
14 ವರ್ಷದ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟ ಆಟಗಾರ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದರು. ರಾಜಸ್ಥಾನ ರಾಯಲ್ಸ್ (ಆರ್‌ಆರ್) ಪರ ಆಡುತ್ತಿರುವ ಸೂರ್ಯವಂಶಿ ಕೇವಲ ಏಳು ಪಂದ್ಯಗಳಲ್ಲಿ 252 ರನ್‌ಗಳನ್ನು ಗಳಿಸಿದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಮೆಚ್ಚುಗೆ ಗಳಿಸಿದರು. ವೈಭವ್ ಅವರ ಪ್ರಗತಿಯನ್ನು ಕಂಡು ತಂಡದ ಸಹ ಆಟಗಾರ ನಿತೀಶ್ ರಾಣಾ ಅವರೇ ಆಶ್ಚರ್ಯಚಕಿತರಾಗಿದ್ದಾರೆ. ವೈಭವ್‌ಗೆ ಈಗ ನಿಜವಾಗಿಯೂ ಕೇವಲ 14 ವರ್ಷ ವಯಸ್ಸಾಗಿದೆಯೇ ಅಥವಾ ಎಂದು ಪ್ರಶ್ನಿಸಿದ್ದಾರೆ.
2025ರ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಪಂದ್ಯದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಸೂರ್ಯವಂಶಿ ಬಗ್ಗೆ ಜಗತ್ತಿಗೆ ತಿಳಿದಿಲ್ಲದ ಒಂದು ವಿಷಯವನ್ನು ಹೇಳಲು ರಾಣಾ ಅವರನ್ನು ಕೇಳಲಾಯಿತು.
'ಅವರಿಗೆ ನಿಜವಾಗಿಯೂ 14 ವರ್ಷ ವಯಸ್ಸಾಗಿದೆಯೋ, ಇಲ್ಲವೋ' ಎಂದ ರಾಣಾ, 'ನಾನು ತಮಾಷೆ ಮಾಡುತ್ತಿದ್ದೇನೆ' ಎಂದು ಅವರು ತಕ್ಷಣವೇ ಸೇರಿಸಿದರು.
ಸೂರ್ಯವಂಶಿ ಐಪಿಎಲ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 13 ನೇ ವಯಸ್ಸಿನಲ್ಲಿ ಐಪಿಎಲ್ ಹರಾಜಿನಲ್ಲಿ ಖರೀದಿಸಲಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಅನುಭವಿ ಶಾರ್ದೂಲ್ ಠಾಕೂರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯದಲ್ಲಿ 20 ಎಸೆತಗಳಲ್ಲಿ 34 ರನ್ ಗಳಿಸಿದರು. ಅದಾದ ಎರಡು ಪಂದ್ಯಗಳ ನಂತರ ನಿಜವಾಗಿಯೂ ತಮ್ಮ ಛಾಪು ಮೂಡಿಸಿದರು.
ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಅವರು 38 ಎಸೆತಗಳಲ್ಲಿ 101 ರನ್ ಗಳಿಸಿದರು.
ಈಮಧ್ಯೆ, ನಿತೀಶ್ ರಾಣಾ ಐಪಿಎಲ್ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಕೇವಲ 36 ಎಸೆತಗಳಲ್ಲಿ ಪಂದ್ಯ ಗೆಲ್ಲುವ 81 ರನ್ ಗಳಿಸಿದರೂ, ಉಳಿದ ಪಂದ್ಯಗಳಲ್ಲಿ ಹೆಚ್ಚಿನ ಕೊಡುಗೆ ನೀಡಲಿಲ್ಲ. 11 ಪಂದ್ಯಗಳಲ್ಲಿ, ರಾಣಾ ಕೇವಲ 217 ರನ್ ಗಳಿಸಿದರು.
Advertisement