IPL 2025: DC ವಿರುದ್ಧ 10 ವಿಕೆಟ್ ಭರ್ಜರಿ ಜಯ; GT ದಾಖಲೆಗಳ ಸುರಿಮಳೆ

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು.
Gujarat Titans Creates Many Records
ಗುಜರಾತ್ ಟೈಟನ್ಸ್ ಬ್ಯಾಟಿಂಗ್
Updated on

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ ಅಂತರದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಐಪಿಎಲ್ ಇತಿಹಾಸದ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೆಎಲ್ ರಾಹುಲ್ ರ ಅಜೇಯ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.

ಡೆಲ್ಲಿ ನೀಡಿದ 200 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ಸಾಯಿ ಸುದರ್ಶನ್ ಅಜೇಯ ಶತಕ (108*) ಮತ್ತು ನಾಯಕ ಶುಭ್ ಮನ್ ಗಿಲ್ (93*) ಅರ್ಧಶತಕದ ನೆರವಿನಿಂದ 10 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಗುಜರಾತ್ ತಂಡ ಪ್ಲೇ ಆಫ್ ಗೇರಿದ್ದು ಮಾತ್ರವಲ್ಲ.. ಹಲವು ದಾಖಲೆಗಳ ಸುರಿಮೆಳಯನ್ನೇ ಸುರಿಸಿದೆ.

Gujarat Titans Creates Many Records
IPL 2025: ಐಪಿಎಲ್ ಇತಿಹಾಸ, ಒಂದೇ ಬಾರಿಗೆ 3 ತಂಡಗಳು ಪ್ಲೇಆಫ್ ಗೆ ಪ್ರವೇಶ

3ನೇ ಬಾರಿಗೆ ಡೆಲ್ಲಿಗೆ 10 ಅಂತರದ ಮುಖಭಂಗ

ಇನ್ನು ಐಪಿಎಲ್ ಇತಿಹಾಸದಲ್ಲಿ ಡೆ್ಲ್ಲಿ ತಂಡ 3ನೇ ಬಾರಿಗೆ 10 ವಿಕೆಟ್ ಅಂತರದಲ್ಲಿ ಸೋತಿದೆ. ಈ ಹಿಂದೆ 2015ರಲ್ಲಿ ಆರ್ ಸಿಬಿ ವಿರುದ್ಧ ಇದೇ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 10 ವಿಕೆಟ್ ಅಂತರದಲ್ಲಿ ಸೋತಿತ್ತು. ಬಳಿಕ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ 2017ರಲ್ಲಿ 10 ವಿಕೆಟ್ ಅಂತರದಲ್ಲಿ ಸೋತಿತ್ತು. ಇದೀಗ ಮತ್ತೆ ತವರಿನಲ್ಲಿ ಗುಜರಾತ್ ವಿರುದ್ಧ 10 ವಿಕೆಟ್ ಅಂತರದಲ್ಲಿ ಸೋತಿದೆ.

ಅಂತೆಯೇ ಗುಜರಾತ್ ಟೈಟಾನ್ಸ್‌ಗೆ ಇದು ಮೊದಲ 10 ವಿಕೆಟ್‌ಗಳ ಗೆಲುವಾಗಿದ್ದು, ಅಜೇಯ 205 ರನ್‌ಗಳ ಪಾಲುದಾರಿಕೆಯು ಐಪಿಎಲ್ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಸಾಧಿಸಿದ ಅತ್ಯಧಿಕ ಮೊತ್ತವಾಗಿದೆ.

Ten-wicket defeat for DC in the IPL

  • vs RCB, Delhi, 2015

  • vs PBKS, Mohali, 2017

  • vs GT, Delhi, 2025*

This is the first 10-wicket victory for Gujarat Titans and the 205* runs partnership is also the highest to get a 10-wicket win in an IPL game.

ದೆಹಲಿ ವಿರುದ್ಧ 2ನೇ ಬಾರಿಗೆ 200 ಅಥವಾ ಅದಕ್ಕಿಂತ ಹೆಚ್ಚು ರನ್ ಚೇಸ್

ಇನ್ನು ಹಾಲಿ ಟೂರ್ನಿಯಲ್ಲಿ ಗುಜರಾತ್ ತಂಡ 2ನೇ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. ಈ ಹಿಂದೆ ಅಹ್ಮದಾಬಾದ್ ಪಂದ್ಯದಲ್ಲೂ ಡೆಲ್ಲಿ ನೀಡಿದ್ದ 204ರನ್ ಗುರಿಯನ್ನು ಗುಜರಾತ್ ಯಶಸ್ವಿಯಾಗಿ ಬೆನ್ನಟ್ಟಿತ್ತು.

Highest successful run-chases vs DC

  • 204 - GT, Ahmedabad, 2025

  • 200 - GT, Delhi, 2025*

  • 188 - CSK, Delhi, 2008

  • 188 - SRH, Delhi, 2018

Highest successful run-chases for GT

  • 204 vs DC, Ahmedabad, 2025

  • 200 vs DC, Delhi, 2025*

  • 198 vs RCB, Bengaluru, 2023

  • 197 vs RR, Jaipur, 2024

ಎಲೈಟ್ ಗ್ರೂಪ್ ಸೇರಿದ ಗಿಲ್ ಮತ್ತು ಸಾಯಿ ಸುದರ್ಶನ್

ಇನ್ನು ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅಮೋಘ ಜೊತೆಯಾಟದ ದಾಖಲೆ ನಿರ್ಮಿಸಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್ ಗೆ 205 ರನ್ ಕಲೆಹಾಕಿತು.

ಸಾಯಿ ಸುದರ್ಶನ್ ಅಜೇಯ ಶತಕ (108*)ಗಳಿಸಿದರೆ ಮತ್ತು ನಾಯಕ ಶುಭ್ ಮನ್ ಗಿಲ್ (93*) ಕೇವಲ 7 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಆ ಮೂಲಕ ಈ ಜೋಡಿ ಐಪಿಎಲ್ ನಲ್ಲಿ ಗರಿಷ್ಠ ಜೊತೆಯಾಟ ವಾಡಿದ 3ನೇ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.

ಈ ಹಿಂದೆ 2022ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಜೋಡಿ ಅಜೇಯ 210 ರನ್ ಜೊತೆಯಾಟವಾಡಿತ್ತು. ಬಳಿಕ ಇದೇ ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ ಜೋಡಿ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 210 ಜೊತೆಯಾಟವಾಡಿದ್ದರು.

Highest opening stand in the IPL

  • 210* - KL Rahul & Q de Kock (LSG) vs KKR, 2022

  • 210 - Shubman Gill & Sai Sudharsan vs CSK, 2024

  • 205* - Shubman Gill & Sai Sudharsan vs DC, 2025*

  • 185 - Jonny Bairstwo & David Warner vs RCB, 2019

ಐಪಿಎಲ್ ಇತಿಹಾಸದ ಗರಿಷ್ಠ ಜೊತೆಯಾಟ

ಅಂತೆಯೇ ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ ಜೋಡಿ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ ನಲ್ಲಿ ಗರಿಷ್ಠ ರನ್ ಜೊತೆಯಾಟವಾಡಿದ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ. ಹಾಲಿ ಸೀಸನ್ ನಲ್ಲಿ ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ ಜೋಡಿ ಬರೊಬ್ಬರಿ 839 ರನ್ ಜೊತೆಯಾಟವಾಡಿದೆ.

ಇದಕ್ಕೂ ಮೊದಲು ಅಂದರೆ 2021ರಲ್ಲಿ ಡೆಲ್ಲಿ ಪರ ಶಿಖರ್ ಧವನ್ ಮತ್ತು ಪೃಥ್ವಿ ಶಾ ಜೋಡಿ 744 ರನ್ ಕಲೆಹಾಕಿತ್ತು.

Most runs by an Indian pair in an IPL season

  • 839 - Shubman Gill & Sai Sudharsan (GT, 2025)*

  • 744 - Shikhar Dhawan & Prithvi Shaw (DC, 2021)

  • 671 - Mayank Agarwal & KL Rahul (PBKS, 2020)

  • 602 - Mayank Agarwal & KL Rahul (PBKS, 2021)

  • 601 - Virat Kohli & Devdutt Padikkal (RCB, 2021)

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com