
ನವದೆಹಲಿ: ಭಾರತ -ಪಾಕಿಸ್ತಾನ ಉದ್ವಿಗ್ನತೆ ಸಂದರ್ಭದಲ್ಲಿ ಇಂಗ್ಲೆಂಡ್ ನ ವೇಗಿ ಟಾಮ್ ಕರ್ರಾನ್ ಮಗುವಿನಂತೆ ಅತ್ತಿದ್ದರು ಎಂದು ಹೇಳಲಾಗಿತ್ತು. ಈ ಕುರಿತು ಕೊನೆಗೂ ಅವರು ಮೌನ ಮುರಿದಿದ್ದಾರೆ. ಬಾಂಗ್ಲಾದೇಶದ ಆಲ್‌ರೌಂಡರ್ ರಿಶಾದ್ ಹೊಸೈನ್ ನೀಡಿದ ಹೇಳಿಕೆಯನ್ನು ಅವರು ತಳ್ಳಿ ಹಾಕಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿರುವ ಕರ್ರಾನ್, ಕಠಿಣ ಸಂದರ್ಭದಲ್ಲಿ ನಾನು ಅತ್ತಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಸದ್ಯ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (PSL) ಲಾಹೋರ್ ಖಲಂದರ್ಸ್‌ಗಾಗಿ ಆಡುತ್ತಿರುವ ಕರ್ರಾನ್, ಕದನ ವಿರಾಮದ ನಂತರ ಲೀಗ್ ಮತ್ತೆ ಪುನರಾರಂಭ ಆಗಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೆ ಲೀಗ್ ಆರಂಭವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಎರಡು ವಿಶೇಷ ದೇಶಗಳ ನಡುವೆ ನಿರಂತರ ಶಾಂತಿಗಾಗಿ ನಾನು ಪ್ರಾರ್ಥಿಸುತ್ತೇನೆ. "Btw promise ನಾನು ಅತ್ತಿಲ್ಲ ಎಂದು ನಗುವ ಎಮೋಜಿ ಹಾಕಿದ್ದಾರೆ.
ಈ ಹಿಂದೆ ಟಾಮ್ ಕರ್ರಾನ್ ವಿಮಾನ ನಿಲ್ದಾಣಕ್ಕೆ ಹೋದಾಗ ಮುಚ್ಚಿದ್ದರಿಂದ ಅವರು ಚಿಕ್ಕ ಮಗುವಿನಂತೆ ಅತ್ತಿದ್ದರು. ಅವರನ್ನು ಸಮಾಧಾನಪಡಿಸಲು ಎರಡು ಅಥವಾ ಮೂರು ಜನರು ಬೇಕಾದರು ಎಂದು ರಿಶಾದ್ ಕ್ರಿಕ್‌ಬಜ್‌ಗೆ ತಿಳಿಸಿದರು. ಆದಾಗ್ಯೂ, ತದನಂತರ ರಿಷಾದ್ ತನ್ನ ಹೇಳಿಕೆಗಾಗಿ ಕರ್ರಾನ್ ಮತ್ತು ಮಿಚ್ಚೆಲ್ ಅವರ ಕ್ಷಮೆಯಾಚಿಸಿದ್ದಾರೆ.
Advertisement