
ಪರ್ತ್: ವಿದೇಶಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಮರಳುವುದು ಬುದ್ಧಿವಂತರ ಲಕ್ಷಣವಲ್ಲ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಇಂತಹ ಸಂದರ್ಭಗಳಲ್ಲಿ ವೇತನ ಚೆಕ್‌ಗಳಿಗಿಂತ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಿಚೆಲ್ ಜಾನ್ಸನ್ ಹೇಳಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ವಿಶ್ವದ ಅತಿದೊಡ್ಡ ಟಿ20 ಲೀಗ್ ಅನ್ನು ಮೇ 9 ರಂದು ಒಂದು ವಾರ ಸ್ಥಗಿತಗೊಳಿಸಲಾಯಿತು.
ಐಪಿಎಲ್ ಸ್ಥಗಿತಗೊಂಡ ಒಂದು ದಿನದ ನಂತರ, ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಯಿತು. ಬಳಿಕ ಮೇ 17ರಿಂದ ಐಪಿಎಲ್ ಪುನರಾರಂಭಿಸಲು ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಆದಾಗ್ಯೂ, ವಿದೇಶಿ ಆಟಗಾರರು ಉಳಿದ ಐಪಿಎಲ್ ಪಂದ್ಯಗಳಿಂದ ದೂರವಿರುವುದೇ ವಿವೇಕಯುತ ನಿರ್ಧಾರ. ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದರೂ, ಆ ಆಯ್ಕೆಗಳ ತೂಕವು ಭಾರವಾಗಿರುತ್ತದೆ ಎಂದು ಜಾನ್ಸನ್ ವೆಸ್ಟ್ ಆಸ್ಟ್ರೇಲಿಯನ್‌ಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಭಾರಿ ಹಣ ಹೂಡಿಕೆಯಾಗಬಹುದು. ಆದರೆ, ಅದು ಇನ್ನೂ ಕೇವಲ ಒಂದು ಆಟವಾಗಿದೆ ಮತ್ತು ಈ ವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ ವಿರಾಮದ ನಂತರ ಅದರ ಬಗ್ಗೆ ತೀವ್ರ ಗಮನ ಹರಿಸಲಾಗಿದೆ. ನಾನು ಭಾರತಕ್ಕೆ ಮರಳಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೇ ಎಂದು ನಿರ್ಧರಿಸಬೇಕಾದರೆ, ಅದು ಸುಲಭದ ನಿರ್ಧಾರವಾಗಿರುತ್ತದೆ. ಆದರೆ, ಅದು ನನಗೆ ಬೇಕಾಗಿಲ್ಲ. ಜೀವ ಮತ್ತು ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಹೊರತು ವೇತನ ಚೆಕ್‌ಗಳಲ್ಲ ಎಂದು ಹೇಳಿದ್ದಾರೆ.
ಸಂಬಂಧಪಟ್ಟವರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ ನಂತರ ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆದು ಲೀಗ್ ಅನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ. ಮೇ 25ರಂದು ನಿಗದಿಯಾಗಿದ್ದ ಫೈನಲ್ ಅನ್ನು ಜೂನ್ 3ಕ್ಕೆ ಮುಂದೂಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಿಂದಾಗಿ ಐಪಿಎಲ್ ಪ್ಲೇ-ಆಫ್‌ಗಳಲ್ಲಿ ಭಾಗವಹಿಸಲು ನಿರ್ಧರಿಸಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ಪ್ರಾರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ತಯಾರಿ ನಡೆಸಲು ಹೆಚ್ಚಿನ ಸಮಯಾವಕಾಶವಿಲ್ಲದಂತಾಗಿದೆ.
'ಇದು ವೈಯಕ್ತಿಕ ನಿರ್ಧಾರ. ಐಪಿಎಲ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ ಸ್ಥಗಿತಗೊಂಡಿದ್ದರೂ ಸಹ, ಯಾರೂ ಹಿಂದೆ ಸರಿಯುವಂತೆ ಒತ್ತಾಯಿಸಬಾರದು ಅಥವಾ ಒತ್ತಡ ಹೇರಬಾರದು. ಎರಡೂ ಪಂದ್ಯಾವಳಿಗಳು ಈಗಲೇ ಕೊನೆಗೊಳ್ಳಬೇಕು ಅಥವಾ ಸ್ಥಳಾಂತರಗೊಳ್ಳುವುದನ್ನು ಪರಿಗಣಿಸಬೇಕು ಮತ್ತು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಕೆಲವು ಆಟಗಾರರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಿದ್ಧರಾಗಬೇಕಾಗುತ್ತದೆ ಎಂಬುದನ್ನು ನಾವು ಮರೆಯಬಾರದು' ಎಂದಿದ್ದಾರೆ.
ಲಾರ್ಡ್ಸ್‌ನಲ್ಲಿ ಡಬ್ಲ್ಯುಟಿಸಿ ಫೈನಲ್ ಆರಂಭವಾಗಲು ಕೇವಲ ಒಂದು ವಾರ ಬಾಕಿ ಇರುವಾಗ, ಐಪಿಎಲ್ ಫೈನಲ್ ಅನ್ನು ಜೂನ್ 3ಕ್ಕೆ ಮುಂದೂಡಲಾಗಿದೆ. ಟೆಸ್ಟ್ ಕ್ರಿಕೆಟ್‌ನ ಶೋಪೀಸ್ ಪಂದ್ಯ ಎಂದು ಹೇಳಲಾಗುವ ಪಂದ್ಯಕ್ಕೆ ಆಟಗಾರರ ಸಿದ್ಧತೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ಕೂಡ ಮತ್ತೊಂದು ಸಮಸ್ಯೆಯಾಗಿದೆ.
'ತವರು ನೆಲಕ್ಕೆ ಹಿಂದಿರುಗಿದ್ದ ಬಹುತೇಕ ವಿದೇಶಿ ಆಟಗಾರರು ಉಳಿದ ಪಂದ್ಯಗಳಿಗೆ ಮರಳುವ ನಿರೀಕ್ಷೆಯಿದ್ದರೂ, ಕೆಲವರು ಆತಂಕದಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆ ಮತ್ತು ಏಕತೆಯ ಮೂಲವಾಗಿದೆ. ಪ್ರಸ್ತುತ ಪರಿಸ್ಥಿತಿಯಿಂದ ಎದುರಾಗುವ ಸವಾಲುಗಳ ಹೊರತಾಗಿಯೂ, ಆಟದ ಮೇಲಿನ ಉತ್ಸಾಹ ಅಚಲವಾಗಿದೆ. ಆಟಗಾರರು, ಅಭಿಮಾನಿಗಳು ಮತ್ತು ಈ ಲೀಗ್‌ಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು' ಎಂದು ಜಾನ್ಸನ್ ಬರೆದಿದ್ದಾರೆ.
ಕ್ರಿಕೆಟ್ ವಿಭಜನೆಗಳನ್ನು ಕಡಿಮೆ ಮಾಡಬಹುದು ಮತ್ತು ಸೌಹಾರ್ದತೆಯನ್ನು ಉತ್ತೇಜಿಸಬಹುದು. ಆದರೆ, ಅಂತಹ ಉದ್ವಿಗ್ನ ವಾತಾವರಣದಲ್ಲಿ ಆಡುವ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯ ಎಂದು ಒತ್ತಾಯಿಸಿದ್ದಾರೆ.
ಅಂತಿಮವಾಗಿ, ಕ್ರೀಡಾಕೂಟಗಳು ಸಕಾರಾತ್ಮಕ ವಾತಾವರಣದಲ್ಲಿ ಪುನರಾರಂಭಗೊಳ್ಳಬಹುದು ಎಂಬ ಭರವಸೆ ಇದೆ. ಆದರೆ, ಈ ವಾರಾಂತ್ಯದಲ್ಲಿ ಎರಡೂ ಪಂದ್ಯಾವಳಿಗಳನ್ನು ಪುನರಾರಂಭಿಸಲು ಅವಕಾಶ ನೀಡುವುದರಿಂದ ಸ್ವಲ್ಪ ಪ್ರತಿಕ್ರಿಯೆ ಉಂಟಾಗುತ್ತದೆ. ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕಡಿಮೆಯಾದ ನಂತರ, ಎರಡೂ ಲೀಗ್‌ಗಳು ಮತ್ತೆ ಆರಂಭಗೊಳ್ಳಬಹುದು ಮತ್ತು ಅಸಂಖ್ಯಾತ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನು ತರಬಹುದು ಎಂದು ಆಶಿಸುತ್ತೇವೆ ಎಂದರು.
Advertisement