
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ವಿಂಡೀಸ್ ಪಡೆ 4 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿದೆ.
ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ವಿಂಡೀಸ್ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಲ್ಲೂ ಭಾರತೀಯ ಬೌಲರ್ ಗಳ ಆರ್ಭಟ ಮುಂದುವರೆದಿದೆ.
ವಿಂಡೀಸ್ ನ 4 ಪ್ರಮುಖ ವಿಕೆಟ್ ಗಳು ಪತನವಾಗಿದ್ದು ವೆಸ್ಟ್ ಇಂಡೀಸ್ ಇನ್ನೂ 378 ರನ್ ಗಳ ಹಿನ್ನಡೆಯಲ್ಲಿದೆ.
ವಿಂಡೀಸ್ ಪರ ಆರಂಭಿಕ ಬ್ಯಾಟರ್ ಜಾನ್ ಕಾಂಪ್ಬೆಲ್ 10ರನ್, ಚಂದ್ರಪಾಲ್ 34 ರನ್, ಅಲಿಕ್ ಅಥನಾಜೆ 41 ರನ್, ರೋಸ್ಟನ್ ಚೇಸ್ ಶೂನ್ಯ ಸಂಪಾದನೆ ಮಾಡಿದ್ದಾರೆ.
31 ರನ್ ಗಳಿಸಿರುವ ಶಾಯ್ ಹೋಪ್ ಮತ್ತು 14 ರನ್ ಗಳಿಸಿರುವ ಇಮ್ಲಾಚ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಮತ್ತು ಕುಲದೀಪ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
Advertisement