

ಗುವಾಹಟಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ 288 ರನ್‌ಗಳ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಜಾನ್ಸೆನ್ 6 ವಿಕೆಟ್‌ಗಳನ್ನು ಕಬಳಿಸಿದ್ದು ಭಾರತೀಯ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಯಶಸ್ವಿ ಜೈಸ್ವಾಲ್ 58 ರನ್ ಹಾಗೂ ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ರನ್ ಕಲೆಹಾಕಲು ಸಾಧ್ಯವಾಗಿಲ್ಲ.
ಸೋಮವಾರ ಪಂದ್ಯದ ಮೂರನೇ ದಿನದಂದು ಭಾರತ 9/0ಕ್ಕೆ ಆಟ ಪುನರಾರಂಭಿಸಿತು. ತಂಡವು 95 ರನ್ ಗಳಿಗೆ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆರಂಭಿಕರು ಔಟಾದ ನಂತರ ತಂಡ 122 ರನ್ ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸುಂದರ್ ಮತ್ತು ಕುಲದೀಪ್ ಯಾದವ್ ಭಾರತವನ್ನು 200ಕ್ಕೆ ಕೊಂಡೊಯ್ದರು.
ಭಾರತ 27 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿತ್ತು. ತಂಡವು 95 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಕೇವಲ 27 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಶಸ್ವಿ ತಂಡ 95 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಔಟಾಗಿದ್ದು ನಂತರ ಸುದರ್ಶನ್ ಸಹ ಔಟಾದರು. ಜುರೆಲ್ 102 ರನ್ ಇದ್ದಾಗ ಪಂತ್ 105 ರನ್, ನಿತೀಶ್ 119 ರನ್ ಮತ್ತು ಜಡೇಜಾ 122 ರನ್ ಇದ್ದಾಗ ಔಟಾದರು.
ಬರ್ಸಪರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದ ಎರಡನೇ ದಿನವಾದ ಭಾನುವಾರ, ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಓವರ್ ನಲ್ಲೇ ತಂಡ 9 ರನ್ ಗಳಿಸಿದೆ.
Advertisement