
ಬೆಂಗಳೂರು: ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ SHAME ON DESHDROHI DHONI ಭಾರಿ ಟ್ರೆಂಡ್ ಆಗುತ್ತಿದೆ.
ಸೋಶಿಯಲ್ ಮೀಡಿಯಾ ತುಂಬೆಲ್ಲಾ ಹ್ಯಾಷ್ ಟಾಗ್ ಬಳಸಿ SHAME ON DESHDROHI DHONI ಎಂದು ಫೋಸ್ಟ್ ಮಾಡುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಬೆಂಬಲಿಗರ ನಡುವೆ ವಾರ್ ಶುರುವಾಗಿದೆ.
'ನಿಜವಾದ ಅಭಿಮಾನಿಗಳನ್ನು' ಹೊಂದಿರುವ ಏಕೈಕ ಭಾರತೀಯ ಕ್ರಿಕೆಟಿಗ ಭಾರತದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿ, ಉಳಿದವರಿಗೆ ಇರುವ ಅಭಿಮಾನಿಗಳಿಗೆ ಹಣ ನೀಡಲಾಗುತ್ತಿದೆ ಎಂದು ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆ RCB ಅಭಿಮಾನಿಗಳನ್ನು ಕೆರಳಿಸಿದೆ.
ಇದರಿಂದ ಸಿಡಿದೆದ್ದಿರುವ ಕೊಹ್ಲಿ ಅಭಿಮಾನಿಗಳು, ಧೋನಿ ಅವರ ನಾನಾ ರೀತಿಯ ಫೋಟೋ ಹಾಗೂ ವಿಡಿಯೋಗಳನ್ನು ಫೋಸ್ಟ್ ಮಾಡುವ ಮೂಲಕ ದೇಶದ್ರೋಹಿ ಧೋನಿ ಎಂದು ಕರೆಯುತ್ತಿದ್ದಾರೆ.
ಹರ್ಭಜನ್ ಸಿಂಗ್ ಹೇಳಿದ್ದು ಏನು? ಹೌದು. ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಜಿಯೋಸ್ಟಾರ್‌ನಲ್ಲಿ ನಡೆದ ಚಾಟ್‌ನಲ್ಲಿ, ಧೋನಿಯ ಅಭಿಮಾನಿಗಳು ನಿಜವಾದವರು. ಆದರೆ, ಇತರ ಆಟಗಾರರ ಅಭಿಮಾನಿಗಳು 'Paid' ಎಂದು ಹೇಳುವ ಮೂಲಕ ಹರ್ಭಜನ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
CSK ಅಭಿಮಾನಿಗಳು ಅತ್ಯಂತ ನಿಷ್ಠಾವಂತ ಅಭಿಮಾನಿಗಳು ಎಂದು ನಾನು ಭಾವಿಸುತ್ತೇನೆ. ಇತರರು ನಕಲಿ ಅಭಿಮಾನಿಗಳು, ಅವರಲ್ಲಿ ಹಲವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಹಣ ಪಡೆಯುತ್ತಾರೆ. ಆದರೆ, ಧೋನಿ ಅವರ ಅಭಿಮಾನಿಗಳು ರಿಯಲ್. ನೀವು ನೋಡುವ ಸಂಖ್ಯೆಗಳನ್ನು ಪಕ್ಕಕ್ಕಿಡಿ. ಎಂಎಸ್ ಧೋನಿ ಈ ಬಾರಿ ಚೆನ್ನಾಗಿ ಆಡಿದ್ದಾರೆ. ಅವರು ಸಭ್ಯವಾಗಿ ಆಡಿದ್ದಾರೆ' ಎಂದು ಮಾಜಿ ಸ್ಪಿನ್ನರ್ ಹೇಳಿದರು.
ಕೆಲವು ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ವಿರಾಟ್ ಕೊಹ್ಲಿ ಅವರಿಗೆ ಗೌರವ ಸಲ್ಲಿಸಲು ಬಿಳಿ ಜೆರ್ಸಿ ತೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕಂಡು ಹರ್ಭಜನ್ ಅವರು ಈ ಹೇಳಿಕೆ ನೀಡಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
Advertisement