'ಪಾಕಿಸ್ತಾನ ಕ್ರಿಕೆಟ್ ಸದ್ಯ ಐಸಿಯುನಲ್ಲಿದೆ ಏಕೆಂದರೆ...': ಮಾಜಿ ನಾಯಕ ಶಾಹಿದ್ ಅಫ್ರಿದಿ ಸ್ಫೋಟಕ ಹೇಳಿಕೆ

ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳಲು ತರಬೇತುದಾರರು ಆಟಗಾರರನ್ನು ದೂಷಿಸುತ್ತಾರೆ. ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿಯು ಸಹ ಆಟಗಾರರು ಮತ್ತು ತರಬೇತುದಾರರನ್ನು ದೂಷಿಸುವುದನ್ನು ನೋಡುವುದು ದುಃಖಕರವಾಗಿದೆ.
ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ
Updated on

ಆಲ್‌ರೌಂಡರ್ ಶಾದಾಬ್ ಖಾನ್ ಅವರು ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿರುವುದನ್ನು ಮಾಜಿ ನಾಯಕ ಶಾಹಿದ್ ಅಫ್ರಿದಿ ಪ್ರಶ್ನಿಸಿದ್ದಾರೆ. ಇಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದಲೇ ಪಾಕಿಸ್ತಾನ ಕ್ರಿಕೆಟ್ ಸದ್ಯ ಐಸಿಯುನಲ್ಲಿದೆ ಎಂದು ಹೇಳಿದ್ದಾರೆ. ಕಳೆದ ಟಿ20 ವಿಶ್ವಕಪ್ ನಂತರ, ಶಾದಾಬ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಸರಣಿಗಾಗಿ ಪಾಕಿಸ್ತಾನದ ಟಿ20 ತಂಡದಲ್ಲಿ ಸಲ್ಮಾನ್ ಅಲಿ ಆಘಾ ಅವರಿಗೆ ಉಪ ನಾಯಕನನ್ನಾಗಿ ನೇಮಿಸಲಾಗಿದೆ.

'ಯಾವ ಆಧಾರದ ಮೇಲೆ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳಲಾಗಿದೆ? ದೇಶೀಯ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಏನು ಅಥವಾ ಬೇರೆ ಯಾವ ಮಾನದಂಡದ ಆಧಾರದಲ್ಲಿ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಲಾಗಿದೆ' ಎಂದು ಶಾಹಿದ್ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಹೇಳಿದರು.

'ಆಟಗಾರರ ಅರ್ಹತೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳದ ಹೊರತು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಏನೂ ಬದಲಾಗುವುದಿಲ್ಲ. 'ನಾವು ಯಾವಾಗಲೂ ಸಿದ್ಧತೆಗಳ ಬಗ್ಗೆ ಮಾತನಾಡುತ್ತೇವೆ ಮತ್ತು ಆದರೆ, ತಂಡವು ಯಾವುದೇ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಮಾತ್ರ, ಗಮನವು ದೂಷಣೆ ಮತ್ತು ಕಠಿಣ ಕ್ರಮಗಳ ಕುರಿತು ಮಾತನಾಡುತ್ತೇವೆ. ತಪ್ಪು ನಿರ್ಧಾರಗಳಿಂದಾಗಿ ಪಾಕಿಸ್ತಾನ ಕ್ರಿಕೆಟ್ ಐಸಿಯುನಲ್ಲಿದೆ ಎಂಬುದು ಸತ್ಯ. ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಂಡಾಗಲೆಲ್ಲ, ಅವರು ಬಂದು ಎಲ್ಲವನ್ನೂ ಬದಲಾಯಿಸುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರಗಳು ಮತ್ತು ನೀತಿಗಳಲ್ಲಿ ನಿರಂತರತೆ, ಸ್ಥಿರತೆ ಇಲ್ಲ. ಯಾವಾಗಲೂ ತಂಡದ ನಾಯಕ, ತರಬೇತುದಾರರು ಅಥವಾ ಕೆಲವು ಆಟಗಾರರನ್ನು ಬದಲಾಯಿಸುತ್ತಲೇ ಇರುತ್ತೇವೆ. ಆದರೆ, ಕೊನೆಯಲ್ಲಿ ಮಂಡಳಿಯ ಅಧಿಕಾರಿಗಳ ಹೊಣೆಗಾರಿಕೆ ಏನು' ಎಂದು ಮಾಜಿ ನಾಯಕ ಪ್ರಶ್ನಿಸಿದರು.

ಶಾಹಿದ್ ಅಫ್ರಿದಿ
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ; ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಪಾಕಿಸ್ತಾನ

ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳಲು ತರಬೇತುದಾರರು ಆಟಗಾರರನ್ನು ದೂಷಿಸುತ್ತಾರೆ. ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿಯು ಸಹ ಆಟಗಾರರು ಮತ್ತು ತರಬೇತುದಾರರನ್ನು ದೂಷಿಸುವುದನ್ನು ನೋಡುವುದು ದುಃಖಕರವಾಗಿದೆ. ತಂಡದ ನಾಯಕ ಮತ್ತು ತರಬೇತುದಾರರ ತಲೆ ಮೇಲೆ ನಿರಂತರವಾಗಿ ಕತ್ತಿ ನೇತಾಡುತ್ತಿರುವಾಗ ನಮ್ಮ ಕ್ರಿಕೆಟ್ ಹೇಗೆ ಪ್ರಗತಿ ಹೊಂದುತ್ತದೆ? ಎಂದು ಆಫ್ರಿದಿ ಪ್ರಶ್ನಿಸಿದ್ದಾರೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸಕಾರಾತ್ಮಕ ವ್ಯಕ್ತಿಯಾಗಿದ್ದರೂ, ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ ಎಂಬುದು ಅಷ್ಟೇ ಸತ್ಯ. ಅವರು ಪಾಕಿಸ್ತಾನಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುತ್ತಾರೆ. ಆದರೆ, ಕೊನೆಯಲ್ಲಿ ಅವರು ಮತ್ಯಾರದ್ದೋ ಸಲಹೆಗಳನ್ನ ಅನುಸರಿಸುತ್ತಾರೆ. ಒಂದೇ ಸಮಯದಲ್ಲಿ ಮೂರು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಪಿಸಿಬಿ ಅಧ್ಯಕ್ಷರಾಗಿರುವುದು ಪೂರ್ಣ ಸಮಯದ ಕೆಲಸವಾದ್ದರಿಂದ ಅವರು ಒಂದು ಕೆಲಸದ ಮೇಲೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com