ಪಾಕಿಸ್ತಾನದ ಏಕದಿನ ತಂಡದ ನಾಯಕ ಸ್ಥಾನದಿಂದ ಮೊಹಮ್ಮದ್ ರಿಜ್ವಾನ್‌ರನ್ನು ಕೆಳಗಿಳಿಸಿದ್ದು ಏಕೆ? ಇಲ್ಲಿದೆ ಕಾರಣ...

ಪಿಸಿಬಿ ಹೇಳಿಕೆಯಲ್ಲಿ ರಿಜ್ವಾನ್ ಬಗ್ಗೆ ಯಾವುದೇ ಉಲ್ಲೇಖ ಮಾಡದೆ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶಾಹೀನ್ ಅಫ್ರಿದಿ ನಾಯಕನಾಗಿ ಮರಳಲಿದ್ದಾರೆ ಎಂದು ಹೇಳಿದೆ.
Mohammad Rizwan
ಮೊಹಮ್ಮದ್ ರಿಜ್ವಾನ್‌
Updated on

ಬೆಟ್ಟಿಂಗ್ ಕಂಪನಿಗಳನ್ನು ಉತ್ತೇಜಿಸಲು ನಿರಾಕರಿಸಿದ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡದ ತಾರೆ ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ನಾಯಕನ ಸ್ಥಾನದಿಂದ ಬದಲಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಂಗಳವಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶಾಹೀನ್ ಅಫ್ರಿದಿ ಅವರನ್ನು ಹೊಸ ನಾಯಕನನ್ನಾಗಿ ಹೆಸರಿಸಿದ್ದು, ರಿಜ್ವಾನ್ ಅವರನ್ನು ಅಲ್ಪಾವಧಿಯಲ್ಲೇ ಕೆಳಗಿಳಿಸಿದೆ. ಈ ಮೂಲಕ ಪಾಕಿಸ್ತಾನದ ನಾಯಕರ ಮ್ಯೂಸಿಕಲ್ ಚೇರ್ ಆಟ ಮುಂದುವರಿದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪಾಕಿಸ್ತಾನದ ನಾಯಕ ಸ್ಥಾನದಿಂದ ರಿಜ್ವಾನ್ ಅವರನ್ನು ವಜಾಗೊಳಿಸಲು ಪ್ರಮುಖ ಕಾರಣ ಬೆಟ್ಟಿಂಗ್ ಕಂಪನಿಗಳನ್ನು ಬೆಂಬಲಿಸಲು ನಿರಾಕರಿಸಿದ್ದು ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಕೀಪರ್-ಬ್ಯಾಟರ್ ತನ್ನ ನಿರ್ಧಾರವನ್ನು ಮಂಡಳಿಗೆ ತಿಳಿಸಿದ್ದರಿಂದ ಅವರನ್ನು ನಾಯಕ ಸ್ಥಾನದಿಂದ ಬದಲಿಸಲಾಯಿತು. ಪಿಸಿಬಿಯ ಬೆಟ್ಟಿಂಗ್ ಸಂಸ್ಥೆಗಳೊಂದಿಗೆ ಸಹಯೋಗವನ್ನು ರಿಜ್ವಾನ್ ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ.

'ರಿಜ್ವಾನ್ ಅವರು ಬೆಟ್ಟಿಂಗ್ ಕಂಪನಿಗಳನ್ನು ಬೆಂಬಲಿಸುವುದಿಲ್ಲ ಎಂದು ಪಿಸಿಬಿಗೆ ತಿಳಿಸಿದ್ದರು. ಇದುbs ಅವರನ್ನು ವಜಾಗೊಳಿಸಲು ಪ್ರಮುಖ ಕಾರಣವಾಗಿದೆ. ಅಲ್ಲದೆ, ಬೆಟ್ಟಿಂಗ್ ಸಂಸ್ಥೆಗಳೊಂದಿಗೆ ಪಿಸಿಬಿಯ ಸಹಯೋಗವನ್ನು ಅವರು ವಿರೋಧಿಸಿದ್ದರು' ಎಂದು ಪಿಸಿಬಿ ಮೂಲಗಳು ತಿಳಿಸಿವೆ.

Mohammad Rizwan
PCB ಗೊಂದಲ: ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಶಾಹೀನ್ ಅಫ್ರಿದಿ ನೇಮಕ; ಮೊಹಮ್ಮದ್ ರಿಜ್ವಾನ್ ಔಟ್!

ಪಿಸಿಬಿ ಹೇಳಿಕೆಯಲ್ಲಿ ರಿಜ್ವಾನ್ ಬಗ್ಗೆ ಯಾವುದೇ ಉಲ್ಲೇಖ ಮಾಡದೆ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶಾಹೀನ್ ಅಫ್ರಿದಿ ನಾಯಕನಾಗಿ ಮರಳಲಿದ್ದಾರೆ ಎಂದು ಹೇಳಿದೆ. ಮುಖ್ಯ ಕೋಚ್ ಮೈಕ್ ಹೆಸ್ಸನ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವಿನ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನವನ್ನು ಸರಣಿ ಗೆಲುವುಗಳಿಗೆ ಮುನ್ನಡೆಸಿದ್ದ ರಿಜ್ವಾನ್, ಈ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದ ನಂತರ ನಾಯಕನಾಗಿ ಎಡವಿದ್ದರು.

'ಪಾಕಿಸ್ತಾನದ ವೈಟ್-ಬಾಲ್ ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ಭಾಗವಹಿಸಿದ್ದ ಆಯ್ಕೆ ಸಮಿತಿಯ ಸಭೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಾಕಿಸ್ತಾನದ ಏಕದಿನ ತಂಡವನ್ನು ಶಾಹೀನ್ ಮುನ್ನಡೆಸಲಿದ್ದಾರೆ ಎಂದು ನಿರ್ಧರಿಸಲಾಯಿತು' ಎಂದು ಪಿಸಿಬಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com