

ಗುವಾಹತಿ: ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ 2025 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ದಾಖಲೆಗಳ ಸರಣಿಯನ್ನೇ ನಿರ್ಮಿಸಿದ್ದು, ಇಂಗ್ಲೆಂಡ್ ತೀವ್ರ ಮುಖಭಂಗ ಅನುಭವಿಸಿದೆ.
ಇಂದು ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 125 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮಹಿಳೆಯರು ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ನೀಡಿದ್ದ 320 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 42.3 ಓವರ್ ನಲ್ಲಿ 194 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 125 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಇಂಗ್ಲೆಂಡ್ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ (64), ಆಲಿಸ್ ಕ್ಯಾಪ್ಸಿ (50) ಅರ್ಧಶತಕ ಸಿಡಿಸಿದರು. ಅಂತೆಯೇ ಡೇನಿಯಲ್ ವ್ಯಾಟ್-ಹಾಡ್ಜ್ (34) ಮತ್ತು ಲಿನ್ಸೆ ಸ್ಮಿತ್ (27) ದಕ್ಷಿಣ ಆಫ್ರಿಕಾಗೆ ಪ್ರತಿರೋಧ ತೋರಿದರಾದರೂ ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ದಕ್ಷಿಣ ಆಫ್ರಿಕಾ ಪರ ಮಾರಿಝನ್ನೆ ಕಾಪ್ 5 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರೆ, ನಡಿನೆ ಡಿ ಕ್ಲೆರ್ಕ್ 2, ಖಾಕಾ, ಮ್ಲಬಾ ಮತ್ತು ಲೂಸ್ ತಲಾ 1 ವಿಕೆಟ್ ಪಡೆದರು.
ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾ ವನಿತೆಯರು
ಇನ್ನು ಈ ಸೆಮೀ ಫೈನಲ್ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ವನಿತೆಯರು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ತೀವ್ರ ಮುಖಭಂಗ
ಇನ್ನು ಇಂದು ಇಂಗ್ಲೆಂಡ್ ಬರೊಬ್ಬರಿ 125 ರನ್ ಗಳ ಅಂತರದಲ್ಲಿ ಸೋತಿದ್ದು, ಇದು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ತಂಡವೊಂದರ ಅತೀ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು 1988ರಲ್ಲಿ ನಾರ್ತ್ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ 126 ರನ್ ಗಳ ಅಂತರದ ಸೋಲು ಕಂಡಿತ್ತು.
Biggest defeat margins for ENG-W in World Cups
126 runs vs AUS-W, North Sydney, 1988
125 runs vs SA-W, Guwahati, 2025*
93 runs vs NZ-W, Lincoln, 2000
71 runs vs AUS-W, Christchurch, 2022
54 runs vs AUS-W, Lincoln, 2000
ವಿಶ್ವಕಪ್ ನಿರ್ಣಾಯಕ ಘಟದಲ್ಲಿ ಆಫ್ರಿಕಾ ಪ್ರದರ್ಶನ
ಇನ್ನು ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮೀ ಫೈನಲ್ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ವರೆಗೂ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ 9 ಬಾರಿ ದಕ್ಷಿಣ ಆಫ್ರಿಕಾ ತಂಡ 9 ಬಾರಿ ಸೆಮೀಸ್ ಹಂತಕ್ಕೇರಿದ್ದು, ಈ ಪೈಕಿ ಇಂದಿನ ಪಂದ್ಯ ಮಾತ್ರ ಗೆದ್ದು ಉಳಿದ8 ಪಂದ್ಯಗಳ ಪೈಕಿ 7 ರಲ್ಲಿ ಸೋತಿದೆ. ಒಂದು ಪಂದ್ಯ ಅಂದರೆ 1999ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಟೈ ಆಗಿತ್ತು.
South Africa in semis in ODI WC (Men’s/Women’s)
Matches: 9
Won: 1
Lost: 7
Tied: 1 (vs AUS, 1999)
ದಕ್ಷಿಣ ಆಫ್ರಿಕಾ ತಂಡವು ಪುರುಷರ ಅಥವಾ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿರುವುದು ಇದೇ ಮೊದಲು. ದಕ್ಷಿಣ ಆಫ್ರಿಕಾ ಮಹಿಳಾ ತಂಡಕ್ಕೆ ವಿಶ್ವಕಪ್‌ಗಳಲ್ಲಿ (ಏಕದಿನ+ಟಿ20ಐ ಸೇರಿ) ಇದು ಸತತ ಮೂರನೇ ಫೈನಲ್ ಆಗಿದೆ. ಕಳೆದ ಎರಡು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಅವರು ಫೈನಲ್ ತಲುಪಿದ್ದರು.
Advertisement