
ಮುಲ್ಲನಪುರ: ಚಂಡೀಗಢದ ಮುಲ್ಲನಪುರದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2025 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿಯ ಬೌಲಿಂಗ್ ಚಮತ್ಕಾರಕ್ಕೆ ಪಂಜಾಬ್ ಕಿಂಗ್ಸ್ ಕೇವಲ 101 ರನ್ ಗಳಿಗೆ ಆಲೌಟ್ ಆಗಿದೆ.
ಹೌದು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್ ಸಿಬಿಯ ನಾಯಕ ರಜತ್ ಪಾಟಿದಾರ್ ಭರವಸೆಯನ್ನು ಬೌಲರ್ ಗಳು ಹುಸಿಗೊಳಿಸಲಿಲ್ಲ. ಕೇವಲ 14.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ತಲೆಗೆಲೆಗಳಂತೆ ಬೀಳಿಸಿದರು.
ಶರ್ಮಾಗೆ ಮೂರು ವಿಕೆಟ್:
ಆರ್ ಸಿಬಿ ಬೌಲರ್ ಗಳಾದ ಸೂಯಶ್ ಶರ್ಮಾ ಮೂರು ವಿಕೆಟ್ ಕಬಳಿಸಿದರೆ, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ ವುಡ್ ತಲಾ ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಹಾಗೂ ಶೆಫರ್ಡ್ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಕೇವಲ 101 ರನ್ ಗಳಿಗೆ ಕಟ್ಟು ಹಾಕುವಲ್ಲಿ ಯಶಸ್ವಿಯಾದರು.
ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಕೇವಲ 7 ರನ್ ಗಳಿಗೆ ಯಶ್ ದಯಾಳ್ ಬೌಲಿಂಗ್ ನಲ್ಲಿ ಔಟ್ ಆದರೆ, ಪ್ರಭುಶಿಮ್ರಾನ್ ಸಿಂಗ್ 18 ರನ್ ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಫೆವಿಲಿಯನ್ ಗೆ ಹೆಜ್ಜೆ ಹಾಕಿದರು. ತದನಂತರ ಜೋಶ್ ಇಂಗ್ಲೀಷ್ 4, ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ರನ್ ಗಳಿಗೆ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ ಔಟ್ ಆದರು.
ಉಳಿದಂತೆ ನೆಹಲ್ ವಧೇರಾ 8, ಮಾರ್ಕಸ್ ಸ್ಟೋನಿಸ್ 26, ಶಶಾಂಕ್ ಸಿಂಗ್ 3, ಮುಶೀರ್ ಖಾನ್ ಶೂನ್ಯಕ್ಕೆ ಒಟಾದರು. ಅಜಾಮತ್ತುಲ್ಲಾ 18, ಹರ್ಪೀತ್ ಬ್ರಾರ್ ಕೇವಲ 4 ರನ್ ಗಳಿಗೆ ಫೆವಿಲಿಯನ್ ಗೆ ಹೆಜ್ಜೆ ಹಾಕಿದರು. ಇದರಿಂದಾಗಿ ಪಂಜಾಬ್ ಕಿಂಗ್ಸ್ 14. 1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಗಳಿಸಲಷ್ಟೇ ಶಕ್ತವಾಯಿತು.
ಸುನೀಲ್ ಗವಾಸ್ಕರ್ ಕಿಡಿ:
ಕ್ವಾಲಿಫೈಯರ್ ಹಂತದವರೆಗೂ ಬಂದು ಕೇವಲ 101 ರನ್ ಗಳಿಸಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. ನಿರ್ಣಾಯಕವಾದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೇಗನೆ ಔಟ್ ಆಗಿದ್ದಕ್ಕೆ ಸುನೀಲ್ ಗವಾಸ್ಕರ್ ಗರಂ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಶಾಟ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಅವರು ಶಾಟ್ ಹೊಡೆಯಲು ಹೊಗಬಾರದಿತ್ತು ಎಂದು ಹೇಳಿದ್ದಾರೆ.
Advertisement