
ಮುಲ್ಲನಪುರ: ಚಂಡೀಗಢದ ಮುಲ್ಲನಪುರ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ 2025 ಟೂರ್ನಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಎಂಟು ವಿಕೆಟ್‌ಗಳ ಜಯ ದಾಖಲಿಸಿತು.
ಇದರಿಂದ ಆರ್ ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ಸಂತಸದ ಹೊಳೆಯಲ್ಲಿ ತೇಲುತ್ತಿರುವಂತೆಯೇ ವಿಚಿತ್ರ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿಯಾಗಿದೆ.
ಹೌದು. ಐಪಿಎಲ್‌ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದಿದ್ದರೂ ಆರ್‌ಸಿಬಿ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಇದೀಗ ತಂಡ ಫೈನಲ್‌ಗೆ ತಲುಪಿದ್ದು, ಈ ವರ್ಷ ಟ್ರೋಫಿ ಗೆಲ್ಲುವ ಮೂಲಕ ಆರ್‌ಸಿಬಿ ಪ್ರಶಸ್ತಿ ಬರ ನೀಗಿಸದಿದ್ದರೆ ಪತಿಗೆ ವಿಚ್ಛೇದನ ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಹಿಡಿದು ನಿಂತಿರುವುದು ಕಂಡುಬಂದಿದೆ.
ಇದು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಆರ್ ಸಿಬಿ ಗೆದ್ದ ತಕ್ಷಣವೇ ಈ ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಮಧ್ಯೆ ಪ್ರಬಲ ಆಲ್-ರೌಂಡ್ ಪ್ರದರ್ಶನ ತೋರಿದ ಆರ್ ಸಿಬಿ ಇನ್ನು 60 ಎಸೆತಗಳು ಬಾಕಿ ಇರುವಂತೆಯೇ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಆರ್‌ಸಿಬಿ ಈಗಾಗಲೇ ಫೈನಲ್ ತಲುಪಿದ್ದು, ಈಗ ಕ್ವಾಲಿಫೈಯರ್ 2 ರ ವಿಜೇತರನ್ನು ಕಾಯುತ್ತಿದೆ.
Advertisement