IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ

ಕ್ವಾಲಿಫೈಯರ್ 1ರ ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರ ಪ್ರವೇಶ ಪಡೆಯಲಿದ್ದು, ಸೋತ ತಂಡ ಜೂನ್ 1 ರಂದು ಅದೇ ಸ್ಥಳದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ.
Robin Uthappa
ರಾಬಿನ್ ಉತ್ತಪ್ಪ
Updated on

ನವದೆಹಲಿ: ಗುರುವಾರ ಮುಲ್ಲನ್‌ಪುರದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025ನೇ ಆವೃತ್ತಿಯ ಕ್ವಾಲಿಫೈಯರ್ 1 ಪಂದ್ಯವು ಅತ್ಯಂತ ಅದ್ಭುತ ಪಂದ್ಯವಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡವು ಲಕ್ನೋ ಸೂಪರ್ ಕಿಂಗ್ಸ್ ತಂಡವನ್ನು ಆರು ವಿಕೆಟ್‌ಗಳ ಅಂತರದಿಂದ ಸೋಲಿಸಿದ್ದರೂ, ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡದ ತವರು ಮೈದಾನವಾದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ಲೇಆಫ್ ಪಂದ್ಯ ನಡೆಯುತ್ತಿರುವುದರಿಂದ ಪಿಬಿಕೆಎಸ್‌ಗೆ ಲಾಭವಾಗಿದೆ ಎಂದು ಅವರು ಹೇಳಿದರು.

ಕ್ವಾಲಿಫೈಯರ್ 1ರ ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರ ಪ್ರವೇಶ ಪಡೆಯಲಿದ್ದು, ಸೋತ ತಂಡ ಜೂನ್ 1 ರಂದು ಅದೇ ಸ್ಥಳದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ. ಮಂಗಳವಾರ ರಾತ್ರಿ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ LSG ವಿರುದ್ಧ ಜಯ ಸಾಧಿಸಿದ್ದರಿಂದ RCB ತಂಡಕ್ಕೆ ಕ್ವಾಲಿಫೈಯರ್ 1ಕ್ಕೆ ಸಿದ್ಧವಾಗಲು ಕೇವಲ ಒಂದು ದಿನ ವಿರಾಮ ಮಾತ್ರ ಇದೆ.

'ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಎರಡೂ ತಂಡಗಳು ಉತ್ತಮ ಮೊಮೆಂಟಮ್ ಅನ್ನು ಹೊಂದಿವೆ. ಇದು ಪಂದ್ಯಾವಳಿಯ ಅದ್ಭುತ ಪಂದ್ಯವಾಗಲಿದೆ. ಪಂಜಾಬ್ ತವರಿನಲ್ಲಿ ಆಡುತ್ತಿರುವುದರಿಂದ ಸ್ವಲ್ಪ ಮುನ್ನಡೆ ಸಾಧಿಸಬಹುದು. ಆದರೆ, ಆರ್‌ಸಿಬಿ ಉತ್ತಮ ಸವಾಲು ಒಡ್ಡುವ ಅಥವಾ ಪಂದ್ಯವನ್ನು ಗೆಲ್ಲುವಷ್ಟು ಬಲಿಷ್ಠವಾಗಿದೆ. ಆರ್‌ಸಿಬಿಯಿಂದ ಕಳೆದ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿದ್ದು, ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಮತ್ತಷ್ಟು ಉತ್ತಮವಾಗಿ ಪ್ರತಿಕ್ರಿಯಿಸಬಹುದು' ಎಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.

Robin Uthappa
IPL 2025: 'ಪಂಜಾಬ್ ಕಿಂಗ್ಸ್ ಮತ್ತು...'; ಈ ಆವೃತ್ತಿಯ ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ ರಾಬಿನ್ ಉತ್ತಪ್ಪ

ವಿರಾಟ್ ಕೊಹ್ಲಿ ಮತ್ತು ನಾಯಕ ಜಿತೇಶ್ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಆರು ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿದ್ದು, 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಕನಸು ಇನ್ನೂ ಜೀವಂತವಾಗಿದೆ. ಅತ್ಯುತ್ತಮ ನೆಟ್ ರನ್ ರೇಟ್‌ನಿಂದಾಗಿ ಪಿಬಿಕೆಎಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಉತ್ತಪ್ಪ, 'ಈ ಗೆಲುವಿನಿಂದ (ಎಲ್‌ಎಸ್‌ಜಿ ವಿರುದ್ಧ), ವಿರಾಟ್ ಕೊಹ್ಲಿ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಪಂದ್ಯಾವಳಿಯ ಕೊನೆಯ ಹಂತಕ್ಕೆ ಹೋಗಿ ಆರ್‌ಸಿಬಿಗಾಗಿ ಐಪಿಎಲ್ ಚಾಂಪಿಯನ್‌ಶಿಪ್ ಗೆಲ್ಲಲು ಪ್ರಯತ್ನಿಸಲು ಅವರಿಗೆ ಮತ್ತೆ ಅವಕಾಶ ಸಿಗುತ್ತದೆ. ಅವರು ಖಂಡಿತವಾಗಿಯೂ ತಮ್ಮ ತಂಡಕ್ಕೆ ಟ್ರೋಫಿಯನ್ನು ಬಯಸುತ್ತಾರೆ' ಎಂದು ಹೇಳಿದರು.

'ಜಿತೇಶ್ ಶರ್ಮಾ, ಮಾಯಾಂಕ್ ಅಗರ್ವಾಲ್ ಮತ್ತು ನುವಾನ್ ತುಷಾರ ಉತ್ತಮ ಪ್ರದರ್ಶನ ನೀಡಿದರು. ಎಲ್ಲರೂ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ತುಂಬಾ ಚೆನ್ನಾಗಿ ಆಡಿದರು. ಅವರು ಮೊದಲ ಎರಡು ಸ್ಥಾನಗಳಲ್ಲಿರಲು ಅರ್ಹರು. ಅವರು ತೋರಿಸಿದ ನಂಬಿಕೆ, ಅವರಲ್ಲಿದ್ದ ದೃಢನಿಶ್ಚಯ ಅದ್ಭುತವಾಗಿತ್ತು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com