
ಲಖನೌ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ರಿಷಬ್ ಪಂತ್ (Rishab pant) ಫ್ಲಾಪ್ ಷೋ ಮುಂದುವರೆದಿದ್ದು, ಇಂದೂ ಕೂಡ ಪಂತ್ ಸಿಂಗಲ್ ಡಿಜಿಟ್ ಗೆ ಔಟಾಗಿದ್ದಾರೆ.
ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಶ್ ಮತ್ತು ಏಯ್ಡನ್ ಮಾರ್ಕ್ರಾಮ್ ಭರ್ಜರಿ ಆರಂಭ ಒದಗಿಸಿದರು.
ಮೊದಲ ವಿಕೆಟ್ ಗೆ ಈ ಜೋಡಿ 115 ರನ್ ಕಲೆಹಾಕಿತು. ಈ ಹಂತದಲ್ಲಿ 65 ರನ್ ಗಳಿಸಿ ಅಪಾಯಕಾರಿಯಾಗಿದ್ದ ಮಿಚೆಲ್ ಮಾರ್ಶ್ ಹರ್ಶ್ ದುಬೆ ಬೌಲಿಂಗ್ ನಲ್ಲಿ ಔಟಾದರು. ಈ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಬ್ ಪಂತ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು.
ಭಡ್ತಿ ನೀಡಿದರೂ ಪ್ರಯೋಜನ ಇಲ್ಲ
ಇನ್ನು ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ರಿಷಬ್ ಪಂತ್ ಈ ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಭಡ್ತಿ ಪಡೆದುಕೊಂಡು ಬಂದರು. ಆದರೂ ಅವರ ಅದೃಷ್ಟ ಕೈ ಹಿಡಿಯಲಿಲ್ಲ. 6 ಎಸೆತಗಳಲ್ಲಿ 1 ಬೌಂಡರಿ ಸಹಿತ 7 ರನ್ ಗಳಿಸಿದ್ದ ಪಂತ್ ಕ್ರೀಸ್ ಗೆ ಗಟ್ಟಿಯಾಗಿ ಅಂಟಿಕೊಳ್ಳುವಷ್ಟರಲ್ಲೇ ಇಶಾನ್ ಮಲಿಂಗಾ ಬೌಲಿಂಗ್ ನಲ್ಲಿ ಔಟಾದರು. 6 ಎಸೆತಗಳಲ್ಲಿ 1 ಬೌಂಡರಿ ಸಹಿತ 7 ರನ್ ಗಳಿಸಿ ಆಡುತ್ತಿದ್ದ ರಿಷಬ್ ಪಂತ್ ಲಕ್ನೋ ಇನ್ನಿಂಗ್ಸ್ ನ 12ನೇ ಓವರ್ ನ ಅಂತಿಮ ಎಸೆತದಲ್ಲಿ ಇಶಾನ್ ಮಲಿಂಗಾ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
ಇಶಾನ್ ಮಲಿಂಗಾ ಎಸೆದ 12ನೇ ಓವರ್ ನ ಅಂತಿಮ ಎಸೆತವನ್ನು ರಕ್ಷಣಾತ್ಮಕವಾಗಿ ಆಡುವ ಭರದಲ್ಲಿ ಪಂತ್ ಎಡಬದಿಯಲ್ಲಿ ಚಿಪ್ಪಿಂಗ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ ನ ಅಂಚನ್ನು ಸವರಿ ಮೇಲಕ್ಕೆ ಹಾರಿತು. ಈ ಹಂತದಲ್ಲಿ ವಿರುದ್ಧ ದಿಕ್ಕಿನಲ್ಲಿದ್ದ ಇಶಾನ್ ಮಲಿಂಗಾ ಅದ್ಭುತವಾಗಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆ ಮೂಲಕ ಪಂತ್ ಮತ್ತೆ ಸಿಂಗಲ್ ಡಿಜಿಟ್ ಗೆ ಔಟಾದರು.
LSG ಮಾಲೀಕ Sanjeev Goenka ಹತಾಶೆ!
ಅತ್ತ ರಿಷಬ್ ಪಂತ್ ಮತ್ತೆ ಸಿಂಗಲ್ ಡಿಜಿಟ್ ಗೆ ಔಟಾಗುತ್ತಿದ್ದಂತೆಯೇ ಅತ್ತ ಬಾಲ್ಕನಿಯಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹತಾಶರಾಗಿ ತಾವು ಕುಳಿತಿದ್ದ ಕುರ್ಚಿ ಬಿಟ್ಟು ಎದ್ದು ಹೊರಟರು.
ಪಂತ್ ಕಳಪೆ ಫಾರ್ಮ್
ಇನ್ನು ಹಾಲಿ ಟೂರ್ನಿಯಲ್ಲಿ ರಿಷಬ್ ಪಂತ್ ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 12 ಪಂದ್ಯಗಳನ್ನಾಡಿದ್ದು, ಒಂದು ಅರ್ಥಶತಕ ಸೇರಿದಂತೆ 13.10 ಸರಾಸರಿಯಲ್ಲಿ 98.49 ಸ್ಟ್ರೈಕ್ ರೇಟ್ ನಲ್ಲಿ ಕೇವಲ 138 ರನ್ ಗಳಿಸಿದ್ದಾರೆ. ಈ ಪೈಕಿ 63 ರನ್ ಅವರ ಹಾಲಿ ಟೂರ್ನಿಯಲ್ಲಿ ವೈಯುಕ್ತಿಕ ಗರಿಷ್ಟ ಮೊತ್ತವಾಗಿದೆ.
ಕಳಪೆ ದಾಖಲೆ
ಇನ್ನು 2025ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಕಳಪೆ ಪ್ರದರ್ಶನದ ಮೂಲಕ ಪಂತ್ ಕಳಪೆ ದಾಖಲೆಗೂ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಕಳಪೆ ಬ್ಯಾಟಿಂಗ್ ಸರಾಸರಿ ಹೊಂದಿರುವ ಐಪಿಎಲ್ ತಂಡದ 2ನೇ ನಾಯಕ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ 2021ರಲ್ಲಿ ಇಯಾನ್ ಮಾರ್ಗನ್ (11.08) ಈ ಕುಖ್ಯಾತಿಗೆ ಪಾತ್ರರಾಗಿದ್ದರು.
ಈ ಪಟ್ಟಿಯಲ್ಲಿ ಇದೀಗ ಪಂತ್ 2ನೇ ಸ್ಥಾನಕ್ಕೇರಿದ್ದು, 2021ರಲ್ಲಿ 16.28 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
Lowest Average by Captain in an IPL Season (min 10 Inngs)
11.08 - Eoin Morgan (2021)
12.27 - Rishabh Pant (2025)*
16.28 - MS Dhoni (2021)
16.33 - Mayank Agarwal (2022)
17.86 - Sourav Ganguly (2012)
18.00 - Hardik Pandya (2024)
Advertisement