Shreyas Iyer ಟೀಂ ಇಂಡಿಯಾ ಕಮ್ ಬ್ಯಾಕ್ ಕನಸು ಮತ್ತಷ್ಟು ದೂರ; Duleep Trophy Semi-Final ಪಂದ್ಯ..? ಆಗಿದ್ದೇನು?

ದುಲೀಪ್ ಟ್ರೋಫಿ 2025 ರ ಮೊದಲ ಸೆಮಿಫೈನಲ್‌ ನಲ್ಲಿನ ಶ್ರೇಯರ್ ಹೀನಾಯ ಪ್ರದರ್ಶನ ಅವರನ್ನು ಭಾರತ ತಂಡದಿಂದ ಮತ್ತಷ್ಟು ದೂರ ಮಾಡುವ ಅಪಾಯವಿದೆ. ಸೆಮೀಸ್ ನಲ್ಲಿ ಪಶ್ಚಿಮ ವಲಯವು ಕೇಂದ್ರ ವಲಯದ ವಿರುದ್ಧ ಪೈಪೋಟಿ ನಡೆಸಿತು.
Shreyas Iyer
ಶ್ರೇಯಸ್ ಅಯ್ಯರ್
Updated on

ನವದೆಹಲಿ: ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕು ಎನ್ನುವ ಶ್ರೇಯಸ್ ಅಯ್ಯರ್ (Shreyas Iyer) ಕನಸು ಮತ್ತೆ ದೂರಾಗುವ ಅಪಾಯ ಎದುರಾಗಿದ್ದು Duleep Trophy Semi-Final ಪಂದ್ಯದಲ್ಲಿನ ಹೀನಾಯ ಪ್ರದರ್ಶನ ಕಾರಣ ಎನ್ನಲಾಗಿದೆ.

ಹೌದು... ಇದೇ ಸೆಪ್ಟೆಂಬರ್ 4, ಗುರುವಾರ, ದುಲೀಪ್ ಟ್ರೋಫಿ 2025 ರ ಮೊದಲ ಸೆಮಿಫೈನಲ್‌ ನಲ್ಲಿನ ಶ್ರೇಯರ್ ಹೀನಾಯ ಪ್ರದರ್ಶನ ಅವರನ್ನು ಭಾರತ ತಂಡದಿಂದ ಮತ್ತಷ್ಟು ದೂರ ಮಾಡುವ ಅಪಾಯವಿದೆ. ಸೆಮೀಸ್ ನಲ್ಲಿ ಪಶ್ಚಿಮ ವಲಯವು ಕೇಂದ್ರ ವಲಯದ ವಿರುದ್ಧ ಪೈಪೋಟಿ ನಡೆಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಶ್ಚಿಮ ವಲಯವು ಮೊದಲ ಇನ್ನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್ ಆಯಿತು.

ಪಶ್ಚಿಮ ವಲಯದ ಪರ ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ ಒಂದಂಕಿ ಮೊತ್ತಕ್ಕೆ ಔಟಾದರೆ, ರುತುರಾಜ್ ಗಾಯಕ್ವಾಡ್ 184 ರನ್ ಕಲೆಹಾಕಿ ತಂಡಕ್ಕೆ ನೆರವಾದರು.

ಆದಕೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ 25 ರನ್ ಗಳಿಗೇ ವಿಕೆಟ್ ಒಪ್ಪಿಸಿ ಮತ್ತೆ ನಿರಾಶೆ ಮೂಡಿಸಿದರು. ನಾಯಕ ಶಾರ್ದುಲ್ ಠಾಕೂರ್ (64 ರನ್) ಮತ್ತು ಟನುಷ್ ಕೊಟಿಯಾನ್ (76 ರನ್) ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.

Shreyas Iyer
T20 World Cup: ಕಿವೀಸ್ ಸ್ಫೋಟಕ ಬ್ಯಾಟರ್ Ross Taylor ನಿವೃತ್ತಿ ವಾಪಸ್; ಹೊಸ ದೇಶದ ಪರ ಮಾಜಿ RCB ಸ್ಟಾರ್ ಕಣಕ್ಕೆ!

ಅಯ್ಯರ್ ಗೆ ಮಾರಕವಾದ ಖಲೀಲ್ ಅಹ್ಮದ್

ಇನ್ನು ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪಶ್ಟಿಮ ವಲಯಕ್ಕೆ ಇನ್ನಿಲ್ಲದಂತೆ ಕಾಡಿದ್ದು, ಕೇಂದ್ರ ವಲಯದ ವೇಗಿ ಖಲೀಲ್ ಅಹ್ಮದ್.. ಅಯ್ಯರ್ ಮತ್ತು ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆ ಮೂಲಕ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಖಲೀಲ್ ಔಟ್ ಮಾಡಿದರು. ಭಾರತದ ಇಬ್ಬರು ತಾರೆಗಳು ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ಛಾಪು ಮೂಡಿಸಲು ವಿಫಲರಾದರು.

ನಿರ್ಣಾಯಕ ಪಂದ್. ಕೈಚೆಲ್ಲಿದ ಅಯ್ಯರ್

ಇನ್ನು ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಪರಿಗಣಿಸಲಾಗಿರುವುದರಿಂದ ಬಲಗೈ ಬ್ಯಾಟ್ಸ್‌ಮನ್ ಶ್ರೇಯಸ್‌ ಅಯ್ಯರ್ ಗೆ ಇದು ಒಂದು ಪ್ರಮುಖ ಪಂದ್ಯವಾಗಿತ್ತು, ಏಕೆಂದರೆ ಅವರು ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಪರಿಗಣಿಸಲ್ಪಟ್ಟಿರುವುದರಿಂದ ಅವರು ಬಹಳಷ್ಟು ಅಪಾಯದಲ್ಲಿದ್ದರು. ತಂಡಕ್ಕೆ ಕಮ್ ಬ್ಯಾಕ್ ಮಾಡಲು ಈ ದುಲೀಪ್ ಟ್ರೋಫಿ ಪಂದ್ಯ ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಏಷ್ಯಾಕಪ್ ಟೂರ್ನಿಗೂ ಆಯ್ಕೆಯಾಗದ ಶ್ರೇಯಸ್ ಅಯ್ಯರ್

ವಿಂಡೀಸ್ ಸರಣಿಗಾಗಿ ಆಯ್ಕೆದಾರರ ನಂಬಿಕೆಯನ್ನು ಗಳಿಸಲು ಅಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಶ್ರೇಯಸ್ ಅಯ್ಯರ್ ಒಂದು ವರ್ಷದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಅವರು ಐಪಿಎಲ್‌ನಲ್ಲಿ ತಮ್ಮ ವೀರೋಚಿತ ಪ್ರದರ್ಶನಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದರು, ಆದರೆ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಪ್ರಾರಂಭವಾಗುವ ಭಾರತದ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

Shreyas Iyer
ಏಷ್ಯಾ ಕಪ್ 2025 ಸನ್ನಿಹದಲ್ಲಿರುವಂತೆಯೇ 'ಹೊಸ ಅವತಾರ'ದಲ್ಲಿ ಹಾರ್ದಿಕ್ ಪಾಂಡ್ಯ! ಫ್ಯಾನ್ಸ್ ಏನಂತಾರೆ?

ಟೆಸ್ಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್

ಇನ್ನು ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿರುವುದರಿಂದ ತಂಡದ ಮತ್ತೋರ್ವ ಹಿರಿಯ ಆಟಗಾರ ಶ್ರೇಯಸ್ ಅಯ್ಯರ್ ಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. 30 ವರ್ಷ ವಯಸ್ಸಿನ ಶ್ರೇಯಸ್ ಅಯ್ಯರ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಸೇರಿಸಿಕೊಳ್ಳಲು ಯೋಜನೆಗಳು ನಡೆಯುತ್ತಿವೆ. ಅಯ್ಯರ್ ಕೊನೆಯ ಬಾರಿಗೆ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ರೆಡ್-ಬಾಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬಿಸಿಸಿಐ ಮತ್ತು ಆಯ್ಕೆದಾರರು ಅಕ್ಟೋಬರ್ 2 ರಂದು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅಯ್ಯರ್ ಅವರನ್ನು ಎದುರು ನೋಡುತ್ತಿದ್ದಾರೆ. ಆದರೆ ಇದೇ ಹಂತದಲ್ಲಿ ಅವರ ಹೀನಾಯ ಪ್ರದರ್ಶನ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com