
ಐಪಿಎಲ್ 2026ಕ್ಕೂ ಮುನ್ನ ಭಾರತದ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಅವರ ಭವಿಷ್ಯದ ಬಗ್ಗೆ ವದಂತಿಗಳು ಹರಡುತ್ತಲೇ ಇವೆ. 30 ವರ್ಷದ ಸಂಜು ಸ್ಯಾಮ್ಸನ್ ಭಾರತದ ಏಷ್ಯಾ ಕಪ್ ವಿಜೇತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ರಾಜಸ್ಥಾನ್ ರಾಯಲ್ಸ್ (RR) ತಂಡದೊಂದಿಗೆ ಸ್ಯಾಮ್ಸನ್ ಮುಂದುವರಿಯುವ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಲೇ ಇದ್ದು, ಇದೀಗ ಅವರ ಹೆಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ತಳುಕು ಹಾಕಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳನ್ನು ಆಡುವ ನಿರೀಕ್ಷೆಯಲ್ಲಿರುವ ಸಂಜು ಸ್ಯಾಮ್ಸನ್, ಟಿ20ಐ ಮೋಡ್‌ಗೆ ಮರಳಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ತಾರೆ 2025ರ ರಣಜಿ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಕೇರಳ ಪರ ಆಡಿದ್ದ ಅವರು ಅರ್ಧಶತಕ ಗಳಿಸಿದರು. ಅಂದಿನಿಂದ ಅವರು ಆರ್‌ಸಿಬಿಯ ಥ್ರೋಡೌನ್ ಸ್ಪೆಷಲಿಸ್ಟ್ ಗೇಬ್ರಿಯಲ್ ಅವರೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ. ಅವರೊಂದಿಗಿನ ಫೋಟೊ ಇದೀಗ ಎಲ್ಲೆಡೆ ಹಂಚಿಕೆಯಾಗಿದ್ದು, ಊಹಾಪೋಹಗಳಿಗೆ ಕಾರಣವಾಗಿದೆ.
ಆ ಚಿತ್ರ ವೈರಲ್ ಆಗಿದ್ದು, ಸ್ಯಾಮ್ಸನ್ ಆರ್‌ಸಿಬಿಗೆ ಸ್ಥಳಾಂತರಗೊಂಡಿದ್ದಾರೆ ಎಂಬುದಕ್ಕೆ ಸಂಬಂಧ ಕಲ್ಪಿಸಲಾಗಿದೆ. ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರುವುದು ಉತ್ತಮ ಸಾಧನೆಯಾದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಐಪಿಎಲ್ ಆಡದಿರುವಾಗ ಆಟಗಾರರು ಹೆಚ್ಚಾಗಿ ಇತರ ತಂಡಗಳ ತಜ್ಞರೊಂದಿಗೆ ತರಬೇತಿ ಪಡೆಯುತ್ತಾರೆ. ವಾಸ್ತವವಾಗಿ, ಭಾರತ vs ಆಸ್ಟ್ರೇಲಿಯಾ ಸರಣಿಗೆ ಮರಳುವ ಮೊದಲು, ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ನಯೀಮ್ ಅಮೀನ್ ಅವರೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದರು.
ಶುಭಮನ್ ಗಿಲ್ ಅವರ ಮರಳುವಿಕೆ ಸಂಜು ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ತಳ್ಳಿದ್ದು, ಅವರು ತಮ್ಮ ಹೊಸ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಭಾರತ vs ಆಸ್ಟ್ರೇಲಿಯಾ ಟಿ20ಐಗಳು ವಿಭಿನ್ನ ಪರೀಕ್ಷೆಯನ್ನು ಒಡ್ಡಲಿವೆ. ಏಷ್ಯಾ ಕಪ್ 2025 ಕ್ಕಿಂತ ಹೆಚ್ಚಿನ ವೇಗ ಮತ್ತು ಬೌನ್ಸ್ ನೀಡುವ ಪಿಚ್‌ಗಳನ್ನು ಇದು ಹೊಂದಿದೆ.
ಐಪಿಎಲ್ 2026ಕ್ಕೂ ಮುನ್ನ ಎಲ್ಲ ಫ್ರಾಚೈಂಸಿಗಳಿಗೆ ನವೆಂಬರ್ 15ರವರೆಗೆ ಗಡುವು ನೀಡಲಾಗಿದ್ದು, ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಳ್ಳಬಹುದು ಎನ್ನಲಾಗಿದೆ. ರಾಜಸ್ಥಾನ ರಾಯಲ್ಸ್ ತಮ್ಮ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಫ್ರಾಂಚೈಸಿ ಮತ್ತೊಂದು ತಂಡದೊಂದಿಗೆ ಟ್ರೇಡಿಂಗ್ ಅನ್ನು ಬಯಸಿದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಆರ್‌ಆರ್ ಹಣ ಪಡೆಯಲು ಆಯ್ಕೆ ಮಾಡಿಕೊಂಡರೆ ಸಂಜು ಸ್ಯಾಮ್ಸನ್ ಅವರನ್ನು ಹರಾಜಿಗೆ ಮುನ್ನ ಬಿಡುಗಡೆ ಮಾಡಬಹುದು. 2025ರ ಆವೃತ್ತಿಯ ನಂತರ ಫ್ರಾಂಚೈಸಿ ಸಂಪೂರ್ಣ ಬದಲಾವಣೆಗಳಿಗೆ ಒಳಗಾಗುತ್ತಿದೆ.
Advertisement