TATA ಐಪಿಎಲ್ ಟ್ರೋಫಿ
TATA ಐಪಿಎಲ್ ಟ್ರೋಫಿ

IPL 2025: ಫೈನಲ್ ಪಂದ್ಯ ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಶಿಫ್ಟ್; ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್ ಪಂದ್ಯ

ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ಗೂ ಮುನ್ನ ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ನ ಜೊತೆಗೆ ಕ್ವಾಲಿಫೈಯರ್ 2 ಸಹ ನಡೆಯಲಿದೆ.
Published on

ಐಪಿಎಲ್ 2025ರ ಫೈನಲ್ ಪಂದ್ಯವನ್ನು ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಸಬೇಕಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಫೈನಲ್ ಪಂದ್ಯವನ್ನು ಈಗ ಅಹಮದಾಬಾದ್‌ನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ.

ಐಪಿಎಲ್ ಫೈನಲ್ ಪಂದ್ಯವನ್ನು ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಸ್ಥಳಾಂತರಿಸುವ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, 'ಸ್ಥಳಗಳನ್ನು ಬದಲಾಯಿಸುವುದು ಸುಲಭವಲ್ಲ' ಎಂದು ಹೇಳಿದ್ದರು. ಆದರೆ, ಕೋಲ್ಕತ್ತಾದ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆ ಸುಲಭ ಆಯ್ಕೆಯನ್ನು ಮಾಡಿದೆ. ಐಪಿಎಲ್ 2025 ಫೈನಲ್ ಪಂದ್ಯವನ್ನು ಈಗ ಮೂಲ ಸ್ಥಳವಾದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.

ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ಗೂ ಮುನ್ನ ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ನ ಜೊತೆಗೆ ಕ್ವಾಲಿಫೈಯರ್ 2 ಸಹ ನಡೆಯಲಿದೆ. ಮೇ 20 ರಿಂದ ಪ್ರಾರಂಭವಾಗುವ ಎಲ್ಲ ಪಂದ್ಯಗಳಿಗೆ ಕಟ್-ಆಫ್ ಸಮಯಕ್ಕೆ ರಾತ್ರಿ 10:56ರ ಬದಲಿಗೆ ರಾತ್ರಿ 11:56ಕ್ಕೆ ಸಮಯ ವಿಸ್ತರಿಸಲು ಬಿಸಿಸಿಐ ನಿರ್ಧರಿಸಿದೆ.

ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ

ಮೇ 29: ಕ್ವಾಲಿಫೈಯರ್ 1 - ಮುಲ್ಲನ್‌ಪುರ

ಮೇ 30: ಎಲಿಮಿನೇಟರ್ - ಮುಲ್ಲನ್‌ಪುರ

ಜೂನ್ 1: ಕ್ವಾಲಿಫೈಯರ್ 2 - ಅಹಮದಾಬಾದ್

ಜೂನ್ 3: ಫೈನಲ್ - ಅಹಮದಾಬಾದ್

3ನೇ ಬಾರಿ ಫೈನಲ್‌ಗೆ ಅಹಮದಾಬಾದ್ ಆತಿಥ್ಯ

TATA ಐಪಿಎಲ್ ಟ್ರೋಫಿ
IPL 2025: ಅಭಿಮಾನಿಗಳಿಗೆ ನಿರಾಸೆ; ಎಂ ಚಿನ್ನಸ್ವಾಮಿಯಿಂದ ಏಕಾನಾ ಕ್ರಿಕೆಟ್ ಕ್ರೀಡಾಂಗಣಕ್ಕೆ RCB vs SRH ಪಂದ್ಯ ಸ್ಥಳಾಂತರ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಐಪಿಎಲ್ ಫೈನಲ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ. 2022 ಮತ್ತು 2023 ರಲ್ಲಿಯೂ ಇಲ್ಲಿಯೇ ಐಪಿಎಲ್ ಫೈನಲ್ ನಡೆದಿತ್ತು. ಸಾಂಪ್ರದಾಯಿಕವಾಗಿ, ಫೈನಲ್ ಅನ್ನು ಹಾಲಿ ಚಾಂಪಿಯನ್‌ಗಳ ತವರು ಮೈದಾನದಲ್ಲಿ ನಡೆಸಲಾಗುತ್ತದೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಆಗಿದ್ದರಿಂದ ಚೆನ್ನೈನಲ್ಲಿ ಫೈನಲ್ ಆಯೋಜಿಸಲಾಗಿತ್ತು.

ಈ ಬಾರಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ ಆಗಿರುವುದರಿಂದ ಅವರು ಆತಿಥೇಯ ಹಕ್ಕುಗಳನ್ನು ಪಡೆಯುತ್ತಾರೆ. ಆದರೆ, ಮಾನ್ಸೂನ್ ಭಾರತದ ತೀರಕ್ಕೆ ಮೊದಲೇ ಅಪ್ಪಳಿಸಿದ್ದರಿಂದ, ಅಂದುಕೊಂಡಂತೆ ಆಗಿಲ್ಲ. ಈ ಮೊದಲು ಐಪಿಎಲ್ 2025ರ ಫೈನಲ್ ಅನ್ನು ಮೇ 25ರಂದು ನಿಗದಿಪಡಿಸಲಾಗಿತ್ತು.

ಆದರೆ, ಭಾರತ-ಪಾಕಿಸ್ತಾನ ನಡುವಿ ಉದ್ವಿಗ್ನತೆಯಿಂದಾಗಿ ಐಪಿಎಲ್ ಅನ್ನು 9 ದಿನಗಳವರೆಗೆ ಸ್ಥಗಿತಗೊಳಿಸಲಾಗಿದ್ದರಿಂದ, ಬಿಸಿಸಿಐ ಪ್ಲೇಆಫ್ ಸ್ಥಳಗಳನ್ನು ಹೊರತುಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಘೋಷಿಸಿತು. ದಕ್ಷಿಣ ಭಾರತದ ರಾಜ್ಯಗಳು ಮತ್ತು ಪೂರ್ವ ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಬಿಸಿಸಿಐ ಈಗ ಫೈನಲ್ ಅನ್ನು ಕೂಡ ಸುರಕ್ಷಿತ ಸ್ಥಳ ಅಹಮದಾಬಾದ್‌ಗೆ ಸ್ಥಳಾಂತರಿಸಿದೆ.

ಪಂಜಾಬ್ ಕಿಂಗ್ಸ್‌ನ ತವರು ಮೈದಾನವಾದ ಮುಲ್ಲನ್‌ಪುರ ಈ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸಿದೆ. ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡ ಉಳಿದ ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲು ಪಿಬಿಕೆಎಸ್ ಆಯ್ಕೆ ಮಾಡಿತು. ಈಗ, ಮುಲ್ಲನ್‌ಪುರವು ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಅನ್ನು ಆಯೋಜಿಸಲಿದೆ.

ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಪ್ಲೇಆಫ್ ಸ್ಥಾನಗಳನ್ನು ದೃಢಪಡಿಸಿಕೊಂಡಿವೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಉಳಿದ ಮತ್ತು ಅಂತಿಮ ಸ್ಥಾನಕ್ಕಾಗಿ ಹೋರಾಟ ನಡೆಯಲಿದೆ. ಪಿಬಿಕೆಎಸ್ ಟಾಪ್-2 ಸ್ಥಾನ ಪಡೆದರೆ, ಅವರು ತಮ್ಮ ತವರು ಮೈದಾನದಲ್ಲಿ ಕ್ವಾಲಿಫೈಯರ್ 1 ಅನ್ನು ಆಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com