‘ಜಗಳಗಳು ನಡೆಯುತ್ತಲೇ ಇರುತ್ತವೆ, ಆದರೆ...’: ಪಾಕ್‌ ತಂಡದೊಂದಿಗೆ ಹ್ಯಾಂಡ್‌ಶೇಕ್‌ಗೆ ಭಾರತ ನಿರಾಕರಿಸಿದ್ದಕ್ಕೆ ಶೋಯೆಬ್ ಅಖ್ತರ್

ಪಾಕಿಸ್ತಾನದ ಸ್ಥಳೀಯ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ, ಭಾರತವು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸ್ವಲ್ಪ ಗ್ರೇಸ್ ತೋರಿಸಬೇಕಿತ್ತು ಮತ್ತು ಕೈಕುಲುಕಬೇಕಿತ್ತು ಎಂದಿದ್ದಾರೆ.
Shoaib Akhtar
ಶೋಯೆಬ್ ಅಖ್ತರ್
Updated on

ತೀವ್ರ ವಿರೋಧದ ಮಧ್ಯೆಯೇ ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಿದ್ದು, ಪಂದ್ಯದ ಬಳಿಕ ಹ್ಯಾಂಡ್‌ಶೇಖ್ ಮಾಡಲು ನಿರಾಕರಿಸಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಭಾರತ ತಂಡ ಪಾಕಿಸ್ತಾನದೊಂದಿಗೆ ಕೈಕುಲುಕದಿರುವುದನ್ನು ಖಂಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ, ಮೆನ್ ಇನ್ ಬ್ಲೂ ತಂಡವು ಸಾಮಾನ್ಯ ಸಂಪ್ರದಾಯದಿಂದ ವಿಮುಖವಾಗಿ ಮೈದಾನದಿಂದ ಹೊರನಡೆಯಲು ನಿರ್ಧರಿಸಿತು. ಭಾರತವು ಭಾನುವಾರ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಗೆಲುವಿನ ಓಟವನ್ನು ಮುಂದುವರೆಸಿದೆ.

ಪಾಕಿಸ್ತಾನದ ಸ್ಥಳೀಯ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ, ಭಾರತವು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸ್ವಲ್ಪ ಗ್ರೇಸ್ ತೋರಿಸಬೇಕಿತ್ತು ಮತ್ತು ಕೈಕುಲುಕಬೇಕಿತ್ತು. ಉಭಯ ದೇಶಗಳ ನಡುವೆ ಜಗಳಗಳು ನಡೆಯುತ್ತಿದ್ದರೂ ಮತ್ತು ಪರಿಸ್ಥಿತಿ ಉದ್ವಿಗ್ನವಾಗಿದ್ದರೂ, ಸೂರ್ಯಕುಮಾರ್ ಯಾದವ್ ಮತ್ತು ತಂಡ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಾರದಿತ್ತು ಎಂದು ಅಖ್ತರ್ ಹೇಳಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ತಮ್ಮ ತಂಡಕ್ಕೆ ಹಸ್ತಲಾಘವ ನಿರಾಕರಿಸಿದ ನಂತರ ಪತ್ರಿಕಾಗೋಷ್ಠಿಯಿಂದ ದೂರ ಉಳಿದದ್ದು ಸರಿ ಎಂದು ಅವರು ಹೇಳಿದ್ದಾರೆ.

'ಇದನ್ನು ರಾಜಕೀಯಗೊಳಿಸಬೇಡಿ. ಇದು ಕ್ರಿಕೆಟ್ ಪಂದ್ಯ. (ಪಾಕಿಸ್ತಾನ ತಂಡದೊಂದಿಗೆ) ಹಸ್ತಲಾಘವ ಮಾಡಿ. ಇದು ಕ್ರಿಕೆಟ್ ಆಟ, ನಿಮ್ಮ ಗ್ರೇಸ್ ಅನ್ನು ತೋರಿಸಿ. ಪರವಾಗಿಲ್ಲ, ಜಗಳಗಳು ನಡೆಯುತ್ತಲೇ ಇರುತ್ತವೆ, ವಿಷಯಗಳು ಬಿಸಿಯಾಗುತ್ತವೆ. ಆದರೆ, ನೀವು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಕೈಕುಲುಕಬಾರದು ಎಂದು ಇದರ ಅರ್ಥವಲ್ಲ' ಎಂದು ಅಖ್ತರ್ ಹೇಳಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಹಲ್ಗಾಮ್ ದಾಳಿಯ ನಂತರ ದೇಶದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಧಾರ ಇದಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಮತ್ತು ಅವರ ಮುಖದಲ್ಲಿ ನಗು ಮೂಡಿಸಲು ನಮಗೆ ಅವಕಾಶ ಸಿಕ್ಕಾಗಲೆಲ್ಲ ನಾವು ಅವರಿಗೆ ಹೆಚ್ಚಿನ ಕಾರಣಗಳನ್ನು ನೀಡುತ್ತೇವೆ' ಎಂದು ಅವರು ಹೇಳಿದರು.

Shoaib Akhtar
Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com