
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್ ಮಾತ್ರವಲ್ಲದೇ ಕ್ರಿಕೇಟತರ ವಿಚಾರಗಳಿಗೂ ವ್ಯಾಪಕ ಸುದ್ದಿಯಾಗುತ್ತಿದೆ.
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು. ಆದರೆ ಈ ಪಂದ್ಯ ಕ್ರಿಕೆಟ್ ಗಿಂತ ಹೆಚ್ಚು ಪಾಕಿಸ್ತಾನಿ ಆಟಗಾರರ ವರ್ತನೆಯಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.
ಗನ್ ಫೈರ್ ಸಂಭ್ರಮ
ಒಂದೆಡೆ ಪಾಕ್ ಪರ ಉತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ ಫರ್ಹಾನ್, ಗನ್ ಫೈರ್ ಸಂಭ್ರಮ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭಾರತ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕ ಸಿಡಿಸುತ್ತಲೇ ತನ್ನ ಬ್ಯಾಟ್ ಅನ್ನೇ ಗನ್ ರೀತಿಯಲ್ಲಿ ತೋರಿಸಿ 'Gun-Firing' Celebration ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಫರ್ಹಾನ್ ರ ಈ ಗನ್ ಫೈರ್ ಸಂಭ್ರಮ ಪಾಕಿಸ್ತಾನದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯನ್ನು ಅಣಕಿಸುವಂತಿತ್ತು. ಅಂದು ರಣಾಂಗಣದಲ್ಲಿ ಪೆಟ್ಟು ತಿಂದಿದ್ದ ಪಾಕಿಸ್ತಾನ ಇಂದು ಮೈದಾನದಲ್ಲಿ ಇಂತಹ ವರ್ತನೆಗಳ ಮೂಲಕ ಭಾರತ ಮತ್ತು ಭಾರತೀಯ ಆಟಗಾರರನ್ನು ಕೆಣಕುವ ಕೆಲಸ ಮಾಡಿದೆ.
ಹ್ಯಾರಿಸ್ ರೌಫ್ ರಫೆಲ್ ಅಣಕ
ಮತ್ತೊಂದೆಡೆ ಪಾಕಿಸ್ತಾದ ಮತ್ತೋರ್ವ ವೇಗಿ ಹ್ಯಾರಿಸ್ ರೌಫ್ ಕೂಡ ಇಂತದ್ದೇ ಉದ್ಧಟತನ ತೋರಿದ್ದು, ಈ ಹಿಂದೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತದ ರಫೆಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಇದೀಗ ಅದೇ ಅಣಕವನ್ನು ಪಾಕ್ ಕ್ರಿಕೆಚಿಗ ಹ್ಯಾರಿಸ್ ರೌಫ್ ಮಾಡಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ವೇಳೆ ಬೌಂಡರಿ ಬಳಿ ನಿಂತಿದ್ದ ಹ್ಯಾರಿಸ್ ರೌಫ್, ಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ರಫೆಲ್ ಯುದ್ಧ ವಿಮಾನ ಬಿತ್ತು ಎನ್ನುವ ಅರ್ಥದಲ್ಲಿ ಕೈ ಸನ್ನೆ ಮಾಡಿ ತೋರಿಸಿದ್ದಾರೆ. ಅವರ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
6-0 ಅಣಕ
ರಫೆಲ್ ಮಾತ್ರವಲ್ಲದೇ ಹ್ಯಾರಿಸ್ ರೌಫ್ ಭಾರತೀಯ ಸೇನೆಯ 6 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗೆ ಅಣಕ ಮಾಡಿ ತೋರಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Advertisement