು ಸುಯಾಶ್ ಹೇಳಿದರು.

ಸುಯಾಶ್ 2023ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 2025ರಲ್ಲಿ ಆರ್‌ಸಿಬಿಗೆ ಸೇರುವ ಮೊದಲು ಅವರು ಎರಡು ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ಭಾಗವಾಗಿದ್ದರು. ಇಲ್ಲಿಯವರೆಗೆ, ಅವರು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವುಗಳಲ್ಲಿ ಹತ್ತು ವಿಕೆಟ್‌ಗಳು ಮೊದಲ ಸೀಸನ್‌ನಲ್ಲಿ ಬಂದಿವೆ.

ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ
IPL 2025: 'Virat Kohli ನನ್ನ ಸ್ನೇಹಿತನಲ್ಲ.. Just ಸಹಆಟಗಾರ ಅಷ್ಟೇ'; RCB ಸ್ಟಾರ್ ಬ್ಯಾಟರ್ ಸ್ಫೋಟಕ ಹೇಳಿಕೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com