Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಸತತ ಮೂರನೇ ಸೋಲು ಅನುಭವಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಸತತ ಮೂರನೇ ಸೋಲು ಅನುಭವಿಸಿದೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 4 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಆಂಗ್ಲರು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ನಾಕೌಟ್ ಸುತ್ತಿಗೆ ತಲುಪಿವೆ.

ಭಾನುವಾರ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡವು 8 ವಿಕೆಟ್‌ಗಳ ನಷ್ಟಕ್ಕೆ 288 ರನ್ ಗಳಿಸಿತು. ಮಾಜಿ ನಾಯಕಿ ಹೀದರ್ ನೈಟ್ 109 ರನ್ ಗಳಿಸಿದರು ಮತ್ತು ದೀಪ್ತಿ ಶರ್ಮಾ 4 ವಿಕೆಟ್ ಪಡೆದರು. ಭಾರತ 41 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 234 ರನ್ ಗಳಿಸಿತ್ತು. ಮುಂದಿನ 4 ಓವರ್‌ಗಳಲ್ಲಿ ಭಾರತ 3 ವಿಕೆಟ್‌ಗಳನ್ನು ಕಳೆದುಕೊಂಡು 50 ಓವರ್‌ಗಳಲ್ಲಿ ಕೇವಲ 284 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಭಾರತದ ಪರ ಸ್ಮೃತಿ ಮಂಧಾನ 88, ಹರ್ಮನ್ಪ್ರೀತ್ ಕೌರ್ 70 ಮತ್ತು ದೀಪ್ತಿ ಶರ್ಮಾ 50 ರನ್ ಗಳಿಸಿದರು. ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 100 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನೀಡಿದರು. ಭಾರತ ಮೂರು ಅರ್ಧಶತಕಗಳನ್ನು ಗಳಿಸಿತು, ಆದರೆ ಅವು ವ್ಯರ್ಥವಾಯಿತು. ಇಂಗ್ಲೆಂಡ್ ನಾಯಕಿ ನಟಾಲಿ ಸಿವರ್-ಬ್ರಂಟ್ ಎರಡು ವಿಕೆಟ್‌ಗಳನ್ನು ಪಡೆದರು. ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಚಾರ್ಲಿ ಡೀನ್ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ ಒಂದು ವಿಕೆಟ್ ಪಡೆದರು.

ಸಂಗ್ರಹ ಚಿತ್ರ
Ro-Ko ಕಟ್ಟಿಹಾಕಿದ ಆಸೀಸ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋತ Team India

ಅಂಕಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದರೂ ನ್ಯೂಜಿಲ್ಯಾಂಡ್ ತಂಡ ಸೋಲುಗಳ ಮೇಲೆ ಭಾರತದ ಸೆಮಿಸ್ ಪ್ರವೇಶ ಆಧಾರಪಟ್ಟಿದೆ. ಭಾರತ ಮುಂದಿನ ಎರಡೂ ಪಂದ್ಯ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ಆ ಎರಡೂ ಪಂದ್ಯದಲ್ಲೂ ಭಾರತ ಸಹ ಗೆಲ್ಲಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com