
ನವದೆಹಲಿ: ಮೇ 17 ರಂದು ಬೆಂಗಳೂರಿನಲ್ಲಿ ಆರ್ ಸಿಬಿ VS ಕೆಕೆಆರ್ ನಡುವಿನ ಪಂದ್ಯದೊಂದಿಗೆ IPL 2025 ಪುನರಾರಂಭಕ್ಕೆ ಎಲ್ಲಾ ಸಿದ್ದತೆ ನಡೆದಿದೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ Boycott Delhi Capitals ಟ್ರೆಂಡ್ ಆಗುತ್ತಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಅನೇಕ ನೆಟಿಜನ್ ಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ದೆಹಲಿ ಕ್ಯಾಪಿಟಲ್ಸ್ ಅನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುತ್ತಿದ್ದಾರೆ.
ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದ ಆಟಗಾರನನ್ನು ಕರೆತರುವುದು ಸರಿಯಲ್ಲ. ಮುಸ್ತಾಫಿಜುರ್ ರೆಹಮಾನ್ ದೇಶದಲ್ಲಿ ಹಿಂದೂ ಧರ್ಮದ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ.ಇತ್ತೀಚಿನ ಪಾಕ್ ವಿರುದ್ಧದ ಸೇನಾ ಸಂಘರ್ಷದ ವೇಳೆ ಬಾಂಗ್ಲಾದೇಶವು ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಿದೆ. ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಇರಬಾರದು ಅನೇಕ ಜನರು ವಾದಿಸುತ್ತಿದ್ದಾರೆ.
ಮುಸ್ತಾಫಿಜುರ್ ರೆಹಮಾನ್ ಕಳೆದೊಂದು ದಶಕದಿಂದ ಬಾಂಗ್ಲಾದೇಶದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲೂ ಕೆಲವು ಪ್ರಬಲ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಐಪಿಎಲ್‌ನಲ್ಲಿ ಐದು ವಿಭಿನ್ನ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ ಮತ್ತು ಕಳೆದ ವರ್ಷ ಸಿಎಸ್‌ಕೆ ಪರ ಕೇವಲ ಒಂಬತ್ತು ಪಂದ್ಯಗಳಲ್ಲಿ 14 ವಿಕೆಟ್ ಕಿತ್ತಿದ್ದರು.
IPL 2022 ಮತ್ತು 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದರು. ವಿದೇಶಕ್ಕೆ ಮರಳಿದ ಮಿಚೆಲ್ ಸ್ಟಾರ್ಕ್ ವಾಪಸ್ ಬರುವುದಾಗಿ ತಿಳಿಸಿಲ್ಲ. ಹೀಗಾಗಿ ಮುಸ್ತಾಫಿಜುರ್ ಅವರು ವೇಗದ ದಾಳಿ ಮುನ್ನಡೆಸಬಹುದು ಎಂಬುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಕ್ಕಾಚಾರವಾಗಿದೆ.
Advertisement