
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 518 ರನ್ ಗಳಿಗೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಭಾರತದ ಪರ ಯಶಸ್ವಿ ಜೈಸ್ವಾಲ್ 175 ರನ್ ಗಳಿಸಿದರೆ, ನಾಯಕ ಶುಭ್ ಮನ್ ಗಿಲ್ ಅಜೇಯ 129 ರನ್ ಗಳಿಸಿದರೆ, ಸಾಯಿ ಸುದರ್ಶನ್ 87 ರನ್, ಕೆಎಲ್ ರಾಹುಲ್ 38 ರನ್, ನಿತೀಶ್ ಕುಮಾರ್ ರೆಡ್ಡಿ 43 ರನ್ ಮತ್ತು ದ್ರುವ್ ಜುರೆಲ್ 44 ರನ್ ಕಲೆಹಾಕಿದ್ದಾರೆ.
ವೆಸ್ಟ್ ಇಂಡೀಸ್ ಪರ ವಾರಿಕಾನ್ 3 ವಿಕೆಟ್ ಪಡೆದರೆ, ರೋಸ್ಟನ್ ಚೇಸ್ 1 ವಿಕೆಟ್ ಪಡೆದರು.
ದ್ವಿಶತಕ ಮಿಸ್ ಮಾಡಿಕೊಂಡ ಜೈಸ್ವಾಲ್
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 173 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಇಂದು ತಮ್ಮ ಖಾತೆಗೆ ಮತ್ತೆರಡು ರನ್ ಗಳನ್ನು ಮಾತ್ರ ಸೇರಿಸಿದರು. ದಿನದಾಟದ 2ನೇ ಓವರ್ ನಲ್ಲಿಯೇ ಜೈಸ್ವಾಲ್ 175 ರನ್ ಗಳಿಸಿದ್ದಾಗ ಚಂದರ್ ಪಾಲ್ ಎಸೆದ ಅದ್ಭುತ ಥ್ರೋನಲ್ಲಿ ರನೌಟ್ ಗೆ ಬಲಿಯಾದರು.
Advertisement