ಉಬರ್‌ನ ಆಕ್ಷೇಪಾರ್ಹ ಜಾಹೀರಾತಿಗೆ ತಡೆ ಕೋರಿ RCB ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಉಬರ್ ಜಾಹೀರಾತು ತನ್ನ ಟ್ರೇಡ್‌ಮಾರ್ಕ್ ಅನ್ನು ಅವಹೇಳನ ಮಾಡುತ್ತದೆ ಎಂದು ಆರೋಪಿಸಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಉಬರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಟ್ರಾವಿಸ್ ಹೆಡ್
ಉಬರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಟ್ರಾವಿಸ್ ಹೆಡ್
Updated on

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಸನ್‌ರೈಸರ್ಸ್ ಹೈದರಾಬಾದ್‌ (SRH) ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನೊಳಗೊಂಡ ಉಬರ್ ಮೋಟೋದ ಯೂಟ್ಯೂಬ್ ಜಾಹೀರಾತಿಗೆ ಮಧ್ಯಂತರ ತಡೆ ಕೋರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ, 'ಆಕ್ಷೇಪಾರ್ಹ ಜಾಹೀರಾತು ಕ್ರಿಕೆಟ್‌ಗೆ ಸಂಬಂಧಿಸಿದೆ. ಈ ಹಂತದಲ್ಲಿ ಜಾಹೀರಾತು ಸಮಸ್ಯಾತ್ಮಕ ಅಥವಾ ಕಾನೂನುಬಾಹಿರ ಎನ್ನಲಾಗುವುದಿಲ್ಲ. ಹೀಗಾಗಿ ಅದರಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ' ಎಂದು ತಿಳಿಸಿದರು.

'ನ್ಯಾಯಾಲಯವು ಮಧ್ಯಪ್ರವೇಶಿಸಿದರೆ, ದೂರುದಾರರಿಗೆ ಬೀಳುವುದಿಲ್ಲ ಎಂಬ ಭರವಸೆಯೊಂದಿಗೆ ನೀರಿನ ಮೇಲೆ ಓಡಲು ಅವಕಾಶ ನೀಡುವುದಕ್ಕೆ ಸಮನಾಗಿರುತ್ತದೆ. ಈ ಮನವಿಯು ಅವಾಸ್ತವಿಕವಾಗಿದ್ದು, ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಅನಗತ್ಯ. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಟ್ರಾವಿಸ್ ಹೆಡ್ ಅವರನ್ನೊಳಗೊಂಡ ಉಬರ್ ಮೋಟೋದ 'ಬ್ಯಾಡೀಸ್ ಇನ್ ಬೆಂಗಳೂರು' ಎಂಬ ಶೀರ್ಷಿಕೆಯ ಯೂಟ್ಯೂಬ್ ಜಾಹೀರಾತು ತನ್ನ ಟ್ರೇಡ್‌ಮಾರ್ಕ್ ಅನ್ನು ಅವಹೇಳನ ಮಾಡುತ್ತದೆ ಎಂದು ಆರೋಪಿಸಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಉಬರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಟ್ರಾವಿಸ್ ಹೆಡ್
IPL 2025, SRH vs PBKS: ಪಂಜಾಬ್ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಜೊತೆ ಟ್ರಾವಿಸ್ ಹೆಡ್ ಕಿತ್ತಾಟ!

ಕ್ರೀಡಾಂಗಣದೊಳಗೆ ಬರುವ ಟ್ರಾವಿಸ್ ಹೆಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ತಂಡದ ನಡುವಿನ ಪಂದ್ಯದ ಫಲಕದಲ್ಲಿ ಸ್ಪ್ರೇ ಪೇಂಟ್ ಬಳಸಿ 'ರಾಯಲಿ ಚಾಲೆಂಜ್ಡ್ ಬೆಂಗಳೂರು' ಎಂದು ಬದಲಿಸುತ್ತಾರೆ. ಆಗ ಭದ್ರತಾ ಸಿಬ್ಬಂದಿ ಅವರ ಬೆನ್ನಟ್ಟುತ್ತಾರೆ. ಆಗ ಮೂರು ನಿಮಿಷಗಳಲ್ಲಿ ಉಬರ್‌ನ ಬೈಕ್‌ನಲ್ಲಿ ಹೆಡ್ ತಪ್ಪಿಸಿಕೊಳ್ಳುತ್ತಾರೆ.

ಆರ್‌ಸಿಬಿ ವಕೀಲರು, 'ಕ್ರಿಕೆಟಿಗ 'ಬೆಂಗಳೂರು vs ಹೈದರಾಬಾದ್' ಎಂಬ ಫಲಕವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಬೆಂಗಳೂರು ಕ್ರಿಕೆಟ್ ಕ್ರೀಡಾಂಗಣದ ಕಡೆಗೆ ಓಡುತ್ತಿರುವುದನ್ನು ಕಾಣಬಹುದು. ಸ್ಪ್ರೇ ಪೇಂಟ್ ಬಳಸಿ 'ರಾಯಲಿ ಚಾಲೆಂಜ್ಡ್ ಬೆಂಗಳೂರು' ಎಂದು ಬರೆದಿದ್ದಾರೆ. ಈ ಮೂಲಕ ಆರ್‌ಸಿಬಿಯ ಹೆಸರನ್ನು ಅವಹೇಳನ ಮಾಡಲಾಗಿದೆ ಎಂದು ವಾದಿಸಿದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ವಾಣಿಜ್ಯ ಪ್ರಾಯೋಜಕರಾಗಿರುವ ಉಬರ್ ಮೋಟೋ, ತನ್ನ ಉತ್ಪನ್ನವನ್ನು ಪ್ರಚಾರ ಮಾಡುವಾಗ, ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಬಳಸಿದೆ. ಇದು ಕಾನೂನಿನ ಅಡಿಯಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಉಬರ್ ಪರ ವಕೀಲರು, ಆರ್‌ಸಿಬಿ ಸಾರ್ವಜನಿಕರ ಹಾಸ್ಯಪ್ರಜ್ಞೆಯನ್ನು ತೀವ್ರವಾಗಿ ನಿರ್ಲಕ್ಷಿಸಿದೆ. ಉತ್ತಮ ಹಾಸ್ಯ, ಮೋಜಿನ ಪ್ರಜ್ಞೆ ಮತ್ತು ಹಾಸ್ಯಪ್ರದರ್ಶನಗಳು ಜಾಹೀರಾತು ಸಂದೇಶ ಕಳುಹಿಸುವಿಕೆಯಲ್ಲಿ ಅಂತರ್ಗತವಾಗಿವೆ ಮತ್ತು ಆರ್‌ಸಿಬಿ ಪ್ರಸ್ತಾಪಿಸಿದಂತೆ ಅಂತಹ ಮಾನದಂಡವನ್ನು ಅನ್ವಯಿಸಿದರೆ, ಈ ಅಂಶಗಳು ಕೊಲ್ಲಲ್ಪಡುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com