
ಅಬುದಾಬಿ: 2025ರ ಏಷ್ಯಾಕಪ್ ಟೂರ್ನಿಯ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಒಮನ್ ಬ್ಯಾಟರ್ ಅಮೀರ್ ಕಲೀಮ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಅಬುದಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಅದ್ಭುತ ಬ್ಯಾಟಿಂಗ್ ನಡೆಸಿದ ಅಮೀರ್ ಕಲೀಂ ಅರ್ಧಶತಕ ಸಿಡಿಸಿದರು.
ಕೇವಲ 39 ಎಸೆತಗಳನ್ನು ಎದುರಿಸಿದ ಅಮೀರ್ ಕಲೀಂ 2 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 51 ರನ್ ಗಳಿಸಿದರು.
ಆ ಮೂಲಕ ಅಮೀರ್ ಕಲೀಮ್ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇಂದು ಅರ್ಧಶತಕ ಗಳಿಸಿದ ಅಮೀರ್ ಕಲೀಂ ರ ವಯಸ್ಸು ಇಂದಿಗೆ 43 ವರ್ಷ 330 ದಿನಗಳಾಗಿದ್ದು ಆ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆ ಅಫ್ಘಾನಿಸ್ತಾನದ ಮಹಮದ್ ನಬಿ ಹೆಸರಲ್ಲಿತ್ತು. 40 ವರ್ಷ 260 ದಿನಗಳ ವಯಸ್ಸಿನ ನಬಿ ಇದೇ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 60 ರನ್ ಗಳಿಸಿ ಈ ಸಾಧನೆಗೆ ಪಾತ್ರರಾಗಿದ್ದರು. ಆದರೆ ಇದೀಗ ಈ ದಾಖಲೆಯನ್ನೂ ಅಮೀರ್ ಕಲೀಂ ಹಿಂದಿಕ್ಕಿದ್ದಾರೆ.
ಇನ್ನು ಹಾಲಿ ಪಂದ್ಯದಲ್ಲಿ ಕಲೀಂ ಕೇವಲ 46 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 64 ರನ್ ಸಿಡಿಸಿ ಒಮನ್ ತಂಡದ ಪರ ಗರಿಷ್ಠ ರನ್ ಕಲೆ ಹಾಕಿದ ಬ್ಯಾಟರ್ ಎನಿಸಿಕೊಂಡರು.
Oldest to score 50-plus in T20 AC after turning 40
43y 330d - Amir Kaleem (50*) vs IND, Abu Dhabi, 2025*
40y 260d - Mohammad Nabi (60) vs SL, Abu Dhabi, 2025
39y 142d - T Dilshan (75*) vs PAK, Mirpur, 2016
Advertisement