

ಕ್ವೀನ್ಸ್ ಲ್ಯಾಂಡ್: 4ನೇ ಟಿ20 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾಗೆ ಗೆಲ್ಲಲು 168 ರನ್ ಗಳ ಸವಾಲಿನ ಗುರಿ ನೀಡಿದೆ.
ಆಸ್ಚ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕರಾರ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಭಾರತ ನಿಗಧಿತ 20 ಓವರ್ ನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 168 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ, ಆಸಿಸ್ ಗೆ ಗೆಲ್ಲಲು 168 ರನ್ ಗುರಿ ನೀಡಿದೆ
ಭಾರತದ ಪರ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ 28 ರನ್ ಗಳಿಸಿದರೆ, ಶುಭ್ ಮನ್ ಗಿಲ್ 46 ರನ್ ಗಳಿಸಿ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಈ ಜೋಡಿಯ ಬಳಿಕ ಜೊತೆಗೂಡಿದ ಶಿವಂ ದುಬೆ (22) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (20) ಅವರ ಬ್ಯಾಟ್ ನಿಂದ ನಿರೀಕ್ಷಿತ ಮಟ್ಟದ ರನ್ ಗಳು ಹರಿದು ಬರಲಿಲ್ಲ.
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ (5), ಜಿತೇಶ್ ಶರ್ಮಾ (3) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ವಾಷಿಂಗ್ಟನ್ ಸುಂದರ್ ಕೂಡ 12 ರನ್ ಗಳಿಸಿ ಇನ್ನಿಲ್ಲದ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿದರು. ಆರ್ಶ್ ದೀಪ್ ಸಿಂಗ್ ಶೂನ್ಯಕ್ಕೆ ಔಟದರೆ, ಅಕ್ಸರ್ ಪಟೇಲ್ ಅಜೇಯ 21 ರನ್ ಗಳಿಸಿ ಭಾರತ ಮೊತ್ತ 160ರ ಗಡಿ ದಾಟುವಂತೆ ನೋಡಿಕೊಂಡರು.
ಆಸ್ಟ್ರೇಲಿಯಾ ಪರ ಸ್ಪಿನ್ನರ್ ಆ್ಯಡಂ ಜಂಪಾ ಮತ್ತು ವೇಗಿ ನಾಥನ್ ಎಲ್ಲಿಸ್ ತಲಾ 3 ವಿಕೆಟ್ ಪಡೆದರೆ, ಬಾರ್ಟ್ಲೆಟ್ ಒಂದು ವಿಕೆಟ್ ಪಡೆದರು.
Advertisement