
ಭಾರತದ ಆಂತರಿಕ ವಿಚಾರಗಳ ಕುರಿತು ಆಗಾಗ್ಗೆ ಮಾತನಾಡುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ಇದೀಗ ಮಾತೃಭೂಮಿ ವಿಚಾರದಲ್ಲಿ ಸಂಚಲನದ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ನನ್ನ ಜನ್ಮ ಭೂಮಿ ಆಗಿರಬಹುದು ಆದರೆ, ನನ್ನ ಪೂರ್ವಿಕರ ನೆಲೆಯಾಗಿರುವ ಭಾರತವೇ ನನ್ನ ಮಾತೃಭೂಮಿ ಎಂದಿದ್ದಾರೆ.
ನನಗೆ ಭಾರತ ದೇವಾಲಯ ಇದ್ದಂತೆ. ಪ್ರಸ್ತುತ, ಭಾರತೀಯ ಪೌರತ್ವ ಪಡೆಯುವ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ. ಭವಿಷ್ಯದಲ್ಲಿ ನನ್ನಂತಹ ಯಾರಾದರೂ ಹಾಗೆ ಮಾಡಲು ನಿರ್ಧರಿಸಿದರೆ, ನಮ್ಮಂತಹ ಜನರಿಗೆ CAA ಈಗಾಗಲೇ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಭವಿಷ್ಯದಲ್ಲಿ ಭಾರತದ ಪೌರತ್ವ ಪಡೆಯುವ ಬಗ್ಗೆ ಆಯ್ಕೆ ಹೊಂದಿರುವುದನ್ನು ತಿಳಿಸಿದ್ದಾರೆ. ಹಿಂದೂ ಆಗಿರುವ ಮಾಜಿ ಲೆಗ್ ಬ್ರೇಕ್ ಬೌಲರ್, ಪಾಕಿಸ್ತಾ ಅಧಿಕಾರಿಗಳು ಮತ್ತು ಕ್ರಿಕೆಟ್ ಮಂಡಳಿಯಿಂದ ತೀವ್ರ ತಾರತಮ್ಯಕ್ಕೊಳಗಾಗಿದ್ದರೂ, ಪಾಕಿಸ್ತಾನವು ತನ್ನ ಜನ್ಮಭೂಮಿ" ಎಂದು ಒತ್ತಿಹೇಳಿದರು.
"ಇತ್ತೀಚೆಗೆ, ನಾನು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ, ಭಾರತದ ಆಂತರಿಕ ವಿಷಯಗಳ ಬಗ್ಗೆ ಯಾಕೆ ಪ್ರತಿಕ್ರಿಯಿಸುತ್ತೇನೆ ಎಂದು ಹಲವರು ನನ್ನನ್ನು ಪ್ರಶ್ನಿಸುವುದನ್ನು ನೋಡಿದ್ದೇನೆ ಮತ್ತು ಕೆಲವರು ನಾನು ಭಾರತೀಯ ಪೌರತ್ವಕ್ಕಾಗಿ ಇದನ್ನೆಲ್ಲ ಮಾಡುತ್ತೇನೆ ಎಂದು ಆರೋಪಿಸಿದ್ದಾರೆ. ದಾಖಲೆಯನ್ನು ನೇರವಾಗಿ ಹೊಂದಿಸುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಕನೇರಿಯಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
2000 ದಿಂದ 2010ರವರೆಗೂ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ಡ್ಯಾನಿಶ್ ಕನೇರಿಯಾ, ಪಾಕಿಸ್ತಾನದ ಅಭಿಮಾನಿಗಳಿಂದ ಪ್ರೀತಿ ಸಿಕ್ಕಿದೆ. ಆದರೆ ಭಾರತ ನನ್ನ ಪೂರ್ವಿಕರ ಭೂಮಿಯಾಗಿದ್ದು, ನನ್ನ ಮಾತೃಭೂಮಿ ಎಂದಿದ್ದಾರೆ. ಕೊನೆಯಲ್ಲಿ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
Advertisement