IPL 2025: 'ಎದ್ದೇಳೋ ಬೇಗ.. ಲೇಟ್ ಆದ್ರೆ ನಂಗೆ ಫೈನ್ ಹಾಕ್ತಾರೆ'; Abhishek Sharma ಗೆ ಕಾಲಿನಿಂದ ತಳ್ಳಿದ Shubman Gill; Video

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 38 ರನ್ ಗಳ ಅಮೋಘ ಜಯ ಸಾಧಿಸಿತು.
Shubman Gill 'Kicks' Abhishek Sharma
ಶುಭ್ ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ
Updated on

ಅಹ್ಮದಾಬಾದ್: ಐಪಿಎಲ್ ಟೂರ್ನಿಯ ನಿನ್ನೆ ನಡೆದ ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಅಭಿಷೇಕ್ ಶರ್ಮಾ ಮತ್ತು ಜಿಟಿ ನಾಯಕ ಶುಭ್ ಮನ್ ಗಿಲ್ ತಮಾಷೆಯ ಕ್ಷಣಕ್ಕೆ ಸಾಕ್ಷಿಯಾದರು.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 38 ರನ್ ಗಳ ಅಮೋಘ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 225 ರನ್ ಗಳ ಬೃಹತ್ ಗುರಿ ನೀಡಿತು.

ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮೂಲಕ 34ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸತತ 5ನೇ ಜಯ ದಾಖಲಿಸಿದಂತಾಗಿದೆ. ಈ ಪೈಕಿ 3 ಗೆಲುವು ಅಹ್ಮದಾಬಾದ್ ನಲ್ಲೇ ಬಂದಿದೆ.

Abhishek Sharma ಗೆ ಕಾಲಿನಿಂದ ತಳ್ಳಿದ Shubman Gill

ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಚೇಸಿಂಗ್ ವೇಳೆ ಮೈದಾನದಲ್ಲಿ ಸಾಕಷ್ಟು ಹೈಡ್ರಾಮಾ ನಡೆಯಿತು. ಗುಜರಾತ್ ನಾಯಕ ಶುಭ್ ಮನ್ ಗಿಲ್ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದರು.

ಇದರ ನಡುವೆಯೇ ಮೈದಾನದಲ್ಲಿ ಕೆಳಗೆ ಕುಳಿತು ಗ್ಲೌಸ್ ಸರಿಪಡಿಸಿಕೊಳ್ಳುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಅಭಿಷೇಕ್ ಶರ್ಮಾ ಬಳಿ ಬಂದ ಗಿಲ್ ಕಾಲಿನಿಂದ ತಳ್ಳಿ ಬೇಗ ಎದ್ದೇಳೋ.. ತಡವಾದ್ರೆ ನಮಗೆ ಫೈನ್ ಹಾಕುತ್ತಾರೆ ಎಂಬ ಧಾಟಿಯಲ್ಲಿ ಅಭಿಷೇಕ್ ಶರ್ಮಾರನ್ನು ಎಬ್ಬಿಸಿದರು.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಐಪಿಎಲ್ ಇತಿಹಾಸದ ದಾಖಲೆ ಬರೆದ ಪಂದ್ಯ

ಇದೇ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ತಲಾ 20 ಓವರ್ ಗಳು ಪೂರ್ಣಗೊಂಡ ಪಂದ್ಯಗಳ ಪೈಕಿ ಅತೀ ಕಡಿಮೆ ಡಾಟ್ ಬಾಲ್ ಕಂಡ ಪಂದ್ಯ ಇದಾಗಿದೆ. ಈ ಹಿಂದೆ 2024ರಲ್ಲಿ ಹೈದರಾಬಾದ್ ನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 22 ಡಾಟ್ ಬಾಲ್ ಗಳು ಬಂದಿತ್ತು.

ಇದೀಗ ಈ ದಾಖಲೆಯನ್ನು ನಿನ್ನೆಯ ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಸಮಬಲ ಮಾಡಿವೆ. ನಿನ್ನೆ ಕೂಡ ಉಭಯ ತಂಡಗಳಿಂದ ಕೇವಲ 22 ಡಾಟ್ ಬಾಲ್ ಮಾತ್ರ ಬಂದಿದೆ.

Least dot balls played in an IPL innings (full 20 overs)

  • 22 - SRH vs MI, Hyderabad, 2024

  • 22 - GT vs SRH, Ahmedabad, 2025*

  • 23 - DC vs KKR, Sharjah, 2020

  • 23 - RCB vs SRH, Hyderabad, 2024

  • 24 - SRH vs PBKS, Mohali, 2017

  • 24 - GT vs CSK, Ahmedabad, 2024

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com