

ದುಬೈ: ಐಸಿಸಿ ಪುರುಷರ ಟಿ-20 ರ‍್ಯಾಂಕಿಂಗ್ ಬುಧವಾರ ಪ್ರಕಟವಾಗಿದ್ದು, ಬ್ಯಾಟರ್ ಹಾಗೂ ಬೌಲರ್ ಗಳ ವಿಭಾಗದಲ್ಲಿ ಕ್ರಮವಾಗಿ ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
ಅಭಿಷೇಕ್ ಶರ್ಮಾ 925 ರೇಟಿಂಗ್ ಪಾಯಿಂಟ್ ಗಳಿಸಿದ್ದು, ಇಂಗ್ಲೆಂಡ್ ನ ಫಿಲ್ ಸಾಲ್ಟ್ ಮತ್ತು ತಿಲಕ್ ವರ್ಮಾ ಅವರಿಗಿಂತ ಮುಂದಿದ್ದಾರೆ. ಭಾರತದ ಟಿ-20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಎಂಟನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಮತ್ತೋರ್ವ ಆಟಗಾರ ಎನಿಸಿಕೊಂಡಿದ್ದಾರೆ.
ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ವೆಸ್ಟ್ ಇಂಡೀಸ್ ನ ಅಖೀಲ್ ಹುಸೇನ್ ಮತ್ತು ಅಪ್ಘಾನಿಸ್ತಾನದ ರಶೀದ್ ಖಾನ್ ನಂತರದ ಸ್ಥಾನಗಳಿದ್ದಾರೆ.
ಭಾರತದ ಇತರ ಯಾವುದೇ ಬೌಲರ್ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ ವುಡ್ ಎರಡು ಸ್ಥಾನ ಬಡ್ತಿ ಪಡೆದು ಹತ್ತನೇ ಸ್ಥಾನಕ್ಕೇರಿದ್ದಾರೆ.
ಆಲ್ ರೌಂಡರ್ ಪಟ್ಟಿಯಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಪಾಕಿಸ್ತಾನದ ಸಯೀಮ್ ಅತೂಬ್ ಅಗ್ರಸ್ಥಾನದಲ್ಲಿದ್ದಾರೆ.
Advertisement