
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ಅಮೋಘ ಜಯ ದಾಖಲಿಸಿದ ಭಾರತ ಹಲವು ದಾಖಲೆಗಳಿಗೂ ಸಾಕ್ಷಿಯಾಗಿದೆ.
ಹೌದು.. ಭಾನುವಾರ ರಾತ್ರಿ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು. ಈ ಪಂದ್ಯದಲ್ಲಿ ಅಭಿಶೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೊತೆಯಾಟ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಈ ಪಂದ್ಯದಲ್ಲಿ ಭಾರತದ ಪರ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ ಶುಭ್ ಮನ್ ಗಿಲ್ 28 ಎಸೆತಗಳಲ್ಲಿ 8 ಬೌಂಡರಿ ಸಹಿತ 47 ರನ್ ಸಿಡಿಸಿ ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಅಂತೆಯೇ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 74 ರನ್ ಸಿಡಿಸಿ ಅಬ್ರಾರ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರು.
ಭಾರತದ ಪರ ಈ ಜೋಡಿ ಮೊದಲ ವಿಕೆಟ್ ಗೆ ಈ ಜೋಡಿ 105ರನ್ ಪೇರಿಸಿ ಭಾರತದ ಗೆಲುವು ಸುಲಭವಾಗಿಸಿದರು.
ದಾಖಲೆ ಬರೆದ ಗಿಲ್-ಅಭಿಶೇಕ್ ಶರ್ಮಾ ಜೊತೆಯಾಟ
ಇನ್ನು ಇಂದಿನ ಗಿಲ್-ಅಭಿಶೇಕ್ ಶರ್ಮಾ ಜೊತೆಯಾಟ ಹಾಲಿ ಟೂರ್ನಿಯ ಹೊಸ ದಾಖಲೆ ಬರೆದಿದ್ದು, ಇದು ಹಾಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆರಂಭಿಕ ಜೋಡಿಯ ಮೊದಲ ಶತಕದ ಜೊತೆಯಾಟವಾಗಿದೆ. ಅಂತೆಯೇ ಇದು ಪಾಕಿಸ್ತಾನ ವಿರುದ್ದ ಟಿ20 ಪಂದ್ಯದಲ್ಲಿ ದಾಖಲಾದ ಆರಂಭಿಕ ಜೋಡಿಯ ಗರಿಷ್ಛ ಜೊತೆಯಾಟ ಕೂಡ ಆಗಿದೆ. ಈ ಹಿಂದೆ ಅಂದರೆ 2012ರಲ್ಲಿ ಭಾರತದ ಅಜಿಂಕ್ಯ ರಹಾನೆ ಮತ್ತು ಗೌತಮ್ ಗಂಭೀರ್ ಜೋಡಿ 77 ರನ್ ಕಲೆಹಾಕಿದ್ದು ಈ ವರೆಗಿನ ಆರಂಭಿಕ ಜೋಡಿಯ ಗರಿಷ್ಠ ರನ್ ಜೊತೆಯಾಟವಾಗಿತ್ತು.
STAT: First 100+ partnership for any wicket in Asia Cup 2025 for any team. Highest opening partnership for India against Pakistan going past 77 bw Gambhir & Rahane in Bengaluru in 2012
ಪವರ್ ಪ್ಲೇ ನಲ್ಲಿ ಗರಿಷ್ಠ ರನ್
ಅಂತೆಯೇ ಇಂದು ಭಾರತ ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಸಾಧನೆ ಮಾಡಿತು. ಈ ಹಿಂದೆ ಇದೇ ಪಾಕಿಸ್ತಾನ ವಿರುದ್ಧ ಪವರ್ ಪ್ಲೇ ನಲ್ಲಿ 2 ವಿಕೆಟ್ ನಷ್ಟಕ್ಕೆ 61 ರನ್ ಕಲೆ ಹಾಕಿದ್ದ ಭಾರತ ಇಂದು ವಿಕೆಟ್ ನಷ್ಟವಿಲ್ಲದೇ ಪವರ್ ಪ್ಲೇನಲ್ಲಿ 69 ರನ್ ಕಲೆಹಾಕಿತು. ಅಂತೆಯೇ ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಬಂದ ಗರಿಷ್ಛ ಸರಾಸರಿ (11.11)ಯಾಗಿದೆ.
Powerplay totals for India in Asia Cup 2025
60/1(4.3) vs UAE
61/2 vs Pak
60/1 vs Oman
69/0 vs Pak
India have scored at 11.11/over in Powerplay this competition, far ahead of the second placed Bangladesh's 8.29.
Advertisement