

ಗುವಾಹತಿ: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 489 ರನ್ ಗಳಿಗೆ ಆಲೌಟ್ ಆಗಿದೆ.
ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 489 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೆಂಬಾ ಬವುಮಾ ಪಡೆ ಸೆನುರಾನ್ ಮುತ್ತುಸಾಮಿ ಶತಕ (109) ಮಾರ್ಕೋ ಜೇನ್ಸನ್ (93 ರನ್) ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 489 ರನ್ ಕಲೆಹಾಕಿದೆ.
ದಕ್ಷಿಣ ಆಫ್ರಿಕಾ ಪರ ಆಫ್ರಿಕಾ ಪರ ಮರ್ಕ್ರಾಮ್ 38, ರ್ಯಾನ್ ರಿಕಲ್ಟನ್ 35, ಸ್ಟಬ್ಸ್ 49, ನಾಯಕ ಟೆಂಬಾ ಬವುಮಾ 41, ಜೋರ್ಜಿ 28, ವಿಯಾನ್ ಮುಲ್ಡರ್ 13 ರನ್ ಗಳಿಸಿದರು. ಕೈಲ್ ವೆರ್ರೆನ್ 45 ರನ್, ಹಾರ್ಮರ್ 5 ರನ್ ಮತ್ತು ಕೇಶವ್ ಮಹಾರಾಜ ಅಜೇಯ 12 ಗಳಿಸಿದರು.
ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್
ಇನ್ನು ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರು.
Advertisement