
ಮೊದಲ ಬಾರಿಗೆ ವಿಶ್ವಕಪ್ ಆಡಿರುವ ಬಾಂಗ್ಲಾದೇಶದ 20 ವರ್ಷದ ಮಾರುಫಾ ಅಕ್ತರ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾರುಫಾ ಏಳು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿದರು ಮತ್ತು ಕೇವಲ 31 ರನ್ ನೀಡಿದರು. ಈ ಮೂಲಕ ಪಾಕಿಸ್ತಾನವನ್ನು ಕೇವಲ 129 ರನ್‌ಗಳಿಗೆ ಕಟ್ಟಿಹಾಕಲು ಬಾಂಗ್ಲಾದೇಶಕ್ಕೆ ನೆರವಾದರು. ಪ್ರಾರಂಭದಲ್ಲಿಯೇ ಅಕ್ಟರ್ ಪಾಕ್ ಆರಂಭಿಕ ಆಟಗಾರ್ತಿ ಒಮೈಮಾ ಸೊಹೈಲ್ ಮತ್ತು ನಂ. 3 ಸಿದ್ರಾ ಅಮೀನ್ ಅವರ ವಿಕೆಟ್ ಪಡೆದರು. ಬಾಂಗ್ಲಾದೇಶ ಏಳು ವಿಕೆಟ್‌ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತು ಮತ್ತು ಮಾರುಫಾ 'ಪಂದ್ಯ ಶ್ರೇಷ್ಠ ಪ್ರಶಸ್ತಿ' ಪಡೆದರು.
ಚೆಂಡನ್ನು ಸ್ವಿಂಗ್ ಮಾಡುವ ಅಕ್ತರ್ ಅವರ ಅಸಾಧಾರಣ ಸಾಮರ್ಥ್ಯವು ಆಕೆಯನ್ನು ವಿಶ್ವಕಪ್‌ವರೆಗೆ ಕರೆತಂದಿದೆ. ವಾಸ್ತವವಾಗಿ, ಅನೇಕ ಕ್ರಿಕೆಟಿಗರು ಈಗಾಗಲೇ ಅವರನ್ನು ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ಪ್ರತಿಭೆ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಬಾಂಗ್ಲಾದೇಶದ ನಿಲ್ಫಾಮರಿಯವರಾದ ಮಾರುಫಾ ಅವರ ಜೀವನ ಅಷ್ಟೇನು ಉತ್ತಮವಾಗಿರಲಿಲ್ಲ. ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮಾರುಫಾ ಅವರು ತಮ್ಮ ಹಣಕಾಸಿನ ಹೋರಾಟದ ಕುರಿತು ಮಾತನಾಡಿದ್ದಾರೆ.
'ನಮಗೆ ಸರಿಯಾದ ಬಟ್ಟೆ ಇರಲಿಲ್ಲ. ನಮ್ಮ ಕುಟುಂಬವನ್ನು ವಿವಿಧ ಕಾರ್ಯಕ್ರಮಗಳಿಗೆ (ಮದುವೆಗಳಂತಹ) ಆಹ್ವಾನಿಸುವುದಿಲ್ಲ. ನಾವು ಅಲ್ಲಿಗೆ ಹೋದರೆ, ನಾವು ನಮ್ಮ ಗೌರವವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುತ್ತಿದ್ದರು. ನಾವು ಈದ್ ಸಮಯದಲ್ಲಿಯೂ ಹೊಸ ಬಟ್ಟೆಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ' ಎಂದು ಕಣ್ಣೀರಾಕುತ್ತಾ ಹೇಳಿದರು.
'ನನ್ನ ತಂದೆ ರೈತ. ನಮ್ಮಲ್ಲಿ ಹೆಚ್ಚು ಹಣವಿರಲಿಲ್ಲ ಮತ್ತು ನಾನು ಬೆಳೆದ ಹಳ್ಳಿಯ ಜನರು ಸಹ ನಮಗೆ ಹೆಚ್ಚು ಬೆಂಬಲ ನೀಡಲಿಲ್ಲ' ಎಂದು ಮಾರುಫಾ ಹೇಳಿದರು.
'ವಾಸ್ತವವಾಗಿ, ನಾವು ಈಗ ಇರುವ ಸ್ಥಾನದಲ್ಲಿ ನಮ್ಮನ್ನು ಹಂಗಿಸುತ್ತಿದ್ದ ಬಹುತೇಕರು ಈಗಿಲ್ಲ. ನಾನು ನನ್ನ ಕುಟುಂಬಕ್ಕೆ ಆಧಾರವಾಗಿದ್ದೇನೆ. ನನ್ನಂತೆ ಬಹುಶಃ ಅನೇಕ ಹುಡುಗರಿಗೂ ಸಾಧ್ಯವಾಗುವುದಿಲ್ಲ. ಅದು ನನಗೆ ವಿಶೇಷ ರೀತಿಯ ಶಾಂತಿಯನ್ನು ನೀಡುತ್ತದೆ. ಬಾಲ್ಯದಲ್ಲಿ, ಜನರು ಯಾವಾಗ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಮತ್ತು ಎಲ್ಲರಂತೆ ಗೌರವಿಸುತ್ತಾರೆ ಎಂದು ನಾನು ಎದುರುನೋಡುತ್ತಿದ್ದೆ. ಈಗ, ನನ್ನನ್ನು ನಾನೇ ಟಿವಿಯಲ್ಲಿ ನೋಡಿದಾಗ, ನಾನು ನಾಚಿಕೆಯಾಗುತ್ತದೆ' ಎಂದು ನಗುತ್ತಾ ಹೇಳಿದರು.
Advertisement