
ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೂ ಮುನ್ನಾ ಭಾರತ, ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ಮೂರು ರಾಷ್ಟ್ರಗಳ ನಾಯಕರು ಸಾಂಪ್ರದಾಯದಂತೆ ಜಂಟಿ ಸುದ್ದಿಗೋಷ್ಠಿಯನ್ನು ಮಾತನಾಡಿದ್ದಾರೆ .
ಈ ವೇಳೆ ನಿರೀಕ್ಷೆಯಂತೆ ಟೂರ್ನಿಯ ಎರಡು ಪ್ರಬಲ ತಂಡಗಳಾದ ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ ಹೆಚ್ಚಿನ ಪ್ರಶ್ನೆ ಕೇಳಲಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ಯಾವಾಗಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿರುತ್ತದೆ.
ಈ ನಿಟ್ಟಿನಲ್ಲಿಯೇ ಅನೇಕ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಆದರೆ, ಸುದ್ದಿಗೋಷ್ಠಿಯ ಕೊನೆಯಲ್ಲಿ ಪಾಕಿಸ್ತಾನ ನಾಯಕನ ವರ್ತನೆ ಪಂದ್ಯಗಳು ಹೇಗಿರುತ್ತವೆ ಎಂಬುದನ್ನು ಆರಂಭದಲ್ಲಿಯೇ ತೋರಿಸಿದಂತಿದೆ.
ಸಾಮಾನ್ಯವಾಗಿ ಸುದ್ದಿಗೋಷ್ಠಿಯ ಕೊನೆಯಲ್ಲಿ ಎಲ್ಲರೂ ವೇದಿಕೆ ಮೇಲೆ ಪರಸ್ಪರ ಹ್ಯಾಂಡ್ ಶೇಕ್ ಅಥವಾ ತಬ್ಬಿಕೊಳ್ಳುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ನಾಯಕ ಸಲ್ಮಾನ್ ಆಲಿ ಆಘಾ ಅದನ್ನು ಮಾಡಡೆ ಹೊರಟು ಹೋಗಿದ್ದಾರೆ. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ನಿರ್ಗಮತ ಬಾಗಿಲತ್ತ ಪಾಕ್ ನಾಯಕ ಹೊರಡುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಆದಾಗ್ಯೂ, ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಅಪ್ಘಾನಿಸ್ತಾನದ ನಾಯಕ ರಶೀದ್ ಖಾನ್, ಪಾಕ್ ನಾಯಕ ಸೇರಿದಂತೆ ಎಲ್ಲರಿಗೂ ವೇದಿಕೆಯಲ್ಲಿ ಹ್ಯಾಂಡ್ ಶೇಕ್ ಮತ್ತು ತಬ್ಬಿಕೊಳ್ಳುವುದು ಕಂಡುಬಂದಿದೆ. ಅಲ್ಲದೇ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಟಗಾರರು ಆಕ್ರಮಣಕಾರಿಯಾಗಿ ಆಡದಂತೆ ಸೂರ್ಯ ಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Advertisement