
ಅಹ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 162 ರನ್ ಗೆ ಆಲೌಟ್ ಆಗಿದೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರೋಸ್ಟನ್ ಚೇಸ್ ಬಳಗ ಭಾರತದ ವೇಗಿಗಳಾದ ಮಹಮದ್ ಸಿರಾಜ್ ಮತ್ತು ಜಸ್ ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ಕೇವಲ 162 ರನ್ ಗೇ ಆಲೌಟ್ ಆಗಿದೆ.
ಭಾರತದ ಸಾಂಘಿಕ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ದಾಂಡಿಗರಲ್ಲಿ ಉತ್ತರವೇ ಇರಲಿಲ್ಲ. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ವೆಸ್ಟ್ ಇಂಡೀಸ್ ಅಂತಿಮವಾದಿ 162 ರನ್ ಗೆ ಆಲೌಟ್ ಆಯಿತು.
ಭೋಜನ ವಿರಾಮಕ್ಕೂ ಮೊದಲು ಸಿರಾಜ್ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಬಳಿಸಿದ್ದರು. ಆದರೆ ಭೋಜನ ವಿರಾಮದ ಬಳಿಕ ಜಸ್ ಪ್ರೀತ್ ಬುಮ್ರಾ ವಿಂಡೀಸ್ ದಾಂಡಿಗರನ್ನು ಕಾಡಿ ತಾವೂ ಕೂಡ 3 ವಿಕೆಟ್ ಪಡೆದರು.
ಈ ಹಂತದಲ್ಲಿ ಸಿರಾಜ್ ಕೂಡ ಮತ್ತೊಂದು ವಿಕೆಟ್ ಪಡೆದು ತವರು ನೆಲದಲ್ಲಿ 4 ವಿಕೆಟ್ ಗೊಂಚಲು ಪಡೆದರು.
ವೆಸ್ಟ್ ಇಂಡೀಸ್ ಪರ ಜಸ್ಟಿನ್ ಗ್ರೀವ್ಸ್ 32 ರನ್ ಗಳಿಸಿದ್ದೇ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಉಳಿದಂತೆ ಶಾಯ್ ಹೋಪ್ 26, ನಾಯಕ ರೋಸ್ಟನ್ ಚೇಸ್ 24, ಬ್ರಾಂಡನ್ ಕಿಂಗ್ 13, ಅಲಿಕ್ ಅಥನಾಜೆ 12, ಕೇರಿ ಪೆರ್ರಿ 11 ಮತ್ತು ಜಾನ್ ಕ್ಯಾಂಪ್ ಬೆಲ್ 8 ರನ್ ಗಳಿಸಿದರು.
ಭಾರತದ ಪರ ಮಹಮದ್ ಸಿರಾಜ್ 4 ವಿಕೆಟ್ ಪಡೆದರೆ, ಬುಮ್ರಾ 3, ಕುಲದೀಪ್ ಯಾದವ್ 2 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದಿದ್ದಾರೆ.
Advertisement