PAK vs SA: ಸ್ಪಾಟ್ ಫಿಕ್ಸಿಂಗ್ ನಿಂದ ಬ್ಯಾನ್ ಆಗಿದ್ದ ಆಟಗಾರನಿಗೆ ಮತ್ತೆ ಮಣೆ, 38ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ!

38ನೇ ವರ್ಷದ ಆಸಿಫ್ ಅಫ್ರಿದಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂಲಕ ಚೊಚ್ಚಲ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ.
Asif Afridi and Shaheen Shah Afridi in frame
ಆಸಿಫ್ ಅಫ್ರಿದಿ ಅವರಿಗೆ ಕ್ಯಾಪ್ ಹಸ್ತಾಂತರಿಸಿದ ಶಾಹೀನ್ ಶಾ
Updated on

ರಾವಲ್ಪಿಂಡಿ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಆರು ತಿಂಗಳು ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸಿಫ್ ಅಫ್ರಿದಿ ಅವರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮತ್ತೆ ಅವಕಾಶ ನೀಡಲಾಗಿದೆ.

38ನೇ ವರ್ಷದ ಆಸಿಫ್ ಅಫ್ರಿದಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂಲಕ ಚೊಚ್ಚಲ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಟೆಸ್ಟ್ ಕ್ಯಾಪ್ ಅನ್ನು ವೇಗಿ ಶಾಹೀನ್ ಶಾ ಆಫ್ರಿದಿಯಿಂದ ಪಡೆದರು. ಪ್ರಥಮ ದರ್ಜೆ ಆಟಗಾರನಾಗಿ ಆಫ್ರಿದಿ 57 ಪಂದ್ಯಗಳಲ್ಲಿ 198 ವಿಕೆಟ್ ಪಡೆದಿದ್ದಾರೆ.

ಟೆಸ್ಟ್ ಕ್ಯಾಪ್‌ನೊಂದಿಗೆ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ 38 ವರ್ಷದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. 1955 ರಲ್ಲಿ 47 ನೇ ವಯಸ್ಸಿನಲ್ಲಿ ಲಾಹೋರ್‌ನಲ್ಲಿ ಭಾರತದ ವಿರುದ್ಧ ಮಿರಾನ್ ಬಕ್ಷ್ ಟೆಸ್ಟ್ ಕ್ರಿಕೆಟ್ ಗೆ ಚೊಚ್ಚಲ ಎಂಟ್ರಿ ನೀಡಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆಸಿಫ್ ಅಫ್ರಿದಿ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಶಿಕ್ಷೆ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಇರುವಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರಿಗೆ ಮತ್ತೆ ಮಣೆ ಹಾಕಿದೆ. ಆದರೆ ನಿಷೇಧವನ್ನು ಸಡಿಲಿಸಲು ಯಾವುದೇ ಕಾರಣವನ್ನು ನೀಡಿಲ್ಲ.

Asif Afridi and Shaheen Shah Afridi in frame
'ಪಾಕಿಸ್ತಾನ ಕ್ರಿಕೆಟ್ ಸದ್ಯ ಐಸಿಯುನಲ್ಲಿದೆ ಏಕೆಂದರೆ...': ಮಾಜಿ ನಾಯಕ ಶಾಹಿದ್ ಅಫ್ರಿದಿ ಸ್ಫೋಟಕ ಹೇಳಿಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com