

ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಏಕದಿನ ಬ್ಯಾಟರ್ ಆಗಿದ್ದಾರೆ. ರೋಹಿತ್ 38ನೇ ವಯಸ್ಸಿನಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. ರೋಹಿತ್ ಏಕದಿನ ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಭಾರತದ ಮಾಜಿ ನಾಯಕ ರೋಹಿತ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಒಟ್ಟು 202 ರನ್ ಗಳಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಅಜೇಯ ಶತಕ ಸೇರಿದಂತೆ ಅವರ ಸರಾಸರಿ 101 ಆಗಿತ್ತು. ಈ ಪಂದ್ಯದ ಗೆಲುವಿನೊಂದಿಗೆ, ರೋಹಿತ್ ಸರಣಿ ಶ್ರೇಷ್ಠ ಆಟಗಾರ ಮತ್ತು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಪಡೆದರು. ರೋಹಿತ್ 781 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ ಗಿಲ್ ಎರಡು ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರ ರೇಟಿಂಗ್ ಅಂಕಗಳು 745ಕ್ಕೆ ಇಳಿದಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕರೆದೊಯ್ದ ರೋಹಿತ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಗಿಲ್ ನಂತರ ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ಆದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಭಾರತದ ಹೊಸ ನಾಯಕ ಶುಭ್‌ಮನ್ ಗಿಲ್ ಅವರನ್ನು ಹಿಂದಿಕ್ಕಿದ್ದಾರೆ. ಗಿಲ್ ಈಗ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಅವರು ಕೇವಲ 10, 9 ಮತ್ತು 24 ರನ್‌ಗಳನ್ನು ಗಳಿಸಿದ್ದರು.
ರೋಹಿತ್ ಶರ್ಮಾ ವಿಶ್ವ ದಾಖಲೆ ಸೃಷ್ಟಿ
38 ವರ್ಷ ಮತ್ತು 182 ದಿನಗಳಲ್ಲಿ, ರೋಹಿತ್ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ತಲುಪಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ. 38 ವರ್ಷ ವಯಸ್ಸಿನ ನಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಏಕೈಕ ಬ್ಯಾಟ್ಸ್‌ಮನ್ ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್. ಸಚಿನ್ 2011 ರಲ್ಲಿ ಟೆಸ್ಟ್ ಸ್ವರೂಪದಲ್ಲಿ ಈ ಸಾಧನೆ ಮಾಡಿದರು.
Advertisement