
ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮಾನಿಗಳ ನಡುವಿನ ಕಲಹಗಳು ಅಸಾಮಾನ್ಯವೇನಲ್ಲ. ಆಗಾಗ ಒಬ್ಬ ಕ್ರಿಕೆಟಿಗನ ಅಭಿಮಾನಿ ಗುಂಪುಗಳು ಇತರ ಕ್ರಿಕೆಟಿಗರ ಅಭಿಮಾನಿ ಗುಂಪುಗಳೊಂದಿಗೆ ಚರ್ಚೆಯಲ್ಲಿ ತೊಡಗುತ್ತವೆ. ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಾರೆ. ಆಟಗಾರ ಮತ್ತು ಆಟದ ಬಗ್ಗೆ ತೀವ್ರ ಪ್ರೀತಿಯನ್ನು ಹೊಂದಿರುವ ಅಭಿಮಾನಗಳ ಅಸಂಖ್ಯಾತ ಬಳಗವೇ ಇದೆ. ಇದೀಗ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಮಾನಿಗಳ ಕುರಿತು ಹೇಳಿಕೆ ನೀಡಿ, ವಿವಾದಕ್ಕೆ ಸಿಲುಕಿದ್ದಾರೆ.
'ನಿಜವಾದ ಅಭಿಮಾನಿಗಳನ್ನು' ಹೊಂದಿರುವ ಏಕೈಕ ಭಾರತೀಯ ಕ್ರಿಕೆಟಿಗ ಭಾರತದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿ ಎಂದಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಹರ್ಭಜನ್ ಈ ಹೇಳಿಕೆ ನೀಡಿದ್ದಾರೆ. ಜಿಯೋಸ್ಟಾರ್‌ನಲ್ಲಿ ನಡೆದ ಚಾಟ್‌ನಲ್ಲಿ, ಧೋನಿಯ ಅಭಿಮಾನಿಗಳು ನಿಜವಾದವರು. ಆದರೆ, ಇತರ ಆಟಗಾರರ ಅಭಿಮಾನಿಗಳು 'Paid' ಎಂದು ಹೇಳುವ ಮೂಲಕ ಹರ್ಭಜನ್ ವಿವಾದಕ್ಕೆ ದಾರಿಮಾಡಿಕೊಟ್ಟಿದ್ದಾರೆ.
'ಯಾವುದೇ ಕ್ರಿಕೆಟಿಗನಿಗೆ ನಿಜವಾದ ಅಭಿಮಾನಿಗಳಿದ್ದರೆ ಅದು ಧೋನಿಗೆ ಮಾತ್ರ. ಉಳಿದವರಿಗೆ ಇರುವ ಅಭಿಮಾನಿಗಳಿಗೆ ಹಣ ನೀಡಲಾಗುತ್ತದೆ' ಎಂದು ಹರ್ಭಜನ್ ಹೇಳಿದರು.
ಅವರ (CSK) ಅಭಿಮಾನಿಗಳು ಅತ್ಯಂತ ನಿಷ್ಠಾವಂತ ಅಭಿಮಾನಿಗಳು ಎಂದು ನಾನು ಭಾವಿಸುತ್ತೇನೆ. ಇತರರು ನಕಲಿ ಅಭಿಮಾನಿಗಳು, ಅವರಲ್ಲಿ ಹಲವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಹಣ ಪಡೆಯುತ್ತಾರೆ. ಆದರೆ, ಧೋನಿ ಅವರ ಅಭಿಮಾನಿಗಳು ರಿಯಲ್. ನೀವು ನೋಡುವ ಸಂಖ್ಯೆಗಳನ್ನು ಪಕ್ಕಕ್ಕಿಡಿ. ಎಂಎಸ್ ಧೋನಿ ಈ ಬಾರಿ ಚೆನ್ನಾಗಿ ಆಡಿದ್ದಾರೆ. ಅವರು ಸಭ್ಯವಾಗಿ ಆಡಿದ್ದಾರೆ' ಎಂದು ಮಾಜಿ ಸ್ಪಿನ್ನರ್ ಹೇಳಿದರು.
ಚರ್ಚೆಯ ಭಾಗವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, 'ಇಷ್ಟು ಸತ್ಯ' ಹೇಳಬಾರದಿತ್ತು ಎಂದು ಹರ್ಭಜನ್ ಅವರಿಗೆ ಹೇಳಿದರು.
ಕೆಲವು ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ವಿರಾಟ್ ಕೊಹ್ಲಿ ಅವರಿಗೆ ಗೌರವ ಸಲ್ಲಿಸಲು ಬಿಳಿ ಜೆರ್ಸಿ ತೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕಂಡು ಹರ್ಭಜನ್ ಅವರು ಈ ಹೇಳಿಕೆ ನೀಡಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ vs ಕೆಕೆಆರ್ ಪಂದ್ಯವು ಮಳೆಯಿಂದಾಗಿ ರದ್ದಾದರೂ, ಕೊಹ್ಲಿ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಲು ಅವರ ಟೆಸ್ಟ್ ಸಮವಸ್ತ್ರವನ್ನು ಧರಿಸಿದ್ದರು. 36 ವರ್ಷದ ಆಟಗಾರನು ಇಷ್ಟು ಬೇಗ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಭಿಮಾನಿಗಳ ಗುಂಪು ಒತ್ತಾಯಿಸಿತು.
Advertisement